ನ. 4ರಂದು ಎಂಡೊಸಲ್ಫಾನ್ ಪೀಡಿತ ಅಂಗವಿಕಲರ ಹಾಗೂ ವಿ.ಆರ್.ಡಬ್ಲ್ಯುಗಳ ಡಿ.ಸಿ. ಕಚೇರಿ ಚಲೊ ಹೋರಾಟ

0
307

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಅಂಗವಿಕಲರ ಹಕ್ಕುಗಳ ರಾಷ್ಟ್ರೀಯ ವೇದಿಕೆ(ಎನ್. ಪಿ. ಆರ್. ಡಿ.)ನವದೆಹಲಿಗೆ ಸಂಯೋಜಿಸಲ್ಪಟ್ಟ ಕನಾ೯ಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ಉಡುಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಎಂಡೊಸಲ್ಫಾನ್ ಪೀಡಿತ ಅಂಗವಿಕಲರು ಹಾಗೂ ಅಂಗವಿಕಲರ ಗ್ರಾಮೀಣ ಪನವ೯ಸತಿ ಕಾಯ೯ಕತ೯ (ವಿ.ಆರ್.ಡಬ್ಲ್ಯೂ)ರಿಂದ ದಿನಾಂಕ:4,ನವಂಬರ್,2020 ರಂದು ಉಡುಪಿ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ.

ಕುಂದಾಪುರ ಸಮೀಪದ ನಾಡ ಗ್ರಾಮ ಪಂಚಾಯತ್ ನ ಸೇನಾಪುರದಲ್ಲಿ ಜಿಲ್ಲೆಯ ಎಂಡೊಸಲ್ಫಾನ್ ಪೀಡಿತ ಅಂಗವಿಕಲರಿಗಾಗಿ ಪುನರ್ವ೯ಸತಿ ಕೇಂದ್ರ ಆರಂಭಿಸಲು ಸುಮಾರು 5=00 ಎಕ್ರೆ ಸರಕಾರಿ ಜಮೀನು ಕಾದಿರಿಸಿ ಹಲವಾರು ವಷ೯ಗಳು ಸಂದರೂ ಪುನವ೯ಸತಿ ಕೇಂದ್ರದ ಕಟ್ಟಡಕ್ಕೆ ಸರಕಾರ ಈ ತನಕ ಯಾವುದೆ ಅನುದಾನ ಬಿಡುಗಡೆ ಮಾಡದಿರುವುದು ಖಂಡನೀಯ.ಈ ಕೂಡಲೇ ಅನುದಾನ ಬಿಡುಗಡೆ ಮಾಡಬೇಕು.

ಆನ್ ಲೈನ್ ಮೂಲಕ “ಯುಡಿಐಡಿ” ಗುರುತಿನ ಚೀಟಿಗಾಗಿ ಅಜಿ೯ ಸಲ್ಲಿಸಿದ ಅಂಗವಿಕಲರಿಗೆ ಸರಕಾರಿ ಆಸ್ಪತ್ರೆಯ ವೈದ್ಯಕೀಯ ಮಂಡಳಿ ಕೂಡಲೇ ಕಾಯಾ೯ರಂಭ ಮಾಡಿ, ಐಡಿ ಕಾಡು೯ ಮಂಜೂರಾತಿ ನೀಡಬೇಕು ಹಾಗೂ ವಿ.ಆರ್.ಡಬ್ಲ್ಯುರವರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಯಿಸಿ ಜರಗುವ ಡಿ.ಸಿ.ಕಚೇರಿ ಚಲೋ ಹೋರಾಟದಲ್ಲಿ ಜಿಲ್ಲೆಯ ಎಲ್ಲಾ ಅಂಗ ವಿಕಲರು ಭಾಗವಹಿಸ ಬೇಕು ಎಂದು ಕೋರಲಾಗಿದೆ.

ಕೋಣಿ ವೆಂಕಟೇಶ ನಾಯಕ್. ಗೌರವ ಅಧ್ಯಕ್ಷ ಮಂಜುನಾಥ ಹೆಬ್ಬಾರ್ ಕಾಲ್ತೋಡು. ಅಧ್ಯಕ್ಷ. ಕೆ.ಕೃಷ್ಣ ಪೂಜಾರಿ ಕೊಟೇಶ್ವರ. ಪ್ರಧಾನ ಕಾಯ೯ದಶಿ೯. ಕನಾ೯ಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ಉಡುಪಿ ಜಿಲ್ಲಾ ಸಮಿತಿ. 8762443894

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)