ನಾವುಂದ ಹಿಂದು ಅಭ್ಯುದಯ ಸಂಘದ ಮಹಾಸಭೆ

0
185

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಉಪ್ಪುಂದ :ಮಕ್ಕಳ ಭವಿಷ್ಯ ಉತ್ತಮವಾಗಬೇಕಾದರೆ ಪೋಷಕರು ಮಕ್ಕಳು ಓದುವ ಸಮಯದಲ್ಲಿ ಅವರೊಂದಿಗೆ ಇದ್ದು, ಅವರು ಅದರಲ್ಲಿ ಸರಿಯಾಗಿ ತೊಡಗಿಕೊಂಡಿರುವುದನ್ನು ಖಾತರಿಪಡಿಸಿಕೊಳ್ಳಬೇಕು. ಅವರು ಆಧುನಿಕ ಉಪಕರಣಗಳ ಅತಿದಾಸರಾಗದಂತೆ ನೋಡಿಕೊಳ್ಳಬೇಕು ಎಂದು ಬೈಂದೂರು ವಲಯ ಕೃಷಿ ಅ„ಕಾರಿ ಪರಶುರಾಮ ಹೇಳಿದರು.

ನಾವುಂದ ಮಹಾಗಣಪತಿ ಮಾಂಗಲ್ಯ ಮಂಟಪದಲ್ಲಿ ನಡೆದ ನಾವುಂದ ಹಿಂದು ಅಭ್ಯುದಯ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.

ಮಕ್ಕಳು ಅವರ ಬಿಡುವಿನ ವೇಳೆಯಲ್ಲಿ ಕೃಷಿ ಕೆಲಸಗಳಲ್ಲಿ ಹಿರಿಯರಿಗೆ ಸಹಾಯ ಮಾಡಿದರೆ ಅವರಲ್ಲಿ ಕೃಷಿ ಸಂಸ್ಕøತಿ ಬೆಳೆಯುತ್ತದೆ. ಬೆಳೆದು ದೊಡ್ಡವರಾದಾಗ ಕಾಯಕದ ಬದುಕಿಗೆ ಒಗ್ಗಿಕೊಳ್ಳುತ್ತಾರೆ ಎಂದರು.

ಸಂಘದ ಅಧ್ಯಕ್ಷ ಶಶಿಧರ ಎಂ. ಶೆಟ್ಟಿಅಧ್ಯಕ್ಷತೆ ವಹಿಸಿದ್ದರು.

ಸಂಘದ ಹಿರಿಯ ಸದಸ್ಯ ಶಿವರಾಮ ಶೆಟ್ಟಿ, ಕೋಶಾಧಿಕಾರಿ ನಾರಾಯಣ ಪೂಜಾರಿ, ಉಪಾಧ್ಯಕ್ಷ ಮನೋಹರ ಎನ್. ಕೆ, ಜತೆ ಕಾರ್ಯದರ್ಶಿ ರತ್ನಾಕರ ಕೆ. ಸದಸ್ಯರಾದ ಪ್ರವೀಣ್ ಎನ್, ಎನ್. ಸತ್ಯನಾರಾಯಣ, ರವಿಕುಮಾರ್, ವೆಂಕಟೇಶ್ ಉಪಸ್ಥಿತರಿದ್ದರು. ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ವಿಶೇಷ ಸಾಧನೆಗೈದ ಸ್ಥಳೀಯ ವಿದ್ಯಾರ್ಥಿಗಳನ್ನು ಮತ್ತು ಯೋಗ ಸಾಧಕಿ ನಿರೀಕ್ಷಾ ಪೂಜಾರಿ ಅರೆಹೊಳೆ ಅವರನ್ನು ಗೌರವಿಸಲಾಯಿತು.

ಕಾರ್ಯದರ್ಶಿ ಶಿವರಾಮ ಮಧ್ಯಸ್ಥ ಸ್ವಾಗತಿಸಿ, ನಿರೂಪಿಸಿದರು. ಸದಸ್ಯ ವಿಘ್ನೇಶ್ವರ ಕೆ. ವಂದಿಸಿದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)