ದೇವಾಡಿಗ ಸಂಘ ಉಪ್ಪುಂದ ಸಾಧಕ ವಿದ್ಯಾರ್ಥಿಗಳಿಗೆ ಸಮ್ಮಾನ

0
450

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಉಪ್ಪುಂದ: ದೇವಾಡಿಗ ಸಮಾಜ ಸಂಘ ರಿ.ಉಪ್ಪುಂದ ವತಿಯಿಂದ ದೇವಾಡಿಗ ಸಮಾಜದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸಮ್ಮಾನಿಸಿ ಗೌರವಿಸಲಾಯಿತು.

ಸಂಘದ ಅಧ್ಯಕ್ಷ ಮಾಧವ ದೇವಾಡಿಗ ಸಮ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ  ಬೈಂದೂರು ತಾಲೂಕಿಗೆ ಪ್ರಥಮ ಸ್ಥಾನ ಪಡೆದ ವರುಣ ದೇವಾಡಿಗ, ಕರ್ನಾಟಕ ಇನ್ಸ್‍ಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ವೈದ್ಯಕೀಯ ಕಾಲೇಜಿ ಹುಬ್ಬಳ್ಳಿಯಲ್ಲಿ ವೈದ್ಯಕೀಯ ಪದವಿಯ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ವೈದ್ಯಕೀಯ ಪದವಿ ಪಡೆದ ಬಿಜೂರು ಮೃದುಲಾ ಡಿ. ದೇವಾಡಿಗ, ನವದೆಹಲಿ ಆಲ್ ಇಂಡಿಯಾ ಇನ್ಸ್ಟ್‍ಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಖಿಲ ಭಾರತ ಮಟ್ಟದಲ್ಲಿ ಆಯೋಜಿಸಿರುವ ಪ್ರವೇಶ ಪರೀಕ್ಷೆಯಲ್ಲಿ ಜನರಲ್ ಕೆಟಗಿರಿಯಲ್ಲಿ ರಾಷ್ಟ್ರ ಮಟ್ಟದಲ್ಲಿ 139ನೇ ರ್ಯಾಂಕ್ ಹಾಗೂ ಓಬಿಸಿ ಕೆಟಗಿರಿಯಲ್ಲಿ 21ನೇ ರ್ಯಾಂಕ್ ಪಡೆದಿರುವ ವೈದ್ಯಕೀಯ ವಿದ್ಯಾರ್ಥಿನಿ ಕ್ಷೀಪ್ರಾದೇವಾಡಿಗ, ಕರ್ನಾಟಕ ರಾಜ್ಯ ಪೊಲೀಸ್ ಸಬ್ -ಇನ್ಸ್‍ಪೆಕ್ಟರ್ ಹುದ್ದೆಗೆ ನಡೆದ ಪರೀಕ್ಷೆಯಲ್ಲಿ 136ನೇ ರ್ಯಾಂಕ್ ಪಡೆದ ಸುಬ್ರಹ್ಮಣ್ಯ ಎಚ್. ಇವರನ್ನು ಸಂಘದ ವತಿಯಿಂದ ಸಮ್ಮಾನಿಸಿ, ಗೌರವಿಸಲಾಯಿತು.

ಈ ಸಂದರ್ಭ ಜಿ.ಪಂ.ಸದಸ್ಯೆ ಗೌರಿ ದೇವಾಡಿಗ , ಸಂಘದ ಸ್ಥಾಪಕಾಧ್ಯಕ್ಷ ಮಂಜು ದೇವಾಡಿಗ, ಮಹಿಳಾ ಸಂಘಟನೆಯ ಅಧ್ಯಕ್ಷೆ ನಾಗಮ್ಮ ದೇವಾಡಿಗ, ಶಿಕ್ಷಕ ನಾರಾಯಣರಾಜು, ಶಿಕ್ಷಕ ಮಂಜುನಾಥ ದೇವಾಡಿಗ, ಪುರುಷೋತ್ತಮ ದೇವಾಡಿಗ, ದೇವರಾಯ ದೇವಾಡಿಗ, ನರಸಿಂಹ ದೇವಾಡಿಗ, ಶಿಕ್ಷಕ ಶ್ರೀಕಾಂತ, ಪ್ರವೀಣ ದೇವಾಡಿಗ, ಸಾಹಿತಿ ಜಗದೀಶ ದೇವಾಡಿಗ, ಗಣೇಶ ದೇವಾಡಿಗ, ರಾಮಚಂದ್ರ ದೇವಾಡಿಗ, ಶಿಕ್ಷಕ ರವೀಂದ್ರ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.

 

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)