ಗುಲ್ವಾಡಿ : ನರೇಗಾ ಕೂಲಿಕಾರರ ಸಮಾವೇಶ

0
150

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಮಹತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸದ ಬೇಡಿಕೆ ಅಜಿ೯ಸಲ್ಲಿಸಿದ ಕಾಯಕ ಸಂಘದ ಗುಂಪಿಗೆ ಈ ಕೂಡಲೆ ಕೂಲಿ ಕೆಲಸ ಕೊಡಬೇಕು ಎಂದು ಕಾಮಿ೯ಕ ಮುಖಂಡ ಜಿ.ಡಿ. ಪಂಜು ಪೂಜಾರಿ ಗುಲ್ವಾಡಿ ಸ್ಥಳೀಯಾಡಳಿತವನ್ನು ಆಗ್ರಹಿಸಿದರು.

ಗುಲ್ವಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನರೇಗಾ ಕಾಯಕ ಸಂಘದ ಐದು ಗುಂಪುಗಳ ಸವ೯ಸದಸ್ಯರ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು.ಕನಾ೯ಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ಜಿಲ್ಲಾ ಪ್ರಧಾನ ಕಾಯ೯ದಶಿ೯ವೆಂಕಟೇಶ್, ಕೋಣಿ,ಮುಖಂಡರಾದ ರಾಜೀವ ಪಡುಕೋಣೆ,ನಾಗರತ್ನ ನಾಡ ಸಭೆಯಲ್ಲಿ ಮಾತನಾಡಿ, ನರೇಗಾ ಕೂಲಿಕಾರರಿಗೆ ದಿನಕ್ಕೆ ರೂಪಾಯಿ 600/=ಕೂಲಿವೇತನ,200 ದಿನಗಳ ಕೆಲಸ ಹಾಗೂ ಕರೋನಾ ಪರಿಹಾರ ರೂಪಾಯಿ 7500/= ಆರು ತಿಂಗಳು ಕೊಡಬೇಕು ಎಂದು ಸರಕಾರವನ್ನು ಆಗ್ರಹಿಸಿದರು.

ಗ್ರಾಮ ಪಂಚಾಯತ್ ಮಾಜಿ ಸದಸ್ಯೆರತ್ನ,ಕಾಯಕ ಬಂಧು ಶೋಭಾ,ರುಕ್ಕು,ವನಜ ಗುಡಾರ ಹಕ್ಲು,ನೇತ್ರಾವತಿ ಕಕಿ೯ ಮೊದಲಾದವರು ಇದ್ಥರು.

ವರದಿ : ವೆಂಕಟೇಶ್ ಕೋಣಿ

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)