ಮಾರ್ಚ 13ರಂದು ಬೈಂದೂರು ಚಂದ್ರಶೇಖರ ನಾವಡರ ಕೃತಿ ಬಿಡುಗಡೆ

0
526

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಕಳೆದ ಸುಮಾರು ಒಂದು ದಶಕದಿಂದ ರಕ್ಷಣೆ, ಪ್ರಚಲಿತ ವಿದ್ಯಮಾನ, ಕಲೆ-ಸಾಂಸಕೃತಿಕ ಅಂಕಣ ಬರಹಗಳಿಂದ ಪರಿಚಿತರಾಗಿರುವ ಮಾಜಿ ಸೈನಿಕ ಬೈಂದೂರು ಚಂದ್ರಶೇಖರ ನಾವಡರ ಸೈನಿಕ ಜೀವನಾನುಭವದ ` ಸೇನಾನುಭವ ’ ಕೃತಿ ಬಿಡುಗಡೆ ಸಮಾರಂಭವು ಮಾರ್ಚ 13 ರಂದು ಉಡುಪಿಯ ಹಾಸ್ಯಪ್ರಿಯರ ಮತ್ತು ಲೇಖಕರ ಸಂಘಟನೆ ಸುಹಾಸಂ ಆಶ್ರಯದಲ್ಲಿ ಕಿದಿಯೂರು ಹೋಟೇಲಿನ ಪವನ್ ರೂಫ್ ಟಾಪ್ ನಲ್ಲಿ ಸಂಜೆ ಗಂಟೆ 4ಕ್ಕೆ ನಡೆಯಲಿದೆ. ಜಮ್ಮು ಕಾಶ್ಮೀರ-ಪಂಜಾಬ್ ಗಡಿ ಪ್ರದೇಶಗಳಲ್ಲಿ ನಿಯೋಜಿತ ಸೇನೆಯ ವಿವಿಧ ಬಟಾಲಿಯನ್‍ಗಳಲ್ಲೂ, ಆರ್ಟಿಲರಿ ಸೆಂಟರ್ ಹೈದರಾಬಾದ್, ಆರ್ಮಿ ಎಜುಕೇಶನಲ್ ಕೋರ್ ಟ್ರೈನಿಂಗ್ ಕಾಲೇಜು ಪಚಮಢಿ (ಮ. ಪ್ರ ) ಸಹಿತ ಪ್ರತಿಷ್ಠಿತ ತರಬೇತಿ ಸಂಸ್ಥೆಗಳಲ್ಲಿ ಬೋಧಕರಾಗಿಯೂ ಮತ್ತು ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿಯೂ ಭಾಗಿಯಾಗಿ ಸುಮಾರು 22 ವರ್ಷ ಸೇವೆ ಸಲ್ಲಿಸಿದ ಅನುಭವವನ್ನು ಒಳಗೊಂಡ ಕೃತಿಯನ್ನು ಹಿರಿಯ ಸಾಹಿತಿ ಡಾಕ್ಟರ್ ನಾ ಮೊಗಸಾಲೆಯವರು ಬಿಡುಗಡೆ ಮಾಡಲಿರುವರು.

ಸಾಹಿತಿ, ವಿಮರ್ಶಕ ಬೆಳಗೋಡು ರಮೇಶ ಭಟ್ ಅವರ ಮುನ್ನುಡಿಯನ್ನೊಳಗೊಂಡ ಕೃತಿಯನ್ನು ಬೆಂಗಳೂರಿನ ಜಾಗೃತಿ ಪ್ರಿಂಟರ್ಸ್ ಹೊರತಂದಿರುತ್ತಾರೆ. ಕೃತಿಯ ಕುರಿತು ಸಾಲಿಗ್ರಾಮದ ಲೇಖಕರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಪ್ರೊ. ಚಿತ್ರಪಾಡಿ ಉಪೇಂದ್ರ ಸೋಮಯಾಜಿಯವರು ಮಾತನಾಡಲಿರುವರು. ಸುಹಾಸಂನ ಅಧ್ಯಕ್ಷ ಶ್ರೀ ಶಾಂತರಾಜ ಐತಾಳರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕುಂದಪ್ರಭದ ಸಂಪಾದಕ ಶ್ರೀ ಯು ಎಸ್ ಶೆಣೈ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು. ಸಾಹಿತ್ಯಾಸಕ್ತರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿರುವಂತೆ ಸುಹಾಸಂ ನ ಕಾರ್ಯದರ್ಶಿ ಎಚ್ ಗೋಪಾಲ ಭಟ್ ಮತ್ತು ಪದಾಧಿಕಾರಿಗಳು ಕೋರಿದ್ದಾರೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)