ಗಂಗೊಳ್ಳಿ: ಮನೆಗೆ ಸೋಡಾ ಬಾಟಲಿ ಎಸೆತ, ಕಿಟಕಿ ಗಾಜಿಗೆ ಹಾನಿ; ಇಬ್ಬರು ಆರೋಪಿಗಳ ಬಂಧನ

0
218

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಗಂಗೊಳ್ಳಿ : ಇಲ್ಲಿನ ಜಾಮೀಯ ಮಸೀದಿ ಸಮೀಪದ ಮನೆಯೊಂದಕ್ಕೆ ಅ.25ರಂದು ರಾತ್ರಿ 11ಗಂಟೆ ಸುಮಾರಿಗೆ ಕಿಡಿಗೇಡಿಗಳು ಸೋಡಾ ಬಾಟಲಿ ಎಸೆದು ಕಿಟಕಿ ಗಾಜುಗಳನ್ನು ಪುಡಿಗೈದಿರುವ ಬಗ್ಗೆ ವರದಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ.
ಗಂಗೊಳ್ಳಿ ದಾಕುಹಿತ್ಲುವಿನ ಧನುಷ್(22), ಕಿರಣ್(23) ಬಂಧಿತ ಆರೋಪಿಗಳು. ಇನ್ನೋರ್ವ ಆರೋಪಿ ನಿಖಿಲ್ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.

ಇವರು ರಾತ್ರಿ ಬೈಕಿನಲ್ಲಿ ಬಂದು ಇಫ್ತಿಕಾರ್ ಅಹ್ಮದ್ ಎಂಬವರ ಮನೆಗೆ ಸೋಡಾ ಬಾಟಲಿ ಎಸೆದಿದ್ದು, ಇದರಿಂದ ಕಿಟಕಿ ಗಾಜುಗಳು ಪುಡಿಯಾಗಿವೆ. ಮನೆಯಿಂದ ಹೊರಗಡೆ ಬಂದ ಇಫ್ತಿಕಾರ್ ಆರೋಪಿಗಳನ್ನು ಗುರುತಿಸಿದ್ದು, ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅದರಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಇಂದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)