ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ.ನಿ.ಉಪ್ಪುಂದ, 67ನೇ ಸಹಕಾರಿ ಸಪ್ತಾಹ : ಕೊರೋನಾ ವಾರಿಯರ್ಸ್‍ಗೆ ಸಮ್ಮಾನ

0
481

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (1) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

 

ಉಪ್ಪುಂದ : ಸಹಕಾರಿಗಳ ಮುಂದೆ ದೊಡ್ಡ ಸವಾಲುಗಳು ಇವೆ, ಅವುಗಳನ್ನು ಮಟ್ಟಿ ನಿಲ್ಲಬೇಕಿದೆ. ಸರಕಾರದ ಸವಲತ್ತುಗಳು ನೇರ ಹಣ ವರ್ಗಾವಣೆಗೆಗೆ ಬ್ಯಾಂಕ್‍ಗಳನ್ನು ಪರಿಗಣಿಸುತ್ತಿರುವುದು ಸಹಕಾರಿಯನ್ನು ನಿರ್ಲಕ್ಯ ಮಾಡಿದಂತೆ, ಇದನ್ನು ಸಹಕಾರಿ ಸಂಸ್ಥೆಗಳ ಮೂಲಕ ನಿರ್ವಹಿಸುವ ಬಗ್ಗೆ ನಿಯಮಗಳನ್ನು ರೂಪಿಸುವತ್ತ ಸರಕಾರ ಚಿಂತಿಸಬೇಕಿದೆ, ಪತ್ತಿನ ಸಹಕಾರಿ ಸಂಘ ಬಲಿಷ್ಠವಾದರೆ ಜನಸಾಮಾನ್ಯರಿಗೆ ಅನುಕೂಲವಾಗಲಿದೆ. ದೇಶದ 30 ಕೋಟಿ ನಾಗರಿಕರು ಸಹಕಾರಿಯಿಂದ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ದೇಶದ ಜಿಡಿಪಿಗೆ ಶೇ.8ರಷ್ಟು ಕೊಡುಗೆ ನೀಡುತ್ತಿದೆ. ಕೃಷಿ, ಹೈನುಗಾರಿಕೆಗೆ, ಸಾಮಾನ್ಯ ಜನರ ನಿತ್ಯ ಜೀವನಕ್ಕೆ ಸಹಕಾರಿಯಿಂದ ದೊಡ್ಡ ಕೊಡುಗೆ ಸಲ್ಲುತ್ತಿದೆ ಎಂದು ಖಂದಕೋಣೆ ರೈ.ಸೇ.ಸ.ಸಂಘದ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು.

ಅವರು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ನಿ.ಉಪ್ಪುಂದ ವತಿಯಿಂದ ನ.19ರಂದು ರೈತಸಿರಿ ಸಭಾಭವನದಲಿ ನಡೆದ 67ನೇ ಸಹಕಾರಿ ಸಪ್ತಾಹ ಸಮಾರಂಭದಲ್ಲಿ ಕೊರೋನಾ ವಾರಿಯರ್ಸ್ ಗಳಾಗಿ ದುಡಿದ ವೈದ್ಯಾಧಿಕಾರಿಗಳಿಗೆ ಸಮ್ಮಾನಿಸಿ ಮಾತನಾಡಿದರು.
ಸಂಘದ ಹಿರಿಯ ಸದಸ್ಯ ಎಚ್.ಹೆರಿಯಣ್ಣ ರಾವ್ ಕಾರ್ಯಕ್ರಮ ಉದ್ಘಾಟಿಸಿ, ಸಂಘದ ಕಾರ್ಯಚಟುವಟಿಗೆಗಳಿಗೆ ಶುಭ ಹಾರೈಸಿದರು.
ಸಮಾರಂಭದಲ್ಲಿ ಕೊರೋನಾ ವಾರಿಯರ್ಸ್ ಗಳಾಗಿ ದುಡಿದ ಬೈಂದೂರು ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ| ಪ್ರೇಮಾನಂದ ಹಾಗೂ ಕಿರಿಮಂಜೇಶ್ವರ ಕೇಂದ್ರದ ವೈದ್ಯಾಧಿಕಾರಿ ನಿಶಾ ರೈಬೆಲ್ಲೋ ಇವರಿಗೆ ಸಹಕಾರಿ ವತಿಯಿಂದ ಗೌರವಾರ್ಪಣೆ ಸಲ್ಲಿಸಲಾಯಿತು. ಹಾಗೂ ಕೊರೋನಾ-19 ಲಾಕ್‍ಡೌನ್ ಸಂದರ್ಭದಲ್ಲಿರುವ ಸಂಘದ ಸ್ವ-ಸಹಾಯ ಸಂಘದ 460 ಸ್ಬ-ಸಹಾಯ ಸಂಘ ಮತ್ತು 562 ರೈತಸಿರಿ ಸಂಘಗಳ 5600 ಸದಸ್ಯರುಗಳ ಸಾಲಗಳಿಗೆ ಬಡ್ಡಿ  ಪ್ರೋತ್ಸಾಹ ಧನ ವಿತರಣೆ ಮಾಡಲಾಯಿತು.

ಈ ಸಂದರ್ಭ ಸಂಘದ ಉಪಾಧ್ಯಕ್ಷ ಈಶ್ವರ, ನಿರ್ದೇಶಕರಾದ ವಿರೇಂದ್ರ ಶೆಟ್ಟಿ, ಮಂಜು ದೇವಾಡಿಗ, ಹೂವಯ್ಯ, ಗುರುರಾಜ್ ಹೆಬ್ಬಾರ್, ಭರತ್ ದೇವಾಡಿಗ, ದಿನಿತಾ ಶೆಟ್ಟಿ, ಜಲಜಾಕ್ಷಿ ಮೊದಲಾದವರು ಉಪಸ್ಥಿರಿದ್ದರು.

ಸಂಘದ ನಿರ್ದೇಶಕ ಬಿ.ಎಸ್.ಸುರೇಶ ಶೆಟ್ಟಿ ಪ್ರಾಸ್ತಾವನೆಗೈದರು. ಸಂಘದ ಮುಖ್ಯಕಾರ್ಯನಿವಾಹಣಾಧಿಕಾರಿ ವಿಷ್ಣು ಪೈ ಸ್ವಾಗತಿಸಿದರು. ಸಿಬಂದಿ ಚಂದ್ರ ನಿರೂಪಿಸಿದರು. ಹಿರಿಯ ವ್ಯವಸ್ಥಾಪಕ ಚಂದ್ರಯ್ಯ ಶೆಟ್ಟಿ ವಂದಿಸಿದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (1) ಖಂಡಿಸುವೆ (0) ಅಭಿಪ್ರಾಯವಿಲ್ಲ (0)