ಬೈಂದೂರು : ಸಿಐಟಿಯು ಕಾಮಿ೯ಕರ ಬೃಹತ್ ಸಮಾವೇಶ, ನವಂಬರ್:26, ಅಖಿಲ ಭಾರತ ಸಾವ೯ತ್ರಿಕ ಮುಷ್ಕರಕ್ಕೆ ಬೆಂಬಲ 

0
230

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಶಿಕ್ಷಣ, ಆರೋಗ್ಯ, ಕೃಷಿ ,ಸಾವ೯ಜನಿಕ ಉದ್ಯಮಗಳಾದ ವಿಮೆ, ದೂರಸಂಪಕ೯, ಬ್ಯಾಂಕ್, ರಕ್ಷಣೆ ಎನ್ನುವ ಎಲ್ಲಾ ಆಯಕಟ್ಟಿನ ರಂಗಗಳು ಕಾಪೊ೯ರೇಟ್ ಧಣಿಗಳ ಕೈ ವಶವಾಗವುದನ್ನು ವಿರೋಧಿಸಿ, ಸರಕಾರದ ಕಾಮಿ೯ಕ ವಿರೋಧಿ ನೀತಿಗಳನ್ನು ಪ್ರತಿಭಟಿಸಿ, 26 ನವಂಬರ್,2020 ರಂದು ಜರಗುವ ಅಖಿಲ ಭಾರತ ಸಾವ೯ತ್ರಿಕ ಮುಷ್ಕರವನ್ನು ಬೈಂದೂರು ತಾಲೂಕು ಸಿಐಟಿಯು, ಸ್ಥಳೀಯ ಇತರ ಕಾಮಿ೯ಕ ಸಂಘಗಳ ಜೊತೆ ಜಂಟಿ ಸಮಿತಿಗಳ ನೇತೃತ್ವದಲ್ಲಿ ಯಶಸ್ವಿಗೊಳಿಸಬೇಕು ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ಕೆ.ಶಂಕರ ಹೇಳಿದರು.

ಸಿಐಟಿಯುಗೆ ಸಂಯೋಜಿಸಲ್ಪಟ್ಟ ಕಾಮಿ೯ಕ ಸಂಘಗಳ ಆಶ್ರಯದಲ್ಲಿ ನ 26 ರಂದು ಬೈಂದೂರು ಸಿಐಟಿಯು ಕಚೇರಿಯಲ್ಲಿ ಜರಗಿದ ಕಾಮಿ೯ಕರ ಸಮಾವೇಶ ಉದ್ಘ್ಟಟಿಸಿ ಅವರು ಮಾತನಾಡಿದರು.ಸಿಐಟಿಯು ಉಡುಪಿ ಜಿಲ್ಲಾ ಪ್ರಧಾನ ಕಾಯ೯ದಶಿ೯ ಸರೇಶ್ ಕಲ್ಲಾಗರ ರವರು ಸಭೆಯನ್ನುದ್ದೆಶಿಸಿ ಮಾತನಾಡುತ್ತಾ, ಕೋಟ್ಯಾಂತರ ಜನರ ಬೆವರು ಮತ್ತು ರಕ್ತದಿಂದ ಹಾಗೂ ದೇಶದ ತೆರಿಗೆ ಹಣದಿಂದ ಕಟ್ಟಲ್ಪಟ್ಟ ಈ ಸಾವ೯ಜನಿಕ ವ್ಯವಸ್ಥೆಗಳನ್ನು ಖಾಸಗೀಕರಣ ಗೊಳಿಸುತ್ತಿರುವುದನ್ನು ಕಾಮಿ೯ಕ ಸಂಘಟನೆ ರಾಜಿ ರಹಿತ ಹೋರಾಟ ಮಾಡಲಿದೆ ಎಂದು ಹೇಳಿದರು.ರೈತ,ಕಾಮಿ೯ಕ ಮುಖಂಡ ಹಾಗೂ ಕಮ್ಯುನಿಷ್ಟ್ ನೇತಾರರಾದ ಮಾರುತಿ ಮಾನಪಡೆಯವರು ನಿಧನರಾದ ಬಗ್ಗೆ ಮುಖಂಡ ವೆಂಕಟೇಶ ಕೋಣಿ ನುಡಿ ನಮನ ಸಲ್ಲಿಸಿದರು.

ಕಾಮಿ೯ಕ ಮುಖಂಡರಾದ ರೊನಾಲ್ಡ್ ರಾಜೇಶ್ ಕ್ವಾಡ್ರಸ್ ಬಿಜೂರು, ರಾಜೀವ ಪಡುಕೋಣೆ, ಮಾಧವ ದೇವಾಡಿಗ ಉಪ್ಪುಂದ, ಶ್ರೀಧರ ದೇವಾಡಿಗ ಉಪ್ಪುಂದ, ಅಮ್ಮಯ್ಯ ಪೂಜಾರಿ ಬಿಜೂರು, ರಾಮ ಖಂಭದ ಕೋಣೆ, ನಾಗರತ್ನ ನಾಡ ಮೊದಲಾದವರು ಉಪಸ್ಥಿತರಿದ್ದರು.

ಸಿಐಟಿಯು ಬೈಂದೂರು ತಾಲೂಕು ಸಂಚಾಲಕ ಉದಯ ಗಾಣಿಗ ಮೊಗೇರಿ ಅಧ್ಯಕ್ಷತೆ ವಹಿಸಿದ್ದರು. ಗಣೇಶ ತೊಂಡೆಮಕ್ಕಿ ಸ್ವಾಗತಿಸಿ, ಶೀಲಾವತಿ ಹಡವು ವಂದಿಸಿದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)