ಜೇಸಿಐ ಬೈಂದೂರು ಸಿಟಿ ಘಟಕದ ವತಿಯಿಂದ ಪವರ್‍ಮನ್ ಸಲಿಮ್ ಅವರಿಗೆ ಸನ್ಮಾನ

0
576

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು  : ಜೇಸಿಐ ಬೈಂದೂರು ಸಿಟಿ ಘಟಕದ ವತಿಯಿಂದ ಸೆಲ್ಯೂಟ್ ದ ಸೈಲೆಂಟ್ ವರ್ಕರ್ ಎಂಬ ಕಾರ್ಯಕ್ರಮದಡಿಯಲ್ಲಿ ಸಮಾಜದ ಎಲೆಮರೆ ಕಾಯಿಯಂತೆ ಇದ್ದು ತಮ್ಮದೇ ಆದ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವವರನ್ನು ಗುರುತಿಸುವ ನಿಟ್ಟಿನಲ್ಲಿ ಮೆಸ್ಕಾಂನ ಬೈಂದೂರು ಶಾಖೆಯ ಪವರ್‍ಮನ್ ಸಲಿಮ್ ಅವರು ಕಳೆದ ಐದು ವರ್ಷಗಳಿಂದ ಪ್ರಾಮಾಣಿಕ ಹಾಗೂ ಜವಾಬ್ದಾರಿಯುತ ಸೇವೆಯನ್ನು ಪರಿಗಣಿಸಿ ಬುಧವಾರ ಸಂಜೆ ಬೈಂದೂರು ಮೆಸ್ಕಾಂ ಪವರ್‍ಮನ್ ಕಛೇರಿಯಲ್ಲಿ ಗೌರವಿಸಿ ಸನ್ಮಾನಿಸಲಾಯಿತು.

ಜೇಸಿಐ ಬೈಂದೂರು ಸಿಟಿಯ ಅಧ್ಯಕ್ಷ ಜೇಸಿ ಎಚ್‍ಜಿಎಫ್ ಶ್ರೀಧರ ಆಚಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಬೈಂದೂರು ಮೆಸ್ಕಾಂನ ಸಹಾಯಕ ಅಸಿಸ್ಟೆಂಟ್ ಶಶಿರಾಜ್, ಜೇಸಿಐ ಬೈಂದೂರು ಸಿಟಿಯ ವಲಯಾಧಿಕಾರಿ ಜೇಸಿ ಎಚ್‍ಜಿಎಫ್ ಮಣಿಕಂಠ ಎಸ್, ಜೇಸಿಐ ಬೈಂದೂರು ಸಿಟಿಯ ಉಪಾಧ್ಯಕ್ಷೆ ಜೇಸಿ ಎಚ್‍ಜಿಎಫ್ ಸೌಮ್ಯ ಬಿ, ಜೇಸಿಐ ಬೈಂದೂರು ಸಿಟಿಯ ಜೇಸಿರೆಟ್ ವಿಭಾಗದ ನಿಕಟಪೂವಾಧ್ಯಕ್ಷೆ ಜೇಸಿರೆಟ್ ಭಾನುಮತಿ ಬಿ.ಕೆ, ಘಟಕದ ಕೋಶಾಧಿಕಾರಿ ಜೇಸಿ ಎಚ್‍ಜಿಎಫ್ ಪ್ರೇಮಾ ವಿ ಶೆಟ್ಟಿ, ಘಟಕದ ಜೊತೆ ಕಾರ್ಯದರ್ಶಿ ಜೇಸಿ ಎಚ್‍ಜಿಎಫ್ ಗೀತಾ ಬೈಂದೂರು, ಘಟಕದ ಜೇಸಿರೆಟ್ ಕಾರ್ಯದರ್ಶಿ ಜೇಸಿ ಎಚ್‍ಜಿಎಫ್ ಗುಲಾಬಿ ಮರವಂತೆ, ಹಾಗೂ ಬೈಂದೂರು ಮೆಸ್ಕಾಂ ಇಲಾಖೆಯ ಸಿಬ್ಬಂದಿಗಳು ಇದ್ದರು.

ಘಟಕದ ಸದಸ್ಯೆ ಜೇಸಿ ಎಚ್‍ಜಿಎಫ್ ಸಕ್ಕು ಕಲ್ಮಕ್ಕಿ ಸ್ವಾಗತಿಸಿದರು, ಘಟಕದ ಕಾರ್ಯದರ್ಶಿ ಜೇಸಿ ಎಚ್‍ಜಿಎಫ್ ಸವಿತಾ ದಿನೇಶ್ ಗಾಣಿಗ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

ವರದಿ : ಜೇಸಿ ಎಚ್‍ಜಿಎಫ್ ಎಚ್ ಸುಶಾಂತ್ ಬೈಂದೂರು

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)