ಬೈಂದೂರು ತಾಲೂಕು ಪಂಚಾಯತ್ ಕಛೇರಿ ಬಿಕೋ ಎನ್ನುತ್ತಿದೆ

0
1134

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (1) ಅಸಮ್ಮತ (1) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು: ತಾಲೂಕು ರಚನೆಗೊಂಡು ಸುಮಾರು 3 ವರ್ಷಗಳು ಕಳೆದಿದೆ. ಅನಂತರ ಸರಕಾರ ಎರಡು ವರ್ಷದ ಬಳಿಕ ನೂತನ ತಾಲೂಕುಗಳಿಗೆ ತಾಲೂಕು ಪಂಚಾಯತ್ ಘೋಷಣೆಮಾಡಿದೆ.. ಅದರಂತೆ ಬೈಂದೂರು ತಾಲೂಕು ಪಂಚಾಯತ್ ಆಗಿ ರಚನೆಗೊಂಡು ಹಾಗೂ ನೂತನ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನೇಮಕಗೊಂಡು 1 ವರ್ಷವೇ ಕಳೆದಿದೆ. ಆದರೆ ಯಾವುದೇ ಸಿಬ್ಬಂದಿಯನ್ನು ನೇಮಕ ಮಾಡದೇ ಕೇವಲ ನಾಮಾಕಾವಸ್ಥೆ ಮಾತ್ರ ಬೈಂದೂರು ತಾಲೂಕು ಪಂಚಾಯತ್ ಕಾರ್ಯ ನಿರ್ವಹಿಸುತ್ತಿದೆ. ಇತ್ತಿಚಿಗೆ ಅಧ್ಯಕ್ಷ/ ಉಪಧ್ಯಕ್ಷರು ಆಯ್ಕೆಗೊಂಡ ನಂತರ ಒಂದು ಸಾಮಾನ್ಯ ಸಭೆ ಮಾತ್ರ ಬೈಂದೂರಿನ ಕಛೇರಿಯಲ್ಲಿ ನಡೆದಿದೆ. ಈ ಕಛೇೀರಿಗೆ ಒಬ್ಬ ಸಿಬ್ಬಂದಿಯನ್ನು ತಾತ್ಕಾಲಿಕವಾಗಿ ನೇಮಿಸಲಾಗಿದೆ. ಇದರಿಂದ ಯಾವುದೇ ಒಂದು ತಾಲೂಕು ಪಮಚಾಯತ್ ಕೆಲಸಗಳು ನಡೆಯುತ್ತಿಲ್ಲ. ಕುಂದಾಪುರ ತಾಲೂಕು ಪಂಚಾಯತ್ ಕಛೇರಿಯನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ಇದೆ. ಮೊನ್ನೆ ನಡೆದ ತಾಲೂಕು ಪಂಚಾಯತ್ ಸಾಮನ್ಯ ಸಭೆ ಕುಂದಾಪುರ ತಾಲೂಕು ಪಂಚಾಯತ್ ಕಛೇರಿಯಲ್ಲಿ ನಡೆದಿರುವುದು ಬೈಂದೂರು ಭಾಗದ ಜನತೆಗೆ ತೀವ್ರ ನಿರಾಶೆ ಉಂಟುಮಾಡಿದೆ. ನೂತನ ತಾಲೂಕು ಪಂಚಾಯತಿನ ಕಾರ್ಯ ನಿರ್ವಹಣೆ ಯಾವುದೂ ಇಲ್ಲಿ ನಡೆಯುತ್ತಿಲ್ಲ. ಪ್ರಸ್ತುತ ಬೈಂದೂರು ತಾಲೂಕು ಪಂಚಾಯತ್ ಕಛೇರಿಯು ಈಗಿನ ಬೈಂದೂರು ಪಟ್ಟಣ ಪಂಚಾಯತ್ ಕಛೇರಿಯ ಒಂದು ಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಅತ್ಯಂತ ಇಕ್ಕಟ್ಟಾಗಿರುವ ಸ್ಥಳವಾಗಿದೆ.

ಮುಂದಿನ ಬೈಂದೂರು ತಾಲೂಕು ಪಂಚಾಯತ್‍ನ ಸಾಮಾನ್ಯ ಸಭೆಯನ್ನು ಕುಂದಾಪುರದಲ್ಲಿ ನಡೆಸದೇ ಬೈಂದೂರಿನಲ್ಲೆ ನಡೆಸಲು ಇಲ್ಲಿಯ ಜನ ಒತ್ತಾಯಿಸಿದ್ದಾರೆ. ಇಲ್ಲಿ ತಾಲೂಕು ಪಂಚಾಯತಿಗೆ ಸರಕಾರ ಜಾಗ ಮಂಜೂರು ಮಾಡಿದೆ. ಆದರೆ ಕಟ್ಟಡ ನಿರ್ಮಾಣದ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ನೂತನ ತಾಲೂಕು ಪಂಚಾಯತ್ ಕಟ್ಟಡ ನಿರ್ಮಾಣಕ್ಕೆ ಟೆಂಡರ್ ಕರೆದು ಸರ್ಕಾರ ಮುಂದಿನ ಕ್ರಮ ಕೈಗೊಳ್ಳುವಂತೆ ಬೈಂದೂರು ಜನತೆ ಸ್ಥಳಿಯ ಶಾಸಕರನ್ನು ಒತ್ತಾಯಿಸಿದ್ದಾರೆ. ಮುಂದಿನ ದಿನಗಳಲ್ಲಿ ಬೈಂದೂರು ತಾಲೂಕು ಪಂಚಾಯತ್ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಬೇಕಾಗಿದೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (1) ಅಸಮ್ಮತ (1) ಖಂಡಿಸುವೆ (0) ಅಭಿಪ್ರಾಯವಿಲ್ಲ (0)