ಸ್ವ ಉದ್ಯೋಗ ತರಬೇತಿಯ ಸಮರೋಪ ಸಮಾರಂಭ

0
511

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಸ್ವಸಾಹಯ ಸಂಘದ ಮಹಿಳಾ ಸದಸ್ಯರಿಗೆ ಹಪ್ಪಳ ಸಂಡಿಗೆ ಉಪ್ಪಿನಕಾಯಿ ಹಾಗೂ ಮಸಾಲ ಪೌಡರ್ ತಯಾರಿಕೆ,ತರಬೇತಿಯ ಸಮರೋಪ ಸಮಾರಂಭ ಕಾರ್ಯಕ್ರಮ ಮರವಂತೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾ ಭವನದಲ್ಲಿ ನಡೆಯಿತು.

ಬೈಂದೂರು ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನ್ನಾಡುತ್ತಾ ಗ್ರಾಮೀಣ ಭಾಗದ ಮಹಿಳೆಯರಿಗೆ ಸ್ವ ಉದ್ಯೋಗ ತರಬೇತಿ ಕೋಡುತ್ತಿರುವುದು ಸಂತೋಷದ ವಿಚಾರ,ಕೊರೋನಾ ಸಂಕಷ್ಟದ ಕಾಲಘಟ್ಟದಲ್ಲಿ ಬದುಕನ್ನು ನಿರ್ಮಿಸಿಕೊಳ್ಳಲು ಮಹಿಳೆಯರಿಗೆ ಸಹಕಾರಿಯಾಗಲಿದೆ,ಇದರ ಸದುಪಯೋಗವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು,ಉದ್ಯೋಗವು ನಮ್ಮ ಬದುಕಿಗೆ ಆಧಾರವಾಗುವುದಲ್ಲದೆ ಸಂಸಾರವನ್ನು ಸರಿದೂಗಿಸಿಕೊಂಡು ಹೋಗಬಹುದು ನಿಮ್ಮ ಪ್ರಯತ್ನಕ್ಕೆ ಶುಭವಾಗಲಿ ಎಂದು ಸ್ವಸಾಹಯ ಸಂಘದ ಮಹಿಳಾ ಸದಸ್ಯರಿಗೆ ಶುಭ ಹಾರೈಸಿ ಪ್ರಮಾಣ ಪತ್ರ ಮತ್ತು ಕಿಟ್‍ಅನ್ನು ವಿತರಿಸಿದರು.

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ(ಸಿಬಿಆರ್‍ಎಸ್‍ಇಟಿಐ)ಮಣಿಪಾಲ,ಕಡಲ ಸಿರಿ, ಸಂಜೀವಿನಿ(ರಿ), ಮರವಂತೆ, ಗ್ರಾಮ ಪಂಚಾಯತ್ ಮರವಂತೆ ಹಾಗೂ ಸ್ನೇಹ ಮಹಿಳಾ ಮಂಡಳಿ(ರಿ) ಮರವಂತೆ ಇವರ ಸಹಯೋಗದೊಂದಿಗೆ ಸ್ವಸಾಹಯ ಸಂಘದ ಮಹಿಳಾ ಸದಸ್ಯರಿಗೆ 10ದಿನಗಳ ಕಾಲ ವಿವಿಧ ರೀತಿಯ ತರಬೇತಿಯನ್ನು ನೀಡಲಾಗಿತ್ತು.ಸಭಾ ಅಧ್ಯಕ್ಷತೆಯನ್ನು ನಿಕಟಪೂರ್ವ ಗ್ರಾಮ.ಪಂ ಅಧ್ಯಕ್ಷರು ಮರವಂತೆ ಶ್ರೀಮತಿ ಅನಿತಾ ಆರ್.ಕೆ ವಹಿಸಿದ್ದರು,ಮುಖ್ಯ ಅತಿಥಿಗಳಾಗಿ ಮರವಂತೆ ಗ್ರಾಮ.ಪಂ ಪಿ.ಡಿ, ಓ ರಿಯಾಝ್ ಅಹಮ್ಮದ್,ಮುಖ್ಯೋಪಧ್ಯಾಯ ಸತ್ಯನಾ ಕೊಡೇರಿ,ಶ್ರೀಮತಿ ಸುನೀತಾ,ನಿರ್ದೇಶಕರು ರುಡ್‍ಸೆಟಿ ಬ್ರಹ್ಮಾವರ ಪಾಪ ನಾಯಕ ಉಪಸ್ಥಿತರಿದ್ದರು.

ಕೆನರಾ ಬ್ಯಾಂಕ್ ಆರ್‍ಸೆಟಿ, ಮಣಿಪಾಲ ಇದರ ನಿರ್ದೇಶಕರಾದ ಮಂಜುನಾಥ್ ಆರ್ ನಾಯಕ್ ತರಬೇತಿಯ ಹಿನ್ನೂಟವನ್ನು ಓದಿ ಹೇಳಿದರು,ಶಿಬಿರಾರ್ಥಿಗಳು ತಮ್ಮ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು, ಶ್ರೀಮತಿ ಲತಾ ಮತ್ತು ಬಳಕ ಪ್ರಾರ್ಥಿಸಿದರು,ಉಪನ್ಯಾಸಕ ಕರುಣಾಕರ್ ಜೈನ್ ಸ್ವಾಗತಿಸಿದರು, ಉಪನ್ಯಾಸಕಿ ಕು.ನವ್ಯ ಕಾರ್ಯಕ್ರಮ ನಿರೂಪಿದರು, ಸಂತೋಷ್ ವಂದಿಸಿದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)