ಬೈಂದೂರು : ಹಿರಿಯ ನಾಗರಿಕರ ಸಮಾವೇಶ

0
201

ಹೆಚ್ಚಿನ ಓದುಗರು ಈ ಸುದ್ದಿಯನ್ನು ಅಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (1) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

 

ಬೈಂದೂರು ತಾಲೂಕು ಹಿರಿಯ ನಾಗರಿಕರ ವೇದಿಕೆ(ರಿ)ಯ ಸವ೯ಸದಸ್ಯರ ಸಭೆಯು ಬೈಂದೂರು,ಬಂಕೇಶ್ವರದ ಮಹಾಕಾಳಿ ದೇವಸ್ಥಾನದ ಸಭಾಂಗಣದಲ್ಲಿ  ಯಶಸ್ವಿಯಾಗಿ ಜರಗಿತು.

ಕುಂದಾಪುರ ತಾಲೂಕು ಅಂಗವಿಕಲರ ಗ್ರಾಮೀಣ ವಿವಧೋದ್ದೇಶ ಪುನವ೯ಸತಿ ಕಾಯ೯ಕತ೯ (ಎಂ.ಆರ್.ಡಬ್ಲ್ಯೂ) ಮಂಜುನಾಥ ಹೆಬ್ಬಾರ್ ಕಾಲ್ತೋಡು ಮುಖ್ಯ ಅತಿಥಿಯಾಗಿ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಾ,ಹಿರಿಯ ನಾಗರಿಕರಿಗೆ ಸರಕಾರದಿಂದ ದೊರಕುವ ವಿವಿಧ ಸೌಲಭ್ಯಗಳನ್ನು ವಿವರಿಸಿದರು,

ಸರಕಾರದ ವಿವಿಧ ಸೌಲಭ್ಯಗಳನ್ನು ಕೊಡಿಸುವುದರ ಮೂಲಕ ಹಿರಿಯ ನಾಗರಿಕರ ಸಂಘಟನೆ ಬಲಗೊಳಿಸಬೇಕು ಎಂದು ಹೇಳಿದರು.

ನಿಕಟಪೂವ೯ ಅಧ್ಯಕ್ಷರಾದ ಎಚ್.ವಸಂತ ಹೆಗ್ಡೆ ಪ್ರಾಸ್ತಾವಿಕಮಾತನಾಡಿದರು.

ನೂತನ ಸದಸ್ಯರಾಗಿ ಸೇಪ೯ಡೆಗೊಂಡ ಐ.ನಾರಾಯಣ,ಸತೀಶ ವಾಮನ ಪೈ,ಎಲ್.ಗಣಪಯ್ಯ ಶೇರುಗಾರ ಪಡುವರಿ, ಶೇಷಗಿರಿ ಮಾಸ್ಟರ್ ಬೈಂದೂರು, ರಾಮಚಂದ್ರ ಭಟ್ ಕಾವೇರಿ ಮಾಗ೯ ಇವರನ್ನು ಅಭನಂದಿಸಲಾಯಿತು. ರಾಮಕೃಷ್ಣ ಪಡುವರಿ ಮಾತನಾಡಿದರು. ಕಾಯ೯ದಶಿ೯ ಕೆ.ಸಂಜೀವ ಆಚಾಯ೯ ಚಟುವಟಿಕೆ ವರದಿಯನ್ನು ಮಂಡಿಸಿದರು. ಎಚ್.ವಸಂತ ಹೆಗ್ಡೆ ಬೈಂದೂರು ಇವರನ್ನು ಹಿರಿಯ ನಾಗರಿಕರ ವೇದಿಕೆಯ ಗೌರವ ಅಧ್ಯಕ್ಷರ ಆಯ್ಕೆಗಾಗಿ ಸೂಚಿಸಲಾಯಿತು.

ವೆಂಕಟೇಶ ಕೋಣಿ ಅತಿಥಿಗಳನ್ನುಪರಿಚಯಿಸಿ, ಗೌರವಿಸಿದರು.ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷ ಎಂ.ಗೋವಿಂದ ಸಭೆಯ ಅಧ್ಯಕ್ಷತೆ ವಹಿಸಿದ್ದರು.ಸತೀಶ ಪೈ ಪ್ರಾಥ೯ನೆ ಗೀತೆ ಹಾಡಿದರು. ನಿವೃತ್ತ ಅದ್ಯಾಪಕ ರಾಮ ಶೇರುಗಾರ್ ವಂದಿಸಿದರು.

ವರದಿ:ವೆಂಕಟೇಶ್ ಕೋಣಿ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಅಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (1) ಖಂಡಿಸುವೆ (0) ಅಭಿಪ್ರಾಯವಿಲ್ಲ (0)