ಬೈಂದೂರು ತಾಲೂಕು ಶಾಲಾ ಸಂಚಲನ ವಿಶೇಷ ಕಾರ್ಯಕ್ರಮ

0
362

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)
ಪ್ರೌಢ ಶಾಲೆಗಳಿಗೆ ಬಿಇಓ ತಂಡ ಭೇಟಿ, ಮಾರ್ಗದರ್ಶನ

ಉಪ್ಪುಂದ : ಪ್ರೌಢ ಶಾಲೆಗಳಲ್ಲಿನ ಶಿಕ್ಷಕರ ಬೋಧನೆ, ಮಕ್ಕಳ ಕಲಿಕೆಗಳ ಬಗ್ಗೆ ಸೂಕ್ಮವಾಗಿ ಗಮನಿಸುವ ಸಲುವಾಗಿ ಉಡುಪಿ ಡಿಡಿಪಿಐ ಎನ್.ಎಚ್.ನಾಗೂರ ಅವರ ಒಂದು ವಿಶೇಷ ಆದೋಲನವಾಗಿ ಶಾಲಾ ಸಂಚಲನ ಕಾರ್ಯಕ್ರಮ ಬÉೈಂದೂರು ತಾಲೂಕಿನಲ್ಲಿ ನಡೆಯಿತು.

ಜಿಲ್ಲೆಯ ಎಲ್ಲ ತಾಲೂಕಿನ ಬಿಇಓಗಳು ಸೇರಿ 7 ತಂಡಗಳನ್ನು ರಚಿಸಿಕೊಂಡು (ಒಂದು ತಂಡದಲ್ಲಿ 4 ಜನ ಅ„ಕಾರಿಗಳು ) ಪ್ರೌಢ ಶಾಲೆಗಳಿಗೆ ತೆರಳಿ ಅಲ್ಲಿನ ಶಿಕ್ಷಣದ ವ್ಯವಸ್ಥೆ ಹಾಗೂ ಇತರೆ ಸೌಲಭ್ಯಗಳ ಬಗ್ಗೆ ವರದಿ ಸಿದ್ಧಪಡಿಸುವ ವಿನೂತನ ಕಾರ್ಯಕ್ರಮ ನಡೆಯಿತು.

ಈ ಸಂದರ್ಭ ಹತ್ತನೇ ತರಗತಿಯ ವಿದ್ಯಾರ್ಥಿಗಳ ಶಿಕ್ಷಣ ಹಾಗೂ ಅಂತಿಮ ಪರೀಕ್ಷೆಯ ಸಿದ್ಧತೆಯ ಕುರಿತು ಮಾರ್ಗದರ್ಶನ ಮಾಡಲಾಯಿತು. ಎಸ್‍ಎಸ್‍ಎಲ್‍ಸಿ ಅಂತಿಮ ಪರೀಕ್ಷೆಯಲ್ಲಿ ಕಳೆದ ಭಾರೀಗಿಂತ ಹೆಚ್ಚು ವಿದ್ಯಾರ್ಥಿಗಳನ್ನು ತೆರ್ಗೆಡೆ ಹೊಂದುವಂತೆ ಮಾಡಲು ಸೂಕ್ತ ತರಬೇತಿ, ಸಿದ್ಧತೆ ಬಗ್ಗೆ ಶಿಕ್ಷಕರಿಗೆ ಮಾಹಿತಿ ನೀಡಲಾಯಿತು.

ರ ತಾಲೂಕಿನ ಎಲ್ಲ 33 ಪ್ರೌಢ ಶಾಲೆಗಳಿಗೆ ಅ„ಕಾರಿಗಳ ತಂಡ ಭೇಟಿ ನೀಡಿ ಶಾಲೆಯಲ್ಲಿನ ಶಿಕ್ಷಕರ ಬೋಧನೆ, ಮುಖ್ಯಶಿಕ್ಷಕರ ಮೇಲ್ವಿಚಾರಣೆ, ಮಕ್ಕಳ ಕಲಿಕೆ, ಶಾಲೆಯ ಮೂಲಭೂತ ಸೌಲಭ್ಯಗಳ ಪರಿಶೀಲನೆ ನಡೆಸಿ ಒಂದು ಸಮಗ್ರ ವರದಿ ತಯಾರಿಸಲಾಯಿತು.

ಒಂದೊಂದು ತಂಡವು 4-5ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)