ರಕ್ಷಿತ ಕುಮಾರ ವಂಡ್ಸೆಯವರಿಂದ ಉಚಿತ ಮಣಿಪಾಲ ಆರೋಗ್ಯ ಕಾರ್ಡ ವಿತರಣೆ

0
551

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (3) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಉಡುಪಿ ಸ್ವಚ್ಚ ಭಾರತ ಫ್ರೇಂಡ್ಸ್ ಸದಸ್ಯ ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಹಳೆ ವಿದ್ಯಾರ್ಥೀಯಾಗಿರುವ ಮಣಿಪಾಲ ಆರೋಗ್ಯ ಕಾರ್ಡು ಪ್ರತಿನಿಧಿ ರಕ್ಷಿತ ಕುಮಾರ ವಂಡ್ಸೆಯವರು ಉಡುಪಿ ಸಂತೆಕಟ್ಟೆಯಲ್ಲಿರುವ ಕೃಷ್ಣಾನುಗ್ರಹ ಅರ್ಹಸಂಸ್ಥೆ ಮತ್ತು ದತ್ತು ಸ್ವೀಕಾರ ಕೇಂದ್ರದ ಪ್ರತಿಯೊಂದು ಮಕ್ಕಳಿಗೆ  ಉಚಿತ ಮಣಿಪಾಲ ಆರೋಗ್ಯ ಕಾರ್ಡುಗಳನ್ನು ಇಂದು ವಿತರಣೆ ಮಾಡಿದರು.

ಈ ಸಂಸ್ಥೆಗಳನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ. ಸಮಾಜದಲ್ಲಿರುವ ಅಸಹಾಯಕರನ್ನು ಗುರುತಿಸಿ ಅವರ ರಕ್ಷಣೆಗಳನ್ನು ಮಾಡುವುದು ಪೂಣ್ಯದ ಕೆಲಸ ಎಂದರು. ಪ್ರತಿಯೊಬ್ಬರು ಇದೇ ರೀತಿಯಲ್ಲಿ ಸಹಾಯ ಮಾಡಿದರೆ ಇಂತಹ ಸಂಸ್ಥೆಗೆ ತುಂಬಾ ಸಹಾಯವಾಗುತ್ತದೆ ಎಂದರು. ರಕ್ಷಿತ ಕುಮಾರ ವಂಡ್ಸೆ ಇವರು ಪ್ರಸ್ತುತ ಆರ್.ಕೆ. ಗ್ರಾಫಿಕ್ಸ್ ವಂಡ್ಸೆಯಲ್ಲಿ ವ್ಯವಹಾರ ಮಾಡುತ್ತಿದ್ದಾರೆ. ಮಣಿಪಾಲ ಆರೋಗ್ಯ ಮಾಡಲಿಚ್ಚಿಸುವವರು ಮೊಬೈಲ್ ಸಂಖ್ಯೆ 9743366746 ನ್ನು ಸಂಪರ್ಕಿಸಬಹುದಾಗಿದೆ.

ಈ ಸಂಧರ್ಭದಲ್ಲಿ ಈ ಸಂಸ್ಥೆಯ ಪ್ರೊಜೆಕ್ಟ್ ಕೋಆರ್ಡಿನೇಟರ್‍ರವರಾದ ಮೆರಿನಾ ಮೇಡಂ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು..

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (3) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)