ಮುರುಡೇಶ್ವರ : ಸಮುದ್ರ ಪಾಲಾಗಿದ್ದ ಮೂವರು ವಿದ್ಯಾರ್ಥಿಗಳ ರಕ್ಷಣೆ

0
613

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಭಟ್ಕಳ : ಬೆಂಗಳೂರಿನಿಂದ ಪ್ರವಾಸಕ್ಕೆಂದು ಮುರುಡೇಶ್ವರಕ್ಕೆ ಬಂದು ಈಜಲು ಸಮುದ್ರಕ್ಕೆ ಇಳಿದು, ನೀರುಪಾಲಾಗಲಿದ್ದ ಬೆಂಗಳೂರು ಮೂಲದ ಮೂವರು ವಿದ್ಯಾರ್ಥಿಗಳನ್ನು ಮುರುಡೇಶ್ವರ ಬೀಚ್ ಲೈಫ್ ಗಾರ್ಡ್ ಸಿಬ್ಬಂದಿ ಸ್ಥಳೀಯ ಮೀನುಗಾರರ ಸಹಕಾರದೊಂದಿಗೆ ರಕ್ಷಿಸಿ ದಡಕ್ಕೆ ತಂದಿರುವ ಘಟನೆ ರವಿವಾರ ನಡೆದಿದೆ.

ಬೆಂಗಳೂರು ವಿಐಟಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಸಾತ್ವಿಕ್ ಚಿಕ್ಕಬಳ್ಳಾಪುರ (19), ಆದರ್ಶ ಚಿಕ್ಕಬಳ್ಳಾಪುರ (19), ನವೀನ್ ಚಿಕ್ಕಬಳ್ಳಾಪುರ (19) ಎಂದು ಗುರುತಿಸಲಾಗಿದೆ.

ಬೆಂಗಳೂರಿನಿಂದ ಬಂದ 9 ಗೆಳೆಯರು ಮುರುಡೇಶ್ವರ ಸಮುದ್ರಕ್ಕೆ ಈಜಲು ತೆರಳಿದ ಸಂದರ್ಭದಲ್ಲಿ ಘಟನೆ ಸಂಭವಿಸಿದೆ. ಲೈಫ್‍ಗಾರ್ಡ್ ಸಿಬ್ಬಂದಿ ಜಯರಾಮ್ ಹರಿಕಾಂತ, ಶಶಿಧರ ನಾಯ್ಕ, ಮೀನುಗಾರರಾದ ಪುರ್ಸು ಹರಿಕಾಂತ, ಸಂತೋಷ ಹರಿಕಾಂತ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)