ಬೈಂದೂರು ಪೂರ್ಣ ಪ್ರಮಾಣದ ತಾಲೂಕು ರಚನೆ ಕನಸು ನನಸಾಗಲಿ

0
742

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (3) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು : ಬೈಂದೂರು ತಾಲೂಕು ರಚನೆ 40ವರ್ಷದ ಹಿಂದಿನ ಪರಿಕಲ್ಪನೆಯಾಗಿದ್ದು ಕೊನೆಗೂ 3ವರ್ಷದ ಹಿಂದಿನ ಸರ್ಕಾರ ಹೊಸ ತಾಲೂಕು ಘೋಷಣೆ ಮಾಡಿದ್ದು ಇಲ್ಲಿಯವರೆಗೂ ಪರಿಪೂರ್ಣ ತಾಲೂಕು ರಚನೆಯ ಕನಸು ಈಡೇರಲೇ ಇಲ್ಲ. ಅಧಿಕಾರ ವಿಕೇಂದ್ರಿಕರಣದ ಪರಿಕಲ್ಪನೆ ಈಡೇರಿಸಬೇಕಾಗಿದೆ. 7ವರ್ಷ ಹಿಂದಿನ ಸರ್ಕಾರ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಆಗಿನ ಬೈಂದೂರು ಶಾಸಕ ಕೆ. ಲಕ್ಷ್ಮಿನಾರಾಯಣರವರು ಬೈಂದೂರು ತಾಲೂಕನ್ನು ಅಂದಿನ ರಾಜ್ಯ ಬಜೆಟ್‍ನಲ್ಲಿ ಒತ್ತಾಯ ಹೇರಿ ತಾಲೂಕು ಘೋಷಣೆ ಮಾಡಿಸಿದ್ದರು. ನಂತರ ಹೊಸ ಸರ್ಕಾರ ಬಂದು ಎಲ್ಲಾ 43 ತಾಲೂಕು ರದ್ದು ಗೊಳಿಸಿದರು. ಪುನಃ ಆ ಸರ್ಕಾರದ ಅವಧಿ ಮುಗಿಯುವ ಪೂರ್ವದಲ್ಲಿ ಹೊಸ ಹೆಚ್ಚುವರಿ ತಾಲೂಕುಗಳನ್ನು ಘೋಷಣೆ ಮಾಡಿದ್ದು ಆಗ ಶಾಸಕ ಕೆ. ಗೋಪಾಲ ಪೂಜಾರಿಯವರು ಹೆಚ್ಚಿನ ಮುತುವರ್ಜಿ ಬೈಂದೂರು ಹೋಬಳಿಯ 26 ಗ್ರಾಮ ಸೇರಿಸಿ ಬೈಂದೂರು ತಾಲೂಕು ಮಂಜೂರು ಮಾಡಿಸಿದರು.

ಈಗ ಬೈಂದೂರಿನಲ್ಲಿ ತಹಶೀಲ್ದಾರರ ಕಛೇರಿ ಹಾಗೂ ತಾಲೂಕು ಪಂಚಾಯತ್ ಕಛೇರಿ ಬಿಟ್ಟರೆ ಬೇರೆ ಯಾವುದೇ ತಾಲೂಕು ಮಟ್ಟದ ಸರ್ಕಾರಿ ಕಛೇರಿ ಇನ್ನು ಸ್ಥಾಪನೆಯಾಗಿಲ್ಲ. ತಾಲೂಕು ಕಛೇರಿಗೆ ತಹಶಿಲ್ದಾರ್ ನೇಮಕಗೊಂಡು ಕರ್ತವ್ಯದಲ್ಲಿದ್ದು ತಾಲೂಕು ಪಂಚಾಯತ್‍ನಲ್ಲಿ ಮತ್ತು ಕಾರ್ಯ ನಿರ್ವಹಣಾಧಿಕಾರಿ ನೇಮಕಗೊಳಿಸಲಾಗಿದೆ. ಇ.ಒ ಅವರು ಕುಂದಾಪುರದಲ್ಲಿ ಕರ್ತವ್ಯನಿರ್ವಹಿಸುತ್ತಿದ್ದಾರೆ.

ನ್ಯಾಯಾಲಯ ಸಂಕೀರ್ಣ ಬೇಡಿಕೆ : ಬೈಂದೂರಿನಲ್ಲಿ ನ್ಯಾಯಲಯದ ಬೇಡಿಕೆ ಬಹಳ ಹಿಂದಿನದಾಗಿದ್ದು ಕೆಲದಿನಗಳ ಹಿಂದೆ ಹಿರಿಯ ನ್ಯಾಯಾಧೀಶರು ಬೈಂದೂರಿನಲ್ಲಿ ನ್ಯಾಯಲಯಗೋಸ್ಕರ ಬಾಡಿಗೆ ಸ್ಥಳವನ್ನು ಪರಿಶೀಲಿಸಿದ್ದರು. ಅನಂತರ ಕೋವಿಡ್-19 ಲಾಕ್ ಡೌನ್ ಘೋಷಣೆ ಹಿನ್ನಲೆಯಲ್ಲಿ ಈ ಯೋಜನೆ ಹಿನ್ನಡೆಯಾಯಿತು.ಈ ಬಗ್ಗೆ ಕೂಡಲೇ ನ್ಯಾಯಾಲಯ ಸ್ಥಾಪನೆ ಬಗ್ಗೆ ಜನತೆ ಸ್ಥಳಿಯ ಶಾಸಕರು ಮತ್ತು ಸಂಸದರನ್ನು ಒತ್ತಾಯಿಸಿದ್ದಾರೆ.

ಮಂಜೂರುಗೊಂಡ ಸರ್ಕಾರದ ಕಾಮಗಾರಿ : ಬೈಂದೂರಿನಲ್ಲಿ ಮಿನಿ ವಿಧಾನ ಸೌಧ, ಶಂಕು ಸ್ಥಾಪನೆ ಮತ್ತು ಕಾಮಗಾರಿ ಹಾಗೂ ನ್ಯಾಯಾಲಯ ಮತ್ತು ತಾಲೂಕು ಪಂಚಾಯತ್, ಸರ್ಕಾರಿ ಆಸ್ಪತ್ರೆ, ಅಗ್ನಿಶಾಮಕ ಠಾಣೆಯ ಶಂಕು ಸ್ಥಾಪನೆ ಮತ್ತು ಪಡುವರಿ ಸೋಮೆಶ್ವರ ಬೀಚ್ ಅಭಿವೃದ್ದಿ ಕಾಮಗಾರಿಯನ್ನು ಈ ಸರ್ಕಾರ ಕೂಡಲೇ ಕೈಗೊಳ್ಳುವಂತೆ ಸ್ಥಳಿಯ ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿಯವರನ್ನು ಜನತೆ ಮನವಿ ಮೂಲಕ ಒತ್ತಾಯಿಸಿದ್ದಾರೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (3) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)