ಸುಬ್ಬರಡಿ ರೂ.35ಕೋಟಿ ವೆಚ್ಚದ ಉಪ್ಪುನೀರು ತಡೆ ಅಣೆಕಟ್ಟು ಕಾಮಗಾರಿ ಶಂಕುಸ್ಥಾಪನೆ

0
234

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)
ಕೃಷಿ, ಕುಡಿಯುವ ನೀರಿಗಾಗಿ ವಿಸ್ಕøತ್ತ ಯೋಜನೆ ಹಾಕಿಕೊಂಡಿದ್ದೇವೆ: ಸಚಿವ ಮಾಧುಸ್ವಾಮಿ

ಉಪ್ಪುಂದ : ಉಡುಪಿ, ದ.ಕ.ಜಿಲ್ಲೆಗಳ ಕೃಷಿಗೆ ಹಾಗೂ ಕುಡಿಯುವ ನೀರಿನ ಪುರೈಕೆಯನ್ನು ಗಮನದಲ್ಲಿ ಇಟ್ಟುಕೊಂಡು ಸಣ್ಣ ನೀರಾವರಿ ಇಲಾಖೆ ವತಿಯಿಂದ ಅಂದಾಜು ರೂ.2,900 ಕೋಟಿ ವೆಚ್ಚದಲ್ಲಿ 1300 ವೆಂಟೆಡ್ ಡ್ಯಾಂ ನಿರ್ಮಾಣದ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ನೇತ್ರಾವತಿ ನದಿಯ 24ಟಿಎಂಸಿ ನೀರಿಗಾಗಿ ರೂ.24ಸಾವಿರ ಕೋಟಿ ಖಚ್ರ್ಚು ಮಾಡುವುದು ದುಂದುವೆಚ್ಚಕ್ಕೆ ಕಾರಣವಾಗುತ್ತಿದೆ. ಆದರೆ ಸಣ್ಣ ನೀರಾವರಿ ಮೂಲಕ ಸಣ್ಣ ಸಣ್ಣ ನದಿಗಳಿಗೆ ವೆಂಟಡ್ ಡ್ಯಾಂ ನಿರ್ಮಿಸಿದಾಗ ರೈತರಿಗೆ ಯಥೇಚ್ಚವಾಗಿ ನೀರು ದೊರಕುತ್ತದೆ. ಕೃಷಿ ಕ್ಷೇತ್ರಕ್ಕೆ ಬೆಳೆಯುತ್ತದೆ. ಜೊತೆಗೆ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಯುತ್ತದೆ ಈ ನಿಟ್ಟಿನಲ್ಲಿ ನಾನು ಯೋಜನೆ ರೂಪಿಸಿ, ಕಾರ್ಯಪ್ರವರ್ತನಾಗಿದ್ದೇನೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಅವರು ಸುಬ್ಬರಡಿಯಲ್ಲಿ ರೂ.35ಕೋಟಿ ವೆಚ್ಚದ ಉಪ್ಪುನೀರು ತಡೆ ಕಿಂಡಿ ಅಣೆಕಟ್ಟು ಕಾಮಗಾರಿ ಶಂಕುಸ್ಥಾಪನ ಸಮಾರಂಭ ಉದ್ಟಾಟಿಸಿ ಮಾತನಾಡಿದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ,ಬÉೈಂದೂರು, ಕೊಲ್ಲೂರು, ಮರವಂತೆಯನ್ನು ಗಮನದಲಿಟ್ಟುಕೊಂಡು ಪ್ರವಾಸೋದ್ಯಮಕ್ಕೆ ಯೋಜನೆಯನ್ನು ರೂಪಿಸಿದ್ದು ಮುಂದಿನ ದಿನಗಳಲ್ಲಿ ಬÉೈಂದೂರನ್ನು ಮಾದರಿ ಪ್ರವಾಸೋದ್ಯಮ ಕ್ಷೇತ್ರವನ್ನಾಗಿ ಮಾಡಲಾಗುತ್ತದೆ. ಕೇಂದ್ರ ಸರಕಾರದ ಜಲಜೀವನ ಯೋಜನೆಯಡಿ ಹಾಗೂ ರಾಜ್ಯ ಸರಕಾರದ ಸಹಾಯದೊಂದಿಗೆ ರೂ.550ಕೋಟಿ ವೆಚ್ಚದಲ್ಲಿ ಬÉೈಂದೂರು ಕ್ಷೇತ್ರಕ್ಕೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗುತ್ತದೆ ಎಂದರು.

