ಖಂದಕೋಣೆ ರೈತರ ಸೇ.ಸ.ಸಂಘಕ್ಕೆ ರೈತರ ಪರವಾಗಿ ನೇತೃತ್ವ ವಹಿಸಿಕೊಳ್ಳುವಂತೆ ಮನವಿ

0
449

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಉಪ್ಪುಂದ: ಭತ್ತ ಕಟಾವು ಯಂತ್ರಗಳ ಬಾಡಿಗೆ ದರವು ನಿಗದಿತ ಮಿತಿಗಿಂತ ಹೆಚ್ಚು ದರ ವಸೂಲಿ ಮಾಡುತ್ತಿರುವುದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರೈತರ ಪರವಾಗಿ ನೇತೃತ್ವವನ್ನು ವಹಿಸಿಕೊಳ್ಳಬೇಕು ಎಂದು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ.ಉಪ್ಪುಂದ ಇದರ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಅವರಿಗೆ 9 ಗ್ರಾಮಗಳ ರೈತರು ಮಂಗಳವಾರ ಭೇಟಿಯಾಗಿ ಮನವಿ ಮಾಡಿದರು.

ಕರಾವಳಿ ಪ್ರದೇಶಗಳಿಗೆ ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಭತ್ತ ಕಟಾವು ಯಂತ್ರಗಳು ಆಗಮಿಸಿವೆ. ರೈತರು ಕೃಷಿ ಕೂಲಿಯಾಳುಗಳ ಕೊರತೆ, ಮಳೆ, ಖರ್ಚುವೆಚ್ಚಗಳ ಲೆಕ್ಕಚಾರಗಳಿಂದಾಗಿ ಸಾಂಪ್ರದಾಯಿಕ ಕೊಯ್ಲು ಪದ್ದತಿಗಿಂತ ಯಂತ್ರಗಳ ಮೂಲಕ ಕಟಾವು ಮಾಡುವುದು ಲಾಭದಾಯಿಕ ಆಗಿದ್ದು ಇದಕ್ಕೆ ಮೊದಲ ಆದ್ಯತೆ ನೀಡಿದ್ದಾರೆ. ಯಂತ್ರಗಳ ಬಾಡಿಗೆ ದರವು ಗಂಟೆ ವರ್ಷದಿಂದ ವರ್ಷಕ್ಕೆ ಮಿತಿಗಿಂತ ಅಧಿಕ ಪ್ರಮಾಣದಲ್ಲಿ ಹೆಚ್ಚಳ ಮಾಡುತ್ತಿರುವುದು ರೈತರನ್ನು ಕೆಂಗಡಿಸಿದೆ.

ಇದೊಂದು ಮಾಫಿಯಾ : ಕಟಾವು ಮಾಡುವ ಸಂದರ್ಭ ರೈತರು ಯಂತ್ರಗಳ ಚಾಲಕ ಹಾಗೂ ಅವರೊಂದಿಗೆ ಬರುವ ವ್ಯಕ್ತಿಗಳೊಂದಿಗೆ ದರ ಹೆಚ್ಚಳದ ಬಗ್ಗೆ ತಕರಾರು ತೆಗೆದಾಗ ನಾವು ಇಲ್ಲಿ ಬಂದು ಕಟಾವು ಮಾಡಿ ಹೋಗುವುದಕ್ಕೆ ಕೆಲವು ದಲ್ಲಾಳಿಗಳಿಗೆ ಗಂಟೆಗಳ ಲೆಕ್ಕಚಾರದಲ್ಲಿ ಹಣ ಸಂದಾಯ ಮಾಡುವುದರ ಕುರಿತು ತಿಳಿಸಿದ್ದಾರೆ. ಸ್ಥಳೀಯ ಖಾಸಗಿ ಪ್ರಭಾವಿ ಏಜೆಂಟ್ ಇರುವುದರಿಂದ ಯಂತ್ರಗಳ ಮಾಲಕರು-ಚಾಲಕರು ರೂ.1800ರಿಂದ ರೂ.2200. ರೂ.2300ಗೆ ಹೆಚ್ಚಿಸಿದ್ದಾರೆ. ರೈತರಿಂದ ಈ ಭಾರಿ ಪ್ರತಿ ಗಂಟೆಗೆ ಸರಾಸರಿ ರೂ.500 ಹೆಚ್ಚಿಸಿದ್ದಾರೆ. ಇದು ರೈತರಿಗೆ ಹೊರೆಯಾಗಿ ಪರಿಣಮಿಸಿದೆ. ಅಲ್ಲದೆ ಇದನ್ನು ನಿಯಂತ್ರಿಸದೆ ಇದ್ದಲ್ಲಿ ಇದೊಂದು ದೊಡ್ಡ ಮಟ್ಟದ ದಂಧೆಯಾಗುವ ಆತಂಕವನ್ನು ರೈತರು ತೊಡಿಕೊಂಡಿದ್ದಾರೆ.

