ಭಾರತೀಯ ಅಂಚೆ ಇಲಾಖೆಯು ನೀಡುವ ಪ್ರತಿಷ್ಠಿತ ರಾಷ್ಟ್ರ ಪ್ರಶಸ್ತಿಯು ಉಡುಪಿ ಅಂಚೆ ವಿಭಾಗದ ಬೈಂದೂರು ಅಂಚೆ ಕಛೇರಿಯಲ್ಲಿ ಅಂಚೆ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಸುರೇಂದ್ರ.ಡಿ ರವರಿಗೆ ಒಲಿದುಬಂದಿರುತ್ತದೆ. ಇವರು ಅಂಚೆ ಇಲಾಖೆಯ ಗ್ರಾಮೀಣ ಅಂಚೆ ಜೀವ ವಿಮಾ ವಿಭಾಗದಲ್ಲಿ 2019-20 ನೇ ಸಾಲಿಗೆ ಸಂಬಂದಿಸಿದಂತೆ ರಾಷ್ಟ್ರಮಟ್ಟದಲ್ಲಿ ಅತಿ ಹೆಚ್ಚಿನ ವಹಿವಾಟನ್ನು ಮಾಡಿಸಿರುತ್ತಾರೆ. ಹಾಗಾಗಿ ಭಾರತೀಯ ಅಂಚೆ ಇಲಾಖೆಯು ಇವರನ್ನು ದಿನಾಂಕ 01.02.2021 ರಂದು ಬೆಂಗಳೂರಿನ ಜನರಲ್ ಪೋಸ್ಟ್ ಆಫೀಸ್ ನಲ್ಲಿರುವ ಮೇಘಧೂತ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪ್ರಶಸ್ತಿಯ ಜೊತೆಗೆ ನಗದು ಬಹುಮಾನವನ್ನು ನೀಡಿ ಗೌರವಿಸಿರುತ್ತಾರೆ.ಇವರು ನನ್ನ ಹನ್ನೇರಡು ವರ್ಷದ ಸೇವಾ ಅವಧಿಯಲ್ಲಿ ಏಳು ಬಾರಿ ವಿಭಾಗಿಯ ಮಟ್ಟದ ಮತ್ತು ಮೂರು ಬಾರಿ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಪಡೆದಿರುತ್ತಾರೆ.
ಈ ಸಮಾರಂಭದಲ್ಲಿ ಕರ್ನಾಟಕ ವೃತ್ತದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಶ್ರೀಮತಿ ಶಾರದಾ ಸಂಪತ್, ಡೈರೆಕ್ಟರ್ ಆಫ್ ಪೋಸ್ಟಲ್ ಸರ್ವಿಸ್ ಶ್ರೀ ಮಹೇಂದ್ರ ಗಜ್ಭಾಯ್, ಹಾಗೂ ಕರ್ನಾಟಕ ವೃತ್ತದ ಇಲಾಖೆಯ ಮೇಲಾಧಿಕಾರಿಗಳು ಉಪಸ್ಥಿತರಿದ್ದರು.