ಬೈಂದೂರು -ಉಪ್ಪುಂದ ಲಯನ್ಸ್ ಕ್ಲಬ್ ಸಾಮಾಜಿಕ ಚಟುವಟಿಕೆಯಿಂದ ಜಿಲ್ಲೆಗೆ ಮಾದರಿಯಾಗಿದೆ : ಎನ್.ಎಮ್.ಹೆಗ್ಡೆ

0
146

ಹೆಚ್ಚಿನ ಓದುಗರು ಈ ಸುದ್ದಿಯನ್ನು ಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (1) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಉಪ್ಪುಂದ : ಅಂತಾರಾಷ್ರ್ಟೀಯ ಲಯನ್ಸ್ ಕ್ಲಬ್ ಸೇವೆ ಮತ್ತು ಬಾಂಧವ್ಯದ ಚಿಂತನೆಯನ್ನು ಇಟ್ಟುಕೊಂಡು ಸಾಮಾಜಿಕ ಸೇವೆಯಲ್ಲಿ ಜಗತ್ತಿನಲ್ಲಿಯೇ ಪ್ರಥಮ ಹಾಗೂ ಭಾರತದಲ್ಲಿ ಎರಡನೇ ಸ್ಥಾನದಲ್ಲಿ ಗುರುತಿಸಿಕೊಂಡು 13ಲಕ್ಷದ 60ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ. ರಾಜ್ಯದ ನಾಲ್ಕು ಲಯನ್ಸ್ ಜಿಲ್ಲೆಗಳಲ್ಲಿ 98ಕ್ಲಬ್‍ಗಳನ್ನು ಹೊಂದಿದೆ. ಬೈಂದೂರು-ಉಪ್ಪುಂದ ಲಯನ್ಸ್ ಕ್ಲಬ್ ಗ್ರಾಮೀಣ ಭಾಗಗಳಲ್ಲಿ ವಿಶೇಷ ಸಾಮಾಜಿಕ ಸೇವಾ ಯೋಜನೆಗಳಿಂದ ಜಿಲ್ಲೆಯಲ್ಲಿ ಗುರುತಿಸಿಕೊಂಡಿದ್ದು ಮಾದರಿ ಕ್ಲಬ್‍ಆಗಿದೆ ಎಂದು ಜಿಲ್ಲಾ ಗರ್ವನರ್ ಎನ್.ಎಮ್.ಹೆಗ್ಡೆ ಹೇಳಿದರು.

ಅವರು ಯಡ್ತರೆ ಬಂಟರ ಸಭಾಭವನದಲ್ಲಿ ನಡೆದ ಬೈಂದೂರು-ಉಪ್ಪುಂದ ಲಯನ್ಸ್ ಕ್ಲಬ್‍ನ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕೋವಿಡ್-19 ಸಂದರ್ಭ ರೂ.1025ಮೌಲ್ಯದ ಆಹಾರ ಪೆÇಟ್ಟಣಗಳನ್ನು ಸಂಕಷ್ಟದಲ್ಲಿರುವ 60 ಕುಟುಂಬಗಳಿಗೆ ವಿತರಿಸಲಾಗಿದೆ. ಉಚಿತ ಕಣ್ಣಿನ ಶಿಬಿರ, ಮಧುಮೇಹ ತಪಾಸಣೆ ಶಿಬಿರ, ಮೆಡಿಕಲ್ ಕ್ಯಾಪ್, ಅಕ್ಯೂಪ್ರೆಸರ್ ಕ್ಯಾಂಪ್, ಟೀಚರ್ ಟ್ರೇನಿಂಗ್ ವರ್ಕ್‍ಶಾಪ್, ನೂರಾರು ಮಂದಿಗೆ ಉಚಿತ ಕನ್ನಡಕ ವಿತರಣೆ ಮಾಡಲಾಗಿದೆ ಎಂದರು.

