ಸಿದ್ದ ಸಮಾಧಿ ಯೋಗದ ಬೈಂದೂರು ವಲಯದ ಧ್ಯಾನಿಗಳಿಂದ ಕೊಲ್ಲೂರಿಗೆ ಪಾದಯಾತ್ರೆ

0
888

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (7) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಪರಮಪೂಜ್ಯ ಯೋಗಬೃಹ್ಮ ಶ್ರೀ ಋಷಿ ಪ್ರಭಾಕರ ಗುರೂಜಿಯವರ ಆಶೀರ್ವಾದದೊಂದಿಗೆ, ಯೋಗ ಶಿಕ್ಷಕರಾದ ಆಚಾರ್ಯ ಎಮ್ ಗೋಪಾಲಕೃಷ್ಣ ಭಟ್ ಗುರೂಜಿ ಶಿವಮೊಗ್ಗ ಮತ್ತು ಆಚಾರ್ಯ ಕೇಶವ ಗುರೂಜಿ ಬೆಳ್ನಿ ಇವರ ಮಾರ್ಗದರ್ಶನದಲ್ಲಿ ಸಿದ್ದ ಸಮಾಧಿ ಯೋಗದ ಬೈಂದೂರು ವಲಯದ ಧ್ಯಾನಿಗಳಿಂದ ಕೊಲ್ಲೂರು ಪಾದಯಾತ್ರೆ ಬಹಳ ವಿಜೃಂಭಣೆಯಿಂದ ನಡೆಯಿತು.

ರವಿವಾರ ಬೆಳಿಗ್ಗೆ 6 ಗಂಟೆಗೆ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಿಗೆ ಅರ್ಚಕರು ಅರ್ಚನೆ ಮಂಗಳಾರತಿ ಮಾಡುವುದರೊಂದಿಗೆ ಪಾದಯಾತ್ರೆಗೆ ಚಾಲನೆ ನೀಡಿದರು. ದಾರಿ ಮಧ್ಯದಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ B.M.ಸುಕುಮಾರ್ ಶೆಟ್ಟಿಯವರು ಪಾದಯಾತ್ರಿಗಳನ್ನು ತುಂಬಾ ಆಪ್ಯಾಯಮಾನವಾಗಿ ಸ್ವಾಗತಿಸಿದರು. ಅಲ್ಲದೆ ಪಾದಯಾತ್ರೆಗೆ ಸಾಥ್ ನೀಡಿದರು.

ಬೆಳಿಗ್ಗೆ 9ಗಂಟೆಗೆ ಗೋಳಿಹೊಳೆ ಬಿಳಿಶಿಲೆ ವಿನಾಯಕ ದೇವಸ್ಥಾನದಲ್ಲಿ ಭಜನೆ ಸಂಕೀರ್ತನೆಗಳು ನಡೆದೆವು. ಅಲ್ಲಿಯೇ ಯಾತ್ರಿಗಳು ಬೆಳಿಗ್ಗೆಯ ಉಪಹಾರವನ್ನು ಮುಗಿಸಿ ಮತ್ತೆ ಭಜನೆ ಸಂಕೀರ್ತನೆಗಳ ಮೂಲಕ ಯಾತ್ರೆ ಮುಂದುವರೆಸಿದರು. ಮದ್ಯಾಹ್ನ 12:30 ಹೊತ್ತಿಗೆ ಹಾಲ್ಕಲ್ ನಲ್ಲಿರುವ ಸೌಪರ್ಣಿಕಾ ನದಿ ತಟದಲ್ಲಿ ವಿಶ್ರಮಿಸಿದರು. ಅಲ್ಲಿಯೂ ಕೂಡ ಗುರೂಜಿಯವರ ಮಾರ್ಗದರ್ಶನದಲ್ಲಿ ಭಜನೆ ಸಂಕೀರ್ತನೆ ಸತ್ಸಂಗಗಳು ನಡೆದೆವು.

