ಬೈಂದೂರು: ಸಿಐಟಿಯು ನೇತೃತ್ವದಲ್ಲಿ ಕಾಮಿ೯ಕರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ “ಶಾಸಕರ ಕಚೇರಿ ಚಲೋ” ಹೋರಾಟ

0
356

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಸಿಐಟಿಯು ರಾಜ್ಯ ಸಮಿತಿಯ ನೇತೃತ್ವದಲ್ಲಿ ಕಾಮಿ೯ಕರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಬಜಟ್ ಪೂವ೯ ಮಾಚ್೯4 ರಂದು ಜರಗುವ ಕಾಮಿ೯ಕರ “ವಿಧಾನ ಸೌಧ ಚಲೋ ಹೋರಾಟ” ಕಾಯ೯ಕ್ರಮದ ಅಂಗವಾಗಿ ಬೈಂದೂರು ತಾಲೂಕು ಸಿಐಟಿಯು ನೇತೃತ್ವದಲ್ಲಿ ಕಾಮಿ೯ಕರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ,ಕಾಮಿ೯ಕರ ಬೃಹತ್ ಮೆರವಣಿಗೆಯ ಮೂಲಕ “ಬೈಂದೂರು ಶಾಸಕರ ಕಚೇರಿ ಚಲೋ” ಹೋರಾಟ ಕಾಯ೯ಕ್ರಮ ಜರಗಿತು.

ಬೈಂದೂರು ಸಿಐಟಿಯು ಕಚೇರಿಯಿಂದ ಕಾಮಿ೯ಕರ ಪಾದಯಾತ್ರೆಯನ್ನು ಉದ್ಘಾಟಿಸಿದ ಸಿಐಟಿಯು ಉಡುಪಿ ಜಿಲ್ಲಾ ಕಾಯ೯ದಶಿ೯ ಸುರೇಶ್ ಕಲ್ಲಾಗರ್ ಮಾತನಾಡುತ್ತಾ,ಮಾಚ್೯4 ರಂದು ಎಲ್ಲಾ ವಿಭಾಗದ ಕಾಮಿ೯ಕರು “ಬಜೆಟ್ ಅಧಿವೇಶನ ಚಲೋ”ನಡೆಸಿ ರಾಜ್ಯದ ಮುಖ್ಯಮಂತ್ರಿಗಳಿಗೆಮನವಿ ಪತ್ರಸಲ್ಲಿಸಿ, ಈ ವಷ೯ದ ಬಜೆಟ್ ಅನುದಾನದ ಮೂಲಕ ಹಲವು ಬೇಡಿಕೆಗಳನ್ನು ಈಡೆರಿಸಲು ಒತ್ತಾಯಿಸಲಾಗುತ್ತದೆ ಎಂದು ಹೇಳಿದರು. ಬೈಂದೂರು ತಾಲೂಕು ಕೇಂದ್ರಕ್ಕೆ ಮಿನಿ ವಿಧಾನ ಸೌಧ,ಕಾಮಿ೯ಕ ನಿರೀಕ್ಷಕರ ಕಚೇರಿ, ಬೈಂದೂರು ತಾಲೂಕಿನಾದ್ಯಂತ ನದಿಗಳಲ್ಲಿ ಮರಳು ತೆಗೆಯಲು ಪರವಾನಿಗೆ,ಸರಕಾರದ ಎಲ್ಲಾ 24 ಇಲಾಖೆಗಳನ್ನು ತೆರೆಯಬೇಕು, ಬೈಂದೂರು ಸಮುದಾಯ ಆರೋಗ್ಯ ಕೇಂದ್ರ ಮೇಲ್ದಜೆ೯ಗೆ ಏರಿಸುವುದು,ಸ್ಕೀಮ್ ನೌಕರರಾದ ಅಕ್ಷರ ದಾಸೋಹ, ಅಂಗನವಾಡಿ, ಆಶಾ, ಪಂಚಾಯತ್ ನೌಕರರರಿಗೆ ವೇತನ ಹೆಚ್ಚಳ,ಕಟ್ಟಡ ಕಾಮಿ೯ಕರಿಗೆ ಕರೊನಾ ಪರಿಹಾರ, ಮದುವೆ, ಪಿಂಚಣಿ, ಮರಣ ಪರಿಹಾರಕ್ಕೆ ಅಜಿ೯ಹಾಕುವ ಕಾಲ ಮಿತಿ ರದ್ಧತಿಗೆ,ಮನೆ ಕಟ್ಟಲು ರೂಪಾಯಿ 3 ಲಕ್ಷ ಸಹಾಯಧನ ಕೊಡಬೇಕು,ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ತ್ವರಿತವಾಗಿ ಸಂಪುಣ೯ಗೊಳಿಸಬೇಕು ಇತ್ಯಾದಿ ಸ್ಥಳೀಯ ಬೇಡಿಕೆ ಸಹಿತ ರಾಜ್ಯ ಮಟ್ಟದ 30 ಬೇಡಿಕೆಗಳನ್ನೊಳಗೊಂಡ ಮನವಿ ಪತ್ರವನ್ನು ಶಾಸಕರ ಆಪ್ತ ಸಹಾಯಕ ಮಹಿಮ್ ಶೆಟ್ಟಿಯವರಿಗೆ ಹಸ್ತಾಂತರಿಸಲಾಯಿತು.

ಈ ಸಂದಭ೯ದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ,ಕಾಮಿ೯ಕ ಮುಖಂಡರಾದ ರೊನಾಲ್ಡ್ ರಾಜೇಶ್ ಕ್ವಾಡ್ರಸ್,ಗಣೇಶ್ ತೊಂಡೆಮಕ್ಕಿ,ಉದಯ ಗಾಣಿಗ ಮೊಗೇರಿ,ರಾಜೀವ ಪಡುಕೋಣೆ,ವಿಜಯ ಕೊಯಾನಗರ,ಅಮ್ಮಯ್ಯ ಪೂಜಾರಿ ಬಿಜೂರು,ಸಿಂಗಾರಿ ನಾವುಂದ,ಜಯಶ್ರೀ ಪಡುವರಿ,ರಾಮ ಕಂಭದಕೋಣೆ,ಮಂಜು ಪಡವರಿ,ರಾಜು ದೇವಾಡಿಗ ಅರೆಹೊಳೆ,ನಾಗರತ್ನ ನಾಡ,ಮೊದಲಾದವರು ಇದ್ದರು,ವೆಂಕಟೇಶ್ ಕೋಣಿ ಕಾಯ೯ಕ್ರಮ ನಿರೂಪಿಸಿದರು.

ವರದಿ:ವೆಂಕಟೇಶ್ ಕೋಣಿ

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)