ರಾಜ್ಯ ಹೈಕೋರ್ಟ ನ್ಯಾಯಧೀಶರಿಗೆ ಬೈಂದೂರು ನ್ಯಾಯಲಯ ಮಂಜೂರು ಮಾಡುವಂತೆ ಮನವಿ

0
586

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (3) ಸಮ್ಮತ (2) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು : ಬೈಂದೂರು ತಾಲೂಕು ರಚನೆಗೊಂಡ 3 ವರ್ಷ ಕಳೆದಿದೆ. ತಾಲೂಕು ಕೆಂದ್ರದ ಅಧಿಕಾರಿಗಳು ಹಾಗೂ ಕಛೇರಿಯನ್ನು ಇನ್ನೂ ಸ್ಥಾಪನೆಯಾಗಿಲ್ಲ. ಬೈಂದೂರಿನೆಲ್ಲಿ ನ್ಯಾಯಲಯ ಸ್ಥಾಪನೆಗೆ ಅನೇಕ ವರ್ಷಗಳಿಂದ ಒತ್ತಾಯ ಮಾಡುತ್ತಾ ಬಂದಿದ್ದಾರೆ. ಇಲ್ಲಿ ನ್ಯಾಯಲಯಕ್ಕೆ ಈಗಿನ ಸರ್ಕಾರ 2 ಎಕರೆ ಸ್ಥಳ ಮಂಜೂರು ಮಾಡಿದೆ. ದಿ:5/12/2020 ರಂದು ಬೈಂದೂರಿಗೆ ಕರ್ನಾಟಕ ರಾಜ್ಯ ಹೈಕೋರ್ಟ ನ್ಯಾಯಲಯ (ಆಡಳಿತ) ಶ್ರೀ ಅಶೋಕ ಎಲ್ ಕೆಣಗಿಯವರು ಹಾಗೂ ಉಡುಪಿ ಜಿಲ್ಲಾ ನ್ಯಾಯಧೀಶರು ಬೈಂದೂರಿನ ಮಂಜೂರುಗೊಡ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿರುತ್ತಾರೆ. ಈ ಸಂದರ್ಬದಲ್ಲಿ ಇಲ್ಲಿನ ಪ್ರವಾಸಿ ಮಂದಿರದಲ್ಲಿ ರಾಜ್ಯ ಹೈಕೋರ್ಟ ನ್ಯಾಯಧೀಶರನ್ನು ಬೈಂದೂರು ಹಿತರಕ್ಷಣ ವೇದಿಕೆ ಬೇಟಿ ಮಾಡಿ ಬೈಂದೂರಿನಲ್ಲಿ ಬಾಡಿಗೆ ಕಟ್ಟಡದಲ್ಲಾದರು ಕೂಡಲೇ ನ್ಯಾಯಲಯ ಮಂಜೂರು ಮಾಡುವಂತೆ ಹಾಗೂ ಹೊಸ ನ್ಯಾಯಲಯ ಕಟ್ಟಡಕ್ಕೆ ತಾವು ಅನುಮೊದಿಸ ಬೇಕಾಗಿ ಮನವಿ ನೀಡಿದರು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ನ್ಯಾಯಧೀಶರು ಉಪಸ್ಥಿತರಿದ್ದರು. ಹೈಕೊರ್ಟ ನ್ಯಾಯಧೀಶರು ಮಾತನಾಡಿ ಹೊಸ ಸ್ಥಳದ ಆಡಳಿತತ್ಮಾಕ ಕಾರ್ಯ ನಡೆದು ನ್ಯಾಯಲಯಕ್ಕೆ ಹಂಸ್ತಾಂತgಗೊಂಡ ಕೂಡಲೇ ಬೈಂದೂರಿನಲ್ಲಿ ನ್ಯಾಯಲಯ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ನಿಯೋಗದಲ್ಲಿ ಹಿತರಕ್ಷಣ ವೇದಿಕೆ ಅಧ್ಯಕ್ಷ ಜಗದೀಶ ಪಟವಾಲ್,ಕಾರ್ಯದರ್ಶಿ ಪ್ರಕಾಶ ಬೈಂದೂರು,ಸದಸ್ಯ ಸುಬ್ರಮಣ್ಯ ಶೇಟ್, ವಕೀಲ ಧನಂಜಯ ಶಿರೂರು ಮೊದಲದವರು ಉಪಸ್ಥಿತರಿದ್ದರು.

ಸ್ಥಳೀಯ ಹಾಲಿ ಶಾಸಕರು ಮತ್ತು ಸಂಸದರ ಪರಿಶ್ರಮದಿಂದ ನ್ಯಾಯಲಯಕ್ಕೆ ಸ್ಥಳ ಮಂಜೂರಾತಿಗೊಡಿದೆ.

ಮನವಿಯನ್ನು ಕರ್ನಾಟಕ ರಾಜ್ಯ ಮುಖ್ಯ ನ್ಯಾಯ ಮೂರ್ತಿಗಳು ಉಚ್ಚ ನ್ಯಾಯಲಯ ಇವರಿಗೆ ರಾಜ್ಯ ಹೈಕೊರ್ಟ ನ್ಯಾಯಲಯ (ಆಡಳಿತ) ಶ್ರೀ ಅಶೋಕ ಎಲ್ ಕೆಣಗಿಯವರ ಮೂಲಕ ಸಲ್ಲಿಸಲಾಯಿತು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (3) ಸಮ್ಮತ (2) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)