ಸ್ವಾವಲಂವನಾ ಕೇಂದ್ರ ಸ್ಥಳಾಂತರ ವಿರೋಧಿಸಿ ಸರಣಿ ಸತ್ಯಾಗ್ರಹ

0
338

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಕುಂದಾಪುರ ತಾಲೂಕು ಪಂಚಾಯತ್ ರಾಜ್ ಒಕ್ಕೂಟ ಹಾಗೂ ವಿವಿಧ ಸಂಘಟನೆಗಳಿಂದ ವಂಡ್ಸೆ ಗ್ರಾಮ ಪಂಚಾಯತಿಯ ಘನ ಮತ್ತು ದ್ರವ ಸಂಪನ್ಮೂ ನಿರ್ವಹಣಾ ಘಟಕ(Sಐಖಒ) ಹಾಗೂ ಅದರ ಸಂಸ್ಥೆಯಾದ ಸ್ವಾವಲಂಬನಾ ಹೊಲಿಗೆ ವೃತ್ತಿ ಮತ್ತು ತರಬೇತಿ ಕೇಂದ್ರವನ್ನು ಕಾನೂನು ಬಾಹಿರವಾಗಿ ಮುಚ್ಚಿಸಿರುವುದನ್ನು ಖಂಡಿಸಿ ಸರಣಿ ಸತ್ಯಾಗ್ರಹ ಬೈಂದೂರು ತಾಲೂಕಿನ ನಾಡಗುಡ್ಡೆಅಂಗಡಿಯಲ್ಲಿ ನಡೆಯಿತು.

ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಪ್ರತಿಭಟನಾ ಸಭೆಯನುದ್ದೇಶಿಸಿ ಮಾತನಾಡುತ್ತಾ ಸ್ವಾಲಂಬಿ ಕೇಂದ್ರದ ಮೂಲಕ ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡ ಮಹಿಳೆಯರ ಪರ ನಿಲ್ಲದ ಸರಕಾರ ಅವರ ವಿರುದ್ಧವೆ ಹೋರಾಟಕ್ಕೆ ಇಳಿದು ಬದುಕನ್ನು ಬೀದಿಗೆ ಬರುವಂತೆ ಮಾಡಿದೆ.ನಿರಂತರವಾಗಿ ಸರಣಿ ಸತ್ಯಾಗ್ರಹದ ಮೂಲಕ ಖಂಡಿಸುತ್ತಾ ಬಂದಿದ್ದರು ಕ್ಷೇತ್ರದ ಶಾಸಕರಾಗಲಿ ಜಿಲ್ಲಾಡಳಿತವಾಗಲಿ ಮಾತುಕತೆಗೆ ಮುಂದಾಗದೆ ಮೌನವನ್ನು ತಾಳಿದೆ ಎಂದರು.ಉದಯ ಕುಮಾರ್ ಶೆಟ್ಟಿ ಮಾತನಾಡಿದರು.

ಉಡುಪಿ ಜಿಲ್ಲಾ ರೈತ ಸಂಘದ ಕಾರ್ಯದರ್ಶಿ ಸಂತೋಷ್ ಶೆಟ್ಟಿ ಬಲಾಡಿ,ವಕ್ತಾರ ವಿಕಾಸ್ ಹೆಗ್ಡೆ,ಕಂಬದಕೋಣೆ ರೈತಾ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ,ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜು ಪೂಜಾರಿ, ಜಿ.ಪಂ ಸದಸ್ಯೆ ಗೌರಿ ದೇವಾಡಿಗ,ತಾ.ಪಂ ಸದಸ್ಯ ಜಗದೀಶ್ ದೇವಾಡಿಗ ಉಪ್ಪುಂದ, ಮಾಜಿ ತಾ,ಪಂ ಸದಸ್ಯ ಕೆನಡಿ ಪಿರೇರಾ,ಮಾಜಿ ಗ್ರಾಮ.ಪಂ ಉಪಾಧ್ಯಕ್ಷ ಅರವಿಂದ ಬಿಲ್ಲವ,ಮಾಜಿ ಗ್ರಾಮ.ಪಂ ಸದಸ್ಯರಾದ ರಾಮ ಪೂಜಾರಿ, ಸಂದೀಪ ಪೂಜಾರಿ, ಶೀನಾ ದೇವಾಡಿಗ, ವಾಸು ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಕೆನಡಿ ಪಿರೇರಾ ಪ್ರಾಸ್ತವಿಕ ಮಾತುಗಳನ್ನು ಆಡಿ ಸ್ವಾಗತಿಸಿದರು,ಕಾಂಗ್ರೆಸಿನ ಬೈಂದೂರು ಬ್ಲಾಕ್ ಅಧ್ಯಕ್ಷ ಮದನ್ ಕುಮಾರ್ ವಂದಿಸಿದರು

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)