ಬಿಜೂರು ವಿಶೇಷ ಗ್ರಾಮ ಸಭೆ, ವಸತಿ ಯೋಜನೆಗೆ ಫಲಾನುಭವಿಗಳ ಆಯ್ಕೆ

0
516

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಉಪ್ಪುಂದ : ಬಿಜೂರು ಗ್ರಾ.ಪಂ.ನ ವಿಶೇಷ ವಸತಿ ಯೋಜನೆಯ ಫಲಾನುಭವಿಗಳ ಆಯ್ಕೆಯ ವಿಶೇಷ ಗ್ರಾಮ ಸಭೆ ಕಂಚಿಕಾನ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾ.6ರಂದು ನಡೆಯಿತು.

ಗ್ರಾ.ಪಂ.ಅಧ್ಯಕ್ಷ ರಮೇಶ ವಿ. ದೇವಾಡಿಗ ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮಸ್ಥರ ಸಲಹೆ ಸೂಚನೆಗಳಂತೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು ಎಂದರು.

ಗೋಡೆ ಕಟ್ಟಿದರೆ ಆಯ್ಕೆ ಇಲ್ಲ : ಎರಡು ಮೂರು ವರ್ಷಗಳ ಹಿಂದೆ ಮನೆಗಾಗಿ ಅರ್ಜಿ ಸಲ್ಲಿಸಿದವರು ಗೋಡೆಗಳನ್ನು ನಿರ್ಮಾಣ ಮಾಡಿದರೆ ಇವರಿಗೆ ಈ ಯೋಜನೆಯಡಿ ಮನೆಗಳನ್ನು ನೀಡಲು ಸಾಧ್ಯವಿಲ್ಲ ಎಂದು ಸಭೆಗೆ ತಿಳಿಸಿದಾಗ ಅರ್ಜಿ ಕೊಟ್ಟವರು ಆಕ್ರೋಶ ವ್ಯಕ್ತಪಡಿಸಿದರು. ಸದಸ್ಯ ವಿರೇಂದ್ರ ಶೆಟ್ಟಿ ಮಾತನಾಡಿ ನೂತನ ನಿಯಮಗಳಂತೆ ನಾವು ಆಯ್ಕೆ ಮಾಡಬೇಕಾದ ಅನಿವಾರ್ಯತೆ ಇದೆ. ಗೋಡೆಗಳನ್ನು ಕಟ್ಟಿದವರನ್ನು ಆಯ್ಕೆ ಮಾಡಿದರು ಸಹ ಅದು ತಾಂತ್ರಿಕವಾಗಿ ಅನರ್ಹಗೊಳ್ಳುತ್ತದೆ ಇದರಿಂದ ನಿಮಗೂ ಸಿಗುವುದಿಲ್ಲ ಜೊತೆಗೆ ಬೇರೆಯವರಿಗೂ ಮನೆ ಇಲ್ಲದಂತಾಗುತ್ತದೆ ಆದರಿಂದ ಗ್ರಾಮಸ್ಥರು ಸಹಕರಿಸಬೇಕು ಎಂದರು.

ಜಿ.ಪಂ.ಸದಸ್ಯೆ ಗೌರಿ ದೇವಾಡಿಗ ಮಾತನಾಡಿ ಮೂರು ವರ್ಷಗಳಿಂದ ಆಶ್ರಯ ಯೋಜನೆಯ ಮನೆಗಳು ಬಾರದೇ ಇರುವುದರಿಂದ ಜನರಿಗೆ ಸಮಸ್ಯೆಯಾಗಿದೆ. ಫಲಾನುಭವಿಗಳ ಸಂಖ್ಯೆ ಹೆಚ್ಚಳವಾಗಿರುವುದರಿಂದ ಗೊಂದಲ ಉಂಟಾಗುತ್ತಿದೆ. ಗ್ರಾ.ಪಂ.ಸದಸ್ಯರು ಹಾಗೂ ಸ್ಥಳೀಯಾಡಳಿತವನ್ನು ಜನರು ದೂರುವಂತಾಗಿದೆ ಸಮಸ್ಯೆ ನಿವಾರಣೆಗೆ ಶಾಸಕರು ಗಮನ ಹರಿಸಬೇಕು ಎಂದರು.

ಹಿಂದಿನ ನಿಯಮ ಇರಲ್ಲಿ : ಮಾಜಿ ಸದಸ್ಯ ಬಿಜೂರು ಜಯರಾಮ ಶೆಟ್ಟಿ ಮಾತನಾಡಿ ಆಶ್ರಯ ಯೋಜನೆಯ ಮನೆಗಳ ಆಯ್ಕೆ ಪ್ರಕಿಯೆಗೆ ಹಿಂದಿನ ನಿಯಮಗಳು ಸರಿಯಾಗಿದೆ. ಈಗೀನ ಗ್ರಾಮ ಸಭೆ ಮೂಲಕ ಆಯ್ಕೆ ಮಾಡುವ ನಿಯಮಗಳಿಂದ ಅರ್ಹ ಫಲಾನುಭವಿಗಳ ಆಯ್ಕೆ ಮಾಡಲು ಗೊಂದಲಗಳು ಸೃಷ್ಠಿಯಾಗುತ್ತಿವೆ ಆದರಿಂದ ಹಿಂದಿನ ನಿಯಮಗಳನ್ನು ಮರು ಜಾರಿಗೊಳಿಸಬೇಕು ಆಗ್ರಹಿಸಿದರು.

ಈ ಸಂದರ್ಭ ತಾ.ಪಂ.ಸದಸ್ಯರಾದ ಜಗದೀಶ ದೇವಾಡಿಗ, ಅಭಿವೃದ್ಧಿ ಅ„ಕಾರಿ ಸತೀಶ ತೋಳಾರ್, ನೋಡಲ್ ಅ„ಕಾರಿ ಗಾಯತ್ರಿ, ಉಪಾಧ್ಯಕ್ಷೆ ಶ್ರೀಮತಿ ಶೆಟ್ಟಿ, ಸದಸ್ಯರಾದ ವಿರೇಂದ್ರ ಶೆಟ್ಟಿ, ರಾಜೇಂದ್ರ ಬಿಜೂರು, ರಂಜಿತ್, ರಾಘವೇಂದ್ರ ಗಾಣಿಗ, ರಾಘವೇಂದ್ರ ದೇವಾಡಿಗ, ಅಶೋಕ ಪೂಜಾರಿ, ಲೋಲಾಕ್ಷಿ ದೇವಾಡಿಗ, ಶಾಂತ ದೇವಾಡಿಗ, ಸರೋಜ ದೇವಾಡಿಗ, ಸೀತಾ ಪೂಜಾರಿ, ರೇವತಿ ಶೆಟ್ಟಿ, ಚೆನಮ್ಮ ಉಪಸ್ಥಿತರಿದ್ದರು.

ಅಭಿವೃದ್ಧಿ ಅಧಿಕಾರಿ ಸತೀಶ ತೋಳಾರ್ ಸ್ವಾಗತಿಸಿದರು. ಕಾರ್ಯದರ್ಶಿ ನಾಗರಾಜ ದೇವಾಡಿಗ ನಿಯಮಾವಳಿಗಳನ್ನು ವಾಚಿಸಿದರು. ಸಿಬಂದಿ ಗೀರೀಶ ವಂದಿಸಿದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)