ನೂತನ ರಾಹುತನಕಟ್ಟೆ ಪೆಟ್ರೋಲಿಯಂ ಘಟಕ ಉದ್ಘಾಟನೆ

0
393

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (1) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)

 

ಉಪ್ಪುಂದ : ಯಡ್ತರೆ ರಾಹುತನಕಟ್ಟೆಯಲ್ಲಿ ವಿಜಯ ಕುಮಾರ್ ಬೆಸ್ಕೂರು ಮತ್ತು ಮೀನಾಕ್ಷಿ ಇವರ ಮಾಲಕತ್ವದಲ್ಲಿ ನೂತನವಾಗಿ ಪ್ರಾರಂಭವಾದ ರಾಹುತನಕಟ್ಟೆ ಪೆಟ್ರೋಲಿಯಂ ಘಟಕವನ್ನು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಸೋಮವಾರ ಉದ್ಘಾಟಿಸಿದರು.
ನೂತನ ರಾಹುತನಕಟ್ಟೆ ಪೆಟ್ರೋಲಿಯಂ ಉದ್ಘಾಟಿಸಿ ಮಾತನಾಡಿ, ಹೊಸ ಉದ್ಯಮಗಳ ಪ್ರಾರಂಭದಿಂದ ಊರಿನ ಬೆಳವಣಿಗೆಗೂ ಸಹಾಯಕವಾಗಲಿದೆ. ಬÉೈಂದೂರು ತಾಲೂಕು ರಚನೆಯಿಂದಾಗಿ ಹೊಸ ಹೊಸ ಉದ್ಯಮಗಳ ಅಭಿವೃದ್ಧಿಗೆ ಕಾರಣವಾಗಲಿದೆ. ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವ ಮೂಲಕ ಉದ್ಯಮದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.
ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಶುಭ ಹಾರೈಸಿದರು.

ಖ್ಯಾತ ಜ್ಯೋತಿಷಿ ಡಾ| ಮಹೇಂದ್ರ ಭಟ್ ಮಾತನಾಡಿ ನಮ್ಮೂರಿನಲ್ಲಿ ಪ್ರಾರಂಭವಾದ ಈ ಸಂಸ್ಥೆ ಉತ್ತಮ ಸೇವೆ ನೀಡುವ ಮೂಲಕ ಗುರುತಿಸಿಕೊಂಡು, ಮುಂದಿನ ದಿನಗಳಲ್ಲಿ ಹೆಚ್ಚಿನ ಪೆಟ್ರೋಲಿಯಂ ಘಟಕಗಳನ್ನು ಸ್ಥಾಪಿಸುವಂತಾಗಲಿ ಎಂದು ಶುಭಹಾರೈಸಿದರು.
ಈ ಸಂದರ್ಭ ಜಿಲ್ಲಾ ಪಂಚಾಯತ್ ಸದಸ್ಯ ಬಾಬು ಶೆಟ್ಟಿ, ಪಡುವರಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಸದಾಶಿವ ಪಡುವರಿ, ಉದ್ಯಮಿ ಎನ್.ಎ.ಪೂಜಾರಿ, ರಾಜ್ಯ ಸರಕಾರದ ಯೋಜನಾ ಆಯೋಗ ಮಂಡಳಿಯ ಅ„ಕಾರೇತರ ಸದಸ್ಯೆ ಪ್ರಿಯದರ್ಶೀನಿ ದೇವಾಡಿಗ, ಕಮಲೇಶ ಬೆಸ್ಕೂರು ಮೊದಲಾದವರು ಉಪಸ್ಥಿತರಿದ್ದರು.

ಉಪ್ಪುಂದ ಪ್ರಗತಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ನಿ. ಇದರ ಅಧ್ಯಕ್ಷ ಬಿ.ಜಿ.ಲಕ್ಷ್ಮೀಕಾಂತ್ ಬೆಸ್ಕೂರು ಕ್ರಾರ್ಯಕ್ರಮ ಸ್ವಾಗತಿಸಿ, ನಿರ್ವಹಿಸಿದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (1) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)