ಬೈಂದೂರು ನ್ಯಾಯಾಲಯ ಸ್ಥಾಪನೆ ಬಗ್ಗೆ ರಾಜ್ಯ ಕಾನೂನು ಸಚಿವರಿಗೆ ಮನವಿ

0
357

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (5) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು : ಬೈಂದೂರಿನಲ್ಲಿ ನ್ಯಾಯಾಲಯ ಸ್ಥಾಪನೆ ಬಗ್ಗೆ ಇದೀಗ ಜನತೆಯ ಒತ್ತಾಯ ರಾಜ್ಯ ಕಾನೂನು ಮಂತ್ರಿಗಳನ್ನು ಹಾಗೂ ಸಂಸದರಿಗೆ ತಲುಪಿದೆ. ತಾಲೂಕು ಕೇಂದ್ರವಾದ ಬೈಂದೂರಿನಲ್ಲಿ ನ್ಯಾಯಾಲಯಕ್ಕೋಸ್ಕರ ಹೋರಾಟದ ಕಾವು ಹೆಚ್ಚತೊಡಗಿದೆ. ನಿನ್ನೆ ಬೈಂದೂರು ಕ್ಷೇತ್ರಕ್ಕೆ ಅಧಿಕೃತವಾಗಿ ಕಾರ್ಯಕ್ರಮಗಳ ಬಗ್ಗೆ ಭೇಟಿ ನೀಡಿದ ರಾಜ್ಯ ಕಾನೂನು ಸಚಿವರಾದ ಶ್ರೀ ಮಾಧು ಸ್ವಾಮಿ ಹಾಗೂ ಬೈಂದೂರು, ಶಿವಮೊಗ್ಗ ಸಂಸದ ಶ್ರೀ ಬಿ. ವೈ. ರಾಘವೇಂದ್ರ ಅವರನ್ನು ಬೈಂದೂರು ಹಿತರಕ್ಷಣಾ ವೇದಿಕೆ ಭೇಟಿ ಮಾಡಿ ಬೈಂದೂರಿನಲ್ಲಿ ನ್ಯಾಯಾಲಯ ಸ್ಥಾಪನೆ ಬಗ್ಗೆ ಮನವಿ ನೀಡಿ ಒತ್ತಾಯಪಡಿಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸಚಿವರನ್ನು ಹಾಗೂ ಸಂಸದರನ್ನು ಭೇಟಿ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕಾನೂನು ಸಚಿವರು ಹೈಕೋರ್ಟ್ ನ್ಯಾಯಾಧೀಶರೊಂದಿಗೆ ಭೇಟಿ ಮಾಡಿ ಚರ್ಚಿಸಿ ಬೈಂದೂರು ನ್ಯಾಯಾಲಯ ಸ್ಥಾಪನೆ ಬಗ್ಗೆ ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸಂಸದರು ಹಾಗೂ ಬೈಂದೂರು ಶಾಸಕರು ಈ ಬಗ್ಗೆ ಸಚಿವರಿಗೆ ಮನವರಿಕೆ ಮಾಡಿದರು. ಬೈಂದೂರಿನಲ್ಲಿ ಅನೇಕ ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಸ್ವಲ್ಪ ದಿನಗಳ ಹಿಂದೆ ಬೈಂದೂರು ಶಾಸಕ ಬಿ. ಎಮ್. ಸುಕುಮಾರ ಶೆಟ್ಟಿ ರವರನ್ನು ಬೈಂದೂರು ಹಿತರಕ್ಷಣಾ ವೇದಿಕೆ ಭೇಟಿ ಮಾಡಿ ಮನವಿ ನೀಡಿತ್ತು. ನ್ಯಾಯಾಲಯಕ್ಕೋಸ್ಕರ ಸ್ಥಳೀಯ ವಕೀಲರು ಬೆಂಬಲ ನೀಡಿದ್ದು ಹೋರಾಟ ಸಮಿತಿಯು ಸದ್ಯದಲ್ಲಿ ಅಸ್ತಿತ್ವಕ್ಕೆ ಬರಲಿದೆ. ಈ ಸಂದರ್ಭದಲ್ಲಿ ವೇದಿಕೆ ಅಧ್ಯಕ್ಷ ಮತ್ತು ಸದಸ್ಯರು ಉಪಸ್ಥಿತರಿದ್ದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (5) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)