ಸಿದ್ದಾಪುರ: ಅಮಾಸೆಬೈಲು ವಲಯದ ವನ್ಯಜೀವಿ ವಲಯದ ವಿಭಾಗದ ಅಧಿಕಾರಗಳು ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಿ ಅಮಾಸೆಬೈಲು ಗ್ರಾಮಸ್ಥರು ಅರಣ್ಯಾಧಿಕಾರಿಗಳ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಅಮಾಸೆಬೈಲಿನ ಗೋಳಿಕಾಡು ನಿವಾಸಿ ಮಾಲತಿ ಎಂಬವರ ಮಗ ನಟರಾಜ ಮತ್ತು ಸ್ಥಳೀಯ ಆನಂದ ಶೆಟ್ಟಿ ಅವರು ಎರ್ ಗನ್ ಹಿಡಿದುಕೊಂಡು ರಾತ್ರಿ ಬೈಕ್ ನಲ್ಲಿ ಬರುತ್ತಿದ್ದಾಗ ವನ್ಯಜೀವಿ ವಲ ಸಂರಕ್ಷಾಣಾಧಿಕಾರಿಯವರು ತಂಡದೊಂದಿಗೆ ತಡೆದಿದ್ದರು. ಎರ್ ಗನ್ ಮತ್ತು ಬೈಕ್ ನ್ನು ವಶಕ್ಕೆ ಪಡೆದು, ಇವರನ್ನೂ ಬಂಧಿಸಿ ಜಾಮೀನು ರಹಿತ ಕೇಸ್ ದಾಖಲಿಸಿದ್ದರು.
ಆದರೆ ತನ್ನ ಮಗ ಯಾವುದೇ ಮಾರಾಕಾಸ್ತ್ರ ಹೊಂದಿರಲಿಲ್ಲ. ಯಾವುದೇ ಕಾನೂನು ವಿರೋಧಿ ಕೃತ್ಯ ಮಾಡಿರಲಿಲ್ಲ. ಆದರೆ ಆತನ ಮೇಲೆ ದೌರ್ಜನ್ಯ ಎಸಗಲಾಗಿದೆ. ನಟರಾಜ ಮತ್ತು ಸ್ಥಳೀಯ ಆನಂದ ಶೆಟ್ಟಿ ಅವರನ್ನು ಬಿಡುಗಡೆಗೊಳಿಸಬೇಕು ಎಂದು ಮಾಲತಿ ಅವರು ಗ್ರಾಮಸ್ಥರೊಂದಿಗೆ ಇಂದು ಅಮಾಸೆಬೈಲು ಗ್ರಾಮಸ್ಥರು ಅರಣ್ಯಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.