ಶಾಸಕ ಬಿ.ಎಂ, ಸುಕುಮಾರ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, 5ಗ್ರಾಮಗಳ ಜನರ ಸಾವಿರಾರು ವರ್ಷಗಳ ಕನಸಾಗಿದ್ದ ಸುಬ್ಬರಡಿ ಡ್ಯಾಂ 35ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಇದರಿಂದ 300 ಎಕ್ರರೆ ಜಮೀನುಗಳಿಗೆ ವರದಾನವಾಗಲಿದೆ. ಡ್ಯಾಂ ನಿರ್ಮಾಣದಿಂದ ಸಿಹಿ ನೀರು ಸಂಗ್ರಹಗೊಂಡು ಉಪ್ಪು ನೀರಿನಿಂದ ಮುಕ್ತರಾಗಲು ಸಾಧ್ಯವಾಗುತ್ತದೆ ಎಂದರು. ಕುಡಿಯುವ ನೀರಿನ ಯೋಜನೆಯಿಂದ ಕ್ಷೇತ್ರದ ಸುಮಾರು 60 ಸಾವಿರ ಮನೆಗಳಿಗೆ ನಳ್ಳಿ ಮೂಲಕ ಶುದ್ಧ ನೀರು ದೊರೆಯುತ್ತದೆ ಎಂದರು.

ಈ ಸಂದರ್ಭ ಜಿ.ಪಂ.ಸದಸ್ಯರಾದ ಬಾಬು ಶೆಟ್ಟಿ, ಸುರೇಶ ಬಟವಾಡಿ, ಶಂಕರ ಪೂಜಾರಿ, ತಾ.ಪ. ಉಪಾಧ್ಯಕ್ಷೆ ಮಾಲಿನಿ ಕೆ., ತಾ.ಪ. ಸದಸ್ಯರಾದ ಗಿರಿಜಾ ಖಾರ್ವಿ, ಸುಜಾತ ದೇವಾಡಿಗ, ಕರಾವಳಿ ಅಭಿವೃದ್ಧಿ ಪ್ರಾ„ಕಾರದ ಅಧ್ಯಕ್ಷ ಮಟಾರು ರತ್ನಕರ ಹೆಗ್ಡೆ, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ ನಾಯ್ಕ, ಬÉೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ದೀಪಕ್ ಶೆಟ್ಟಿ, ರಾಜ್ಯ ಯೋಜನಾ ಆಯೋಗದ ಸದಸ್ಯೆ ಪ್ರಿಯರ್ದಶೀನಿ ದೇವಾಡಿಗ, ಇಲಾಖೆಯ ಅ„ಕಾರಿಗಳು ಉಪಸ್ಥಿತರಿದ್ದರು.

ಬÉೈಂದೂರು ಕ್ಷೇತ್ರಕ್ಕೆ ಇಷ್ಟು ವರ್ಷದ ವರೆಗೆ ಕುಡಿಯುವ ನೀರಿನ ಸಮಸ್ಯೆಗೆ ಆದ್ಯತೆ ನೀಡಿಲ್ಲ, ಇದರ ನಿವಾರಣೆಗೆ ನಾನು ಪಣ ತೋಟ್ಟಿದ್ದೇನೆ. ಸಚಿವ ಮಾಧುಸ್ವಾಮಿ ಅವರು ರೂ.110ಕೋಟಿ ವೆಚ್ಚದಲ್ಲಿ ವೆಂಟಡ್ ಡ್ಯಾಂ ನಿರ್ಮಾಣಕ್ಕೆ ಅನುದಾನ ನೀಡಿದ್ದಾರೆ. ಉಪ್ಪು ನೀರಿನ ಸಮಸ್ಯೆಯಿಂದ ಮಹಿಳೆಯರು ಸಂಕಷ್ಟದಿಂದ ಜೀವನ ಸಾಗುತ್ತಿದ್ದರು, ಮಾನ್ಯ ಮುಖ್ಯ ಮಂತ್ರಿಗಳ ಹಾಗೂ ಸಂಸದರ ಮತ್ತು ಸಚಿವರ ಸಹಾಯದಿಂದ ಅನುದಾನ ಸಿಕ್ಕಿದೆ. ಕುಡಿಯುವ ನೀರಿನ ಸಮಸ್ಯೆಗೆ ಮುಕ್ತಿ ಸಿಗುತ್ತದೆ : ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)