ಬೈಂದೂರು: ರೈತ,ಕೃಷಿಕೂಲಿ ಕಾರ್ಮಿಕರ ಬೃಹತ್ ಪ್ರತಿಭಟನೆ

0
255

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ, ರೈತ ವಿರೋಧಿ, ಜನ ವಿರೋಧಿ ನೀತಿಗಳ ವಿರುದ್ಧ ಕೇಂದ್ರ ಕಾರ್ಮಿಕ ಸಂಘಟನೆಗಳ ಕರೆಯಂತೆ ಬೈಂದೂರಿನ ರಾಷ್ಟ್ರೀಯ ಹೆದ್ದಾರಿ ಅಂಡರ್ ಪಾಸ್ ನಲ್ಲಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ಯಶಸ್ವಿಯಾಗಿ ಜರುಗಿಸಲಾಯಿತು.

ಸಿಐಟಿಯು ಮುಖಂಡರಾದ ಗಣೇಶ್ ತೊಂಡೆಮಕ್ಕಿ ಸ್ವಾಗತಿಸಿದರು. ಐಕ್ಯ ಹೋರಾಟವನ್ನು ತೀವ್ರಗೊಳಿಸುವ ಮೂಲಕ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಯನ್ನು ನಿರಾಕರಿಸಿ ಪ್ರತಿರೋಧಿಸಲು ಮತ್ತು ಪರಿಹಾರ ಹಾಗೂ ಪರ್ಯಾಯ ರೂಪಿಸಲು ಮುಂದಾಗಬೇಕೆಂದು ಸಿಐಟಿಯು ಮುಖಂಡರಾದ ರಾಜೀವ ಪಡುಕೋಣೆಯವರು ಮುಷ್ಕರವನ್ನು ಉಧ್ಧೇಶಿಸಿ ಮಾತನಾಡಿದರು.ಸಿಐಟಿಯು ಮುಖಂಡರಾದ ವೆಂಕಟೇಶ್ ಕೋಣಿ,ಸುಶೀಲ ನಾಡಾ ಸಭೆಯನ್ನುಧ್ಧೇಶಿಸಿ ಮಾತನಾಡಿದರು.ಉದಯ ಗಾಣಿಗ, ಮಂಜು ಪಡುವರಿ,ಜಯಶ್ರೀ ಪಡುವರಿ,ಅಮ್ಮಯ್ಯ ಬಿಜೂರು,ಮಾಧವ,ಶ್ರೀಧರ ಉಪ್ಪುಂದ,ನಾಗರತ್ನ ನಾಡಾ,ಸಿಂಗಾರಿ ನಾವುಂದ,ರಾಮ ಖಂಬದಕೋಣೆ ಮುಷ್ಕರದಲ್ಲಿ ಉಪಸ್ಥಿತರಿದ್ದರು.

ರೊನಾಲ್ಡ್ ರಾಜೇಶ್ ವಂದಿಸಿದರು.

ವರದಿ:ವೆಂಕಟೇಶ್ ಕೋಣಿ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)