ಜಿ .ಶಂಕರ್‌ ಆರೋಗ್ಯ ಕಾರ್ಡ್‌ ನೋಂದಣಿ ಆರಂಭ: ₹50 ಸಾವಿರ ವಿಮೆ ಸೌಲಭ್ಯ

0
773

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (7) ಸಮ್ಮತ (1) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)

ಉಡುಪಿ: ಜಿ.ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಅಂಬಲಪಾಡಿ ಇದರ ಪ್ರವರ್ತಕ ಡಾ.ಜಿ.ಶಂಕರ್‌ ಅವರು ಮಣಿಪಾಲ ಸಿಗ್ಮಾ ಹೆಲ್ತ್‌ ಇನ್ಸೂರೆನ್ಸ್‌ ಕಂಪೆನಿ ಹಾಗೂ ಮಾಹೆ ಮಣಿಪಾಲ ಸಹಯೋಗದಲ್ಲಿ ಹೊಸದಾಗಿ ಜಿ.ಶಂಕರ್‌ ಆರೋಗ್ಯ ಸುರಕ್ಷಾ ಕಾರ್ಡ್‌ ಯೋಜನೆಯನ್ನು ಆರಂಭಿಸಿದ್ದಾರೆ. ಜಾತಿ, ಮತ ಬೇಧವಿಲ್ಲದೆ ಬಡ ಜನರ ಸ್ವಾಸ್ಥ್ಯಕ್ಕಾಗಿ ಡಾ.ಜಿ.ಶಂಕರ್‌ ಅವರು ಹಮ್ಮಿಕೊಂಡ ಈ ಆರೋಗ್ಯ ವಿಮೆ ಯೋಜನೆ ಇದಾಗಿದ್ದು, ಮಣಿಪಾಲ ಸಮೂಹ ಆಸ್ಪತ್ರೆಗಳಿಗೆ ಮಾತ್ರ ಸೀಮಿತವಾಗಿದೆ.

ನೂತನ ಯೋಜನೆಯಲ್ಲಿ ಏನೆಲ್ಲಾಸೌಲಭ್ಯಗಳು ?: ಕಡಿಮೆ ವರಮಾನವಿರುವ ಕುಟುಂಬಗಳಿಗೆ ಈ ಯೋಜನೆ ವರದಾನವಾಗಲಿದ್ದು, ಮಣಿಪಾಲ ಕೆಎಂಸಿ ಆಸ್ಪತ್ರೆಯ ಹೊರ ರೋಗಿ ವಿಭಾಗದ ವೈದ್ಯಕೀಯ ಚಿಕಿತ್ಸೆಯಲ್ಲಿ ಶೇ.70, ಉಡುಪಿ ಟಿಎಂಎ ಪೈ ಆಸ್ಪತ್ರೆ ಹೊರ ರೋಗಿ ವಿಭಾಗದ ವೈದ್ಯಕೀಯ ಚಿಕಿತ್ಸೆಯಲ್ಲಿ ಶೇ.60, ಮಂಗಳೂರು ಅತ್ತಾವರ ಕೆಎಂಸಿ ಆಸ್ಪತ್ರೆಯ ಹೊರ ರೋಗಿ ವಿಭಾಗದ ವೈದ್ಯಕೀಯ ಚಿಕಿತ್ಸೆಯಲ್ಲಿ ಶೇ.100 ರಿಯಾಯಿತಿ ಇರಲಿದೆ.