ಪಾದಯಾತ್ರೆಯಲ್ಲಿ ಪಾಲ್ಗೊಂಡ ಇನ್ನೊಬ್ಬ ಆಚಾರ್ಯ ರಿಪ್ಪನ್ ಪೇಟೆಯ ಅಶೋಕ್ ಗುರೂಜಿಯವರ 7ತಿಂಗಳ ಪಾದಯಾತ್ರೆ ಅನುಭವ ಅಲ್ಲಿ ನೆರೆದಿದ್ದವರನ್ನು ಮೂಕವಿಸ್ಮತರನ್ನಾಗಿ ಮಾಡಿತು. ಇವರು ಕನ್ಯಾಕುಮಾರಿಯಿಂದ ಕಾಶ್ಮೀರದ ತನಕ ಸುಮಾರು 2400 ಕಿಲೋ ಮೀಟರ್ ಪಾದಯಾತ್ರೆ ಮಾಡಿರುತ್ತಾರೆ. ಮಧ್ಯಾಹ್ನದ ಊಟ ಪ್ರಸಾದ ಅಲ್ಲಿಯೇ ಮುಗಿಸಿ ವಿಶ್ರಾಂತಿ ಪಡೆದು ಮತ್ತೆ 4ಗಂಟೆಗೆ ಪಾದಯಾತ್ರೆ ಮುಂದುವರೆಯಿತು. ಸಂಜೆ 6ಗಂಟೆಗೆ ಕೊಲ್ಲೂರು ತಲುಪಿ ಸೌಪರ್ಣಿಕಾ ನದಿಯಲ್ಲಿ ಸ್ನಾನಾದಿಗಳನ್ನು ಮುಗಿಸಿ ಮೂಕಾಂಬಿಕೆಯ ದರ್ಶನ ಪಡೆದು ಕೃತಾರ್ಥರಾದರು. ಅಲ್ಲಿಯೂ ಕೂಡ ದೇವಸ್ಥಾನದ ಆಡಳಿತ ಮಂಡಳಿಯು ಸುಮಾರು ಒಂದುವರೆ ಗಂಟೆಯ ಕಾಲ ಭಜನೆ ಸಂಕೀರ್ತನೆ ಸತ್ಸಂಗಕ್ಕೆ ದೇವಸ್ಥಾನದ ಆವರಣದಲ್ಲಿ ಅವಕಾಶ ಮಾಡಿಕೊಟ್ಟರು.

ಅಲ್ಲದೆ ಮೂರು ಗುರುಗಳನ್ನು ದೇವಸ್ಥಾನದ ಆಡಳಿತ ಮಂಡಳಿಯಿಂದ ಸ್ವಾಗತಿಸಲಾಯಿತು. ರಾತ್ರಿ ಶ್ರೀ ಮೂಕಾಂಬಿಕೆಯ ಪ್ರಸಾದ ಸ್ವೀಕರಿಸಿದ ಪಾದಯಾತ್ರಿಕರು ಅಲ್ಲಿಂದ ಬಸ್ಸಿನಲ್ಲಿ ವಾಪಾಸಾದರು. ಪಾದಯಾತ್ರಿಗಳ ಬೆಳಿಗ್ಗೆ ಉಪಹಾರ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಶ್ರೀಗಣೇಶ ಗಾಣಿಗ ಉಪ್ಪುಂದ ಇವರು ವಹಿಸಿಕೊಂಡು ಕೃತಾರ್ಥರಾದರು.

ಉಚಿತ ಬಸ್ ಸೇವೆ SVMS ಮಾಲಿಕರಾದ ಶಿವಾನಂದ ಗಾಣಿಗ ವಹಿಸಿದ್ದರು. ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ಪ್ರದೀಪ್ ಕುಮಾರ್ ಶೆಟ್ಟಿ ಕಾರಿಕಟ್ಟೆ ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ಪೋಲಿಸ್ ಇಲಾಖೆಯ ಪರವಾಗಿ ಬಂದಿದ್ದ G.ಸುಬ್ರಮಣ್ಯ ಅವರು ದಾರಿ ಮಧ್ಯದಲ್ಲಿ ಊಟೋಪಚಾರ ವಿತರಿಸುವ ಸೇವೆಗೈದರು. ಆರೋಗ್ಯ ಇಲಾಖೆಯ ಪರವಾಗಿ ರಾಘವೇಂದ್ರ ಹೊಳ್ಳ ಪಾದಯಾತ್ರೆಯಲ್ಲಿ ಪಾಲ್ಗೊಂಡು ಸಾಥ್ ನೀಡಿದರು. ಹರಿಶ್ಚಂದ್ರ ಆಚಾರ್ಯ ಅರೆಹೊಳೆ, ಸತೀಶ್ ಕೊಠಾರಿ ನಾಯ್ಕನಕಟ್ಟೆ, ಗೋವರ್ಧನ ಆಚಾರ್ಯ ಬೈಂದೂರು, ವೀರೇಶ್ ಖಾರ್ವಿ ಉಪ್ಪುಂದ, ರಾಜು ಪೂಜಾರಿ ಸೇರಿದಂತೆ150ಕ್ಕೂ ಅಧಿಕ ಭಕ್ತರು ಪಾದಯಾತ್ರೆಯ ಅನುಭವ ಪಡೆದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (7) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)