ಜೆಸಿಐ ಉಪ್ಪುಂದದ ಸಹಯೋಗದೊಂದಿಗೆ ಕೃಷಿ ಡಿಪ್ಲೋಮಾ ವಿದ್ಯಾರ್ಥಿಗಳ ಅಧ್ಯಯನ ಪ್ರವಾಸ

0
804

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಕೃಷಿ ಡಿಪ್ಲೋಮಾ ಕಾಲೇಜ್ ಬ್ರಹ್ಮಾವರ ಇಲ್ಲಿಯ ವಿದ್ಯಾರ್ಥಿಗಳು ಕೃಷಿ ಕೇಂದ್ರ ಬ್ರಹ್ಮಾವರ ಹಾಗೂ ಜೆಸಿಐ ಉಪ್ಪುಂದದ ಸಹಯೋಗದೊಂದಿಗೆ ನಂದನವನದ ನ್ಯೂ ವಿನಾಯಕ ಗೇರು ಬೀಜ ಸಂಸ್ಕರಣ ಘಟಕಕ್ಕೆ ಅಧ್ಯಯನ ಪ್ರವಾಸ ಕೈಗೊಂಡರು ಈ ಸಂದರ್ಭದಲ್ಲಿ ಜೆಸಿಐ ಉಪ್ಪುಂದದ ಸದಸ್ಯರ ಜೊತೆಗೂಡಿ ಕೃಷಿ ಉತ್ಪನ್ನ ಕೈಗಾರಿಕೆಗಳಲ್ಲಿ ಒಂದಾದ ಗೇರು ಬೀಜ ಸಂಸ್ಕರಣ ಘಟಕ ಕಾರ್ಯನಿರ್ವಹಿಸುವ ರೀತಿ, ಹಾಗೂ ಕಚ್ಚಾವಸ್ತುಗಳನ್ನು ಮೌಲ್ಯವರ್ಧನೆ ಮಾಡುವ ಹಂತಗಳ ಬಗ್ಗೆ ಕುಲಂಕುಶವಾಗಿ ಅಧ್ಯಯನವನ್ನು ವಿದ್ಯಾರ್ಥಿಗಳಿಗೆ ಪೂರ್ವಾಧ್ಯಕ್ಷರಾದ ಪ್ರಕಾಶ್ ಭಟ್ ನಡೆಸಿಕೊಟ್ಟರು.

34 ವಿದ್ಯಾರ್ಥಿಗಳು ಮತ್ತು 5 ಜನರ ಶಿಕ್ಷಕರನ್ನು ಒಳಗೊಂಡ ತಂಡದ ಜೊತೆಗೆ ಗೇರುಬೀಜ ಕಾರ್ಖಾನೆಯ ಮಾಲೀಕರಾದ ರಾಜೀವಭಟ್ ದಂಪತಿಗಳು.. ಜೆಸಿಐ ಉಪ್ಪುಂದದ ಅಧ್ಯಕ್ಷರಾದ ಪುರುಷೋತ್ತಮ್ ದಾಸ್,ಜೆಸಿಐ ವಲಯ 15ರ ಉಪಾಧ್ಯಕ್ಷರಾದ ದೇವರಾಯ ದೇವಾಡಿಗ, ಪೂರ್ವಾಧ್ಯಕ್ಷರಾದ ಪ್ರಕಾಶಭಟ್ &ಪುರಂದರ್ ಖಾರ್ವಿ ಜೇಸಿ.ವಿಜಯ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)