ಕೃಷಿ ಇಲಾಖೆಯಿಂದ ಸಹಾಯಧನ ಪಡೆದು ನಿರ್ವಹಿಸಲಾಗುತ್ತಿರುವ ಯಂತ್ರಮನೆಯ ಯಂತ್ರಗಳಿಗೆ ಹಾಗೂ ಖಾಸಗಿಯವರು ನಿಗದಿಗೊಳಿಸಿದ ದರವನ್ನೇ ನಿಗದಿ ಮಾಡಿರುವುದು ಮರುಪರಿಶೀಲನೆ ನಡೆಸುವ ಅಗತ್ಯವಿದೆ. ಈ ಬಗ್ಗೆ ಕೃಷಿ ಇಲಾಖೆಗಳು ಹಾಗೂ ಜಿಲ್ಲಾಡಳಿತ ಮಧ್ಯಪ್ರವೇಶ ಮಾಡಿ ಅವೈಜಾನಿಕವಾಗಿ ದರ ನಿಗದಿ ಮಾಡುವುದರ ಬಗ್ಗೆ ಹಾಗೂ ಖಾಸಗಿ ಮಾಫಿಯಾದ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಮಾಡಲು ಸಂಘಟನೆ ನೇತೃತ್ವವನ್ನು ವಹಿಸಬೇಕೆಂದು ಕೋರಿದರು.