ಈ ಹಿಂದಿನ ಆರೋಗ್ಯ ಸುರಕ್ಷಾ ಯೋಜನೆಯಲ್ಲಿ ಹಿಸ್ಟಿರೆಕ್ಟೊಮಿ, ಅಪೆಂಡೆಕ್ಟೊಮಿ, ನಾರ್ಮಲ್‌ ಡೆಲಿವರಿ, ಡೆಲಿವರಿ ಸಿ-ಸೆಕ್ಷನ್‌ ಮೊದಲಾದ ಶಸ್ತ್ರ ಚಿಕಿತ್ಸೆಗಳಿಗೆ 25,000ರೂ.ಮಾತ್ರ ವಿಮೆ ಕ್ಲೇಮು ಪಡೆಯುವ ಮಿತಿ ಇತ್ತು. ಆದರೆ ಈ ಹೊಸ ಯೋಜನೆಯಲ್ಲಿ ಯಾವುದೇ ಚಿಕಿತ್ಸೆಗೆ ಪ್ರತ್ಯೇಕ ಮಿತಿ ಇಲ್ಲದೆ ಶೇ.10 ಕೋಪೆಯೊಂದಿಗೆ 50,000 ರೂ.ಕ್ಲೇಮು ಪಡೆಯಬಹುದಾಗಿದೆ. ವಿಮಾ ಕುಟುಂಬದ ಸದಸ್ಯ ಯಾವುದೇ ರೋಗದ ಚಿಕ್ಸಿತೆಗೆ ಒಳರೋಗಿಯಾಗಿ ದಾಖಲಾದಲ್ಲಿ ನಗದು ರಹಿತವಾಗಿ ಚಿಕಿತ್ಸೆ ಪಡೆಯುವ ಈ ಸೌಲಭ್ಯ ಈ ಕಾರ್ಡಿನಲ್ಲಿದೆ.

ಮೃತ ಸದಸ್ಯನಿಗೆ 50,000 ರೂ.ಪರಿಹಾರ : ವಿಮಾ ಅವಧಿಯಲ್ಲಿ ವಿಮೆ ಮಾಡಿದ ಕುಟುಂಬದ ಸದಸ್ಯ ಅಪಘಾತದಲ್ಲಿ ಮೃತ ಪಟ್ಟಲ್ಲಿ 50,000ರೂ. ಪರಿಹಾರ ಪಡೆಯಬಹುದು. ನವಜಾತ ಶಿಶುವಿನ ಚಿಕಿತ್ಸೆ ಹಾಗೂ ಆರೈಕೆಗೂ ಕೂಡಾ ಈ ಯೋಜನೆ ಅನ್ವಯವಾಗಲಿದ್ದು, ನಾಳೆಯ ಆರೋಗ್ಯ ರಕ್ಷಣೆಗೆ ಇಂದಿನ ಬುನಾದಿಯಾಗಿದೆ. ಯಾವುದೇ ಷರತ್ತುಗಳಿಲ್ಲದೆ ಎಲ್ಲರಿಗೂ ಹೊಸದಾಗಿ ಕಾರ್ಡ್‌ ಪಡೆಯಲು ಈ ಯೋಜನೆಯಡಿ ಅವಕಾಶವಿದೆ. ಈ ಹಿಂದೆ ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡ್‌ ಹೊಂದಿದ್ದವರೂ, ಯಾವುದೇ ಕ್ಲಷ್ಟರ್‌ ಸದಸ್ಯರು ಜಿ. ಶಂಕರರ್‌ ಆರೋಗ್ಯ ಕಾರ್ಡ್‌ ಪಡೆಯಬಹುದಾಗಿದೆ. ಈ ನೂತನ ಜಿ.ಶಂಕರ್‌ ಆರೋಗ್ಯ ಸುರಕ್ಷಾ ಕಾರ್ಡ್‌ ಪಡೆಯಬಹುದಾಗಿದೆ.

ಎಲ್ಲಿ ನೋಂದಣಿ ? : ಈ ಹಿಂದೆ ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡ್‌ ಹೊಂದಿದ್ದ, ಹಳೆ ಕಾರ್ಡ್‌,ಆಧಾರ್‌ ಕಾರ್ಡ್‌ ಮತ್ತು ಕುಟುಂಬದ ರೇಶನ್‌ ಕಾರ್ಡ್‌ ಪ್ರತಿಯನ್ನು ನ.1ರಿಂದ 15ರ ಒಳಗೆ ಮೊಗವೀರ ಯುವ ಸಂಘಟನೆಯ ಜಿಲ್ಲಾ ಕಚೇರಿ, ಮಾಧವ ಮಂಗಳ ಸಮುದಾಯ ಭವನ, ಶಾಮಿಲಿ ಹಾಲ್‌ನ ಎದುರು, ಅಂಬಲಪಾಡಿ, ಉಡುಪಿ ಅಥವಾ ಮೊಗವೀರ ಯುವ ಸಂಘಟನೆಯ ಘಟಕಗಳನ್ನು ಸಂಪರ್ಕಿಸಬಹುದು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (7) ಸಮ್ಮತ (1) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)