ಬಿಜೂರು ಮೂರ್ಗೋಳಿಹಕ್ಲು ಶಾಲೆ ರಸ್ತೆ ನಾಮಫಲಕ ಉದ್ಘಾಟನೆ

0
664

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (3) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)

ಉಪ್ಪುಂದ : ಬಿಜೂರು ನಂದಿಕೇಶ್ವರ ಯುವಕ ಮಂಡಲ ರಿ.ವತಿಯಿಂದ ಬಿಜೂರು ಮೂರ್ಗೋಳಿಹಕ್ಲು ಶಾಲಾ ರಸ್ತೆಗೆ ಕೊಡುಗೆಯಾಗಿ ನೀಡಿರುವ ರಸ್ತೆಯ ನಾಮಫಲಕ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ವಿಶ್ವ ಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಶ್ರೀಧರ ಬಿಜೂರು ನಾಲಫಲಕ ಅನಾವರಣಗೊಳಿಸಿ ಮಾತನಾಡಿ, ಗ್ರಾಮದ ಅಭಿವೃದ್ಧಿಗೆ ಸ್ಥಳೀಯ ಸಂಘ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿರುತ್ತದೆ. ಊರಿನ ಯುವ ಜನತೆ ಸಂಘಟನೆಗಳ ಮೂಲಕ ತಮ್ಮೂರಿನ ಬೆಳವಣಿಗೆ ಬಗ್ಗೆ ಚಿಂತಿಸಿದಾಗ, ಸಾಮಾಜಿಕ ಚಟುವಟಿಕೆಗಳನ್ನು ನಡೆಸಿದಾಗ ಸಂಘಟನೆಯ ಉದ್ದೇಶ ಈಡೇರುತ್ತದೆ. ಜೊತೆಗೆ ಗ್ರಾಮದ ಅಭಿವೃದ್ಧಿಗೆ ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.

  ಉಪ್ಪುಂದ ಶ್ರೀ ದುರ್ಗಾಪರಮೇಶ್ವರೀ ದೇಗುಲದ ಮಾಜಿ ಧರ್ಮದರ್ಶಿ ಜಯರಾಮ ಶೆಟ್ಟಿ ಬಿಜೂರು ಯುವಕ ಮಂಡಲದ ಸಾಮಾಜಿಕ ಚಟುವಟಿಕೆಗಳಿಗೆ ಶುಭಹಾರೈಸಿದರು.

ಈ ಸಂದರ್ಭ ರಾಜ್ಯ ಸರಕಾರದ ಯೋಜನಾ ಆಯೋಗದ ಅಧಿಕಾರೇತರ ಸದಸ್ಯೆ ಪ್ರಿರ್ಯದರ್ಶಿನಿ ದೇವಾಡಿಗ, ಬಿಜೂರು ಶ್ರೀ ಹಿರೇ ಮಹಾಲಿಂಗೇಶ್ವರ ದೇಗುಲದ ಧರ್ಮದರ್ಶಿ ಸುರೇಶ ಬಿಜೂರು, ಬಿಜೂರು ಸರಕಾರಿ ಪ್ರೌಢ ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ರಾಜೇಂದ್ರ, ವಜ್ರ ದುಂಬಿ ಗೆಳೆಯರ ಬಳಗ ಅಧ್ಯಕ್ಷ ರಾಘವೇಂದ್ರ ದೇವಾಡಿಗ, ಕಮಲೇಶ ಬೆಸ್ಕೂರು, ಬಿಜೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ನಾಗರಾಜ ಎಸ್., ಉಪ್ಪುಂದ ಗ್ರಾ.ಪಂ. ಸದಸ್ಯ ನಾಗರಾಜ ಶೇಟ್, ಸಂಘದ ಅಧ್ಯಕ್ಷ ರಮೇಶ ವಿ.ದೇವಾಡಿಗ, ಉದ್ಯಮಿ ಗುರು ಪಡಿಯಾರ್, ಸತ್ಯನಾರಾಯಣ ಶೇಟ್ ಹಾಗೂ ಸಂಘದ ಪದಾ„ಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

ನಂದಿಕೇಶ್ವರ ಯುವಕ ಮಂಡಲದ ಗೌರವಾಧ್ಯಕ್ಷ ಬಿ.ಜಿ.ಲಕ್ಷ್ಮೀಕಾಂತ್ ಬೆಸ್ಕೂರು ಕಾರ್ಯಕ್ರಮ ಸ್ವಾಗತಿಸಿ, ನಿರ್ವಹಿಸಿದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (3) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)