ಎಸ್.ಪ್ರಕಾಶ್ಚಂದ್ರ ಶೆಟ್ಟಿ ಅವರು ವಿವಿಧ ಇಲಾಖೆಗಳೊಂದಿಗೆ ಚರ್ಚೆ ನಡೆಸಿ, ಪ್ರಭಾವಿ ಖಾಸಗಿ ವ್ಯಕ್ತಿಗಳ ಒತ್ತಡಕ್ಕೆ ಮಣಿದು ಇಲಾಖೆ ಅ„ಕಾರಿಗಳು ಯಂತ್ರಮನೆಯ ಯಂತ್ರಗಳ ಬಾಡಿಗೆ ರೂ.1800. ನಿಗದಿ ಮಾಡಿದ್ದಾರೆ. ಖಾಸಗಿ ಯಂತ್ರಗಳು ದುಬಾರಿ ಬಾಡಿಗೆ ಪಡೆಯುತ್ತಿರುವುದು ಗಮನದಲ್ಲಿ ಇದ್ದರು ಕೂಡ ಕೃಷಿ ಇಲಾಖೆ ಮೌನ ವಹಿಸಿರುವುದು ರೈತರ ಬಗ್ಗೆ ಇರುವ ಕಾಳಜಿ ತೋರ್ಪಡಿಸುತ್ತದೆ. ಯಂತ್ರಗಳ ಮಾಲಕರು ಖಾಸಗಿ ದಲ್ಲಾಳಿಗಳ ಬೆದರಿಕೆಗೆ ಮಣಿದು ಅವರಿಗೆ ಕಮಿಷನ್ ನೀಡುವ ಸಲುವಾಗಿ ರೈತರಿಂದ ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ. ರೈತರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು ತಮ್ಮೂರಿಗೆ ಬಂದಿರುವ ಯಂತ್ರಗಳ ಮಾಲಕರಿಗೆ ಏಜೆಂಟರುಗಳಿಂದ ಸಮಸ್ಯೆಗಳಾಗದಂತೆ ನೋಡಿಕೊಳ್ಳುವ ಜವಬ್ದಾರಿ ನಾವು ತೆಗೆದುಕೊಳ್ಳುತ್ತೇವೆ. ಸಂಘದ ವ್ಯಾಪ್ತಿಯ 9ಗ್ರಾಮಗಳಿಗೆ 22ಜನ ಮೇಲುಸ್ತುವಾರಿ ನೇಮಕ ಮಾಡಲಾಗಿದೆ. ರೈತರು ತಮ್ಮ ತಮ್ಮ ನಡುವೆ ಪೈಪೊಟಿಗೆ ಬೀಳದೆ ರೂ.2000. ಕ್ಕಿಂತ ಹೆಚ್ಚು ಹಣ ನೀಡದೆ ಕಟಾವು ಮಾಡಿಸಿಕೊಳ್ಳಬೇಕು.ರೈತರು ದರ ನೀಡುವಲ್ಲಿ ಏಜೆಂಟರು ಅಡ್ಡಿ ಪಡಿಸಿದ್ದಲ್ಲಿ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘವು ರೈತರಿಗೆ ಸಹಕಾರ ನೀಡಲಿದೆ. 9980308176, 9741372091, 6366600320 ಸಂಪರ್ಕಿಸಲು ತಿಳಿಸಿದರು. ಅ„ಕರ ದರ ವಸೂಲಿ ನಿಯಂತ್ರಿಸಲು ಜಿಲ್ಲಾಡಳಿತ, ಜನಪ್ರತಿನಿ„ಗಳು ಕ್ರಮಕೈಗೊಳ್ಳಬೇಕು ಇಲ್ಲದಿದ್ದಲ್ಲಿ ಹೋರಾಟ ನಡೆಸುತ್ತೇವೆ ಎಂದು ತಿಳಿಸಿದರು.

ಜಿಲ್ಲಾ ಕಚೇರಿ ಬಳಿ ಪ್ರತಿಭಟನೆ : ಖಾಸಗಿ ಏಜೆಂಟರುಗಳ ಮಾಫಿಯಾದಿಂದಾಗಿ ಭತ್ತ ಕಟಾವು ಮಾಡುವ ವ್ಯಕ್ತಿಗಳು ರೈತರಿಂದ ದುಬಾರಿ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ. ಕೃಷಿ ಇಲಾಖೆ ಮೌನ ವಹಿಸಿದೆ. ಜನಪ್ರತಿನಿಧಿಗಳ, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗಳ ಸ್ಪಂದನೆ ಅಗತ್ಯವಾಗಿದೆ. ಸಂಬಧಪಟ್ಟ ಇಲಾಖೆಗಳು ಈ ದಲ್ಲಾಳಿಗಳನ್ನು ನಿಯಂತ್ರಿಸಲು ಕ್ರಮಕೈಗೊಳ್ಳದೆ ಇದ್ದರೆ ರೈತರೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗಳ ಮುಂದೆ ತೀವ್ರ ಹೋರಾಟ ನಡೆಸುವ ತೀರ್ಮಾನ ಕೈಗೊಳ್ಳುತ್ತೇವೆ. : ಎಸ್.ಪ್ರಕಾಶ್ಚಂದ್ರ ಶೆಟ್ಟಿ ಅಧ್ಯಕ್ಷರು ಖಂಬದಕೋಣೆ ರೈ.ಸೇ.ಸ.ಸಂಘ ಉಪ್ಪುಂದ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)