ವನಮಹೋತ್ಸವ, ವಂಡ್ಸೆ ಗ್ರಾ.ಪಂ.ನಲ್ಲಿ ಅಳವಡಿಕೊಂಡಿರುವ ಎಸ್‍ಎಲ್‍ಆರ್‍ಎಂನ್ನು ಇತರೆ ಗ್ರಾ.ಪಂ.ಗಳಿಗೆ ಪರಿಚಯಿಸುವ ಕಾರ್ಯಕ್ರಮ, ಮೀನುಗಾರರಿಗೆ ಪ್ರಥಮ ಚಿಕಿತ್ಸಾ ಕಿಟ್ ವಿತರಣೆ ಹಾಗೂ ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಖಂಬದಕೋಣೆ ಸರಕಾರಿ ಜೂನಿಯರ್ ಕಾಲೇಜಿನ ವಠಾರಕ್ಕೆ ರೂ.3.50ಲಕ್ಷದ ವೆಚ್ಚದಲ್ಲಿ ಇಂಟರ್‍ಲಾಕ್ ಹಾಗೂ ಪ್ರೌಢ ಶಾಲೆಗೆ ಪೆÇ್ರೀಜೆಕ್ಟರ್ ಅಳವಡಿಕೆ. ಬವಳಾಡಿ ಸ. ಪ್ರಾ. ಶಾಲೆಗೆ ರೂ.3ಲಕ್ಷದ ಕಲಿಕಾ ಸಾಮಾಗ್ರಿ, ಪೀಠೋಪಕರಣಗಳನ್ನು ಹಸ್ತಾಂತರಿಸಲಾಗಿದೆ. ಉಪ್ಪುಂದದಲ್ಲಿ ರೂ.65ಸಾವಿರ ವೆಚ್ಚದ ಬಸ್ಸು ತಂಗುದ್ದಾಣ, ಮುಚ್ಚುವ ಸ್ಥಿತಿಯಲ್ಲಿದ್ದ ನಾಗೂರು ಸರಕಾರಿ ಹಿ.ಪ್ರಾ.ಕನ್ನಡ ಶಾಲೆಗೆ ರೂ.1.25ಲಕ್ಷದ ವೆಚ್ಚದಲ್ಲಿ ಗ್ರಂಥಾಲಯ, ರೂ.35ಸಾವಿರದ ಪೆÇ್ರೀಜೆಕ್ಟರ್, ರೂ.45ಸಾವಿರ ಮೊತ್ತದ 3ಕಂಪ್ಯೂಟರ್‍ಗಳನ್ನು ಕೊಡುಗೆಯಾಗಿ ನೀಡಲಾಗಿದೆ. ತೆಂಕಬೆಟ್ಟು ಸರಕಾರಿ ಹಿ.ಪ್ರಾ.ಶಾಲೆಗೆ ರೂ.45ಸಾವಿರ ಮೌಲ್ಯದ 3 ಕಂಪ್ಯೂಟರ್, ಅತಿಥಿ ಶಿಕ್ಷಕರಿಗೆ ಸಹಾಯಧನ, ಕೊಕ್ಕೇಶ್ವರ ದೇವಸ್ಥಾನದ ಸಾರ್ವಜನಿಕ ರಸ್ತೆಗೆ ನಾಮಫಲಕ ಅಳವಡಿಕೆ ಮೊದಲಾದ ಸಾಮಾಜಿಕ ಸೇವೆಗಳನ್ನು ಬೈಂದೂರು-ಉಪ್ಪುಂದ ಲಯನ್ಸ್ ಕ್ಲಬ್ ವತಿಯಿಂದ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ನೂತನ ಕ್ಲಬ್ ಅಧ್ಯಕ್ಷ ಎಚ್.ಜಯಶೀಲ ಶೆಟ್ಟಿ ಮಾತನಾಡಿ, ಮುಂದಿನ ದಿನಗಳಲ್ಲಿ ಉಚಿತ ಕಣ್ಣಿನ ಶಿಬಿರ, ಮಧುಮೇಹ ತಪಾಸಣೆ ಶಿಬಿರ, ಮೆಡಿಕಲ್ ಕ್ಯಾಪ್, ಎರಡು ಬಸ್ಸ್ ನಿಲ್ದಾಣ ಕೊಡುಗೆ ಜೊತೆಗೆ ಹಲವಾರು ಸಾಮಾಜಿಕ ಕಾರ್ಯಕ್ರಮಗಳ ಜೊತೆಗೆ ಈ ಲಯನ್ಸ್ ಕ್ಲಬ್‍ನ್ನು ಇನ್ನಷ್ಟು ಎತ್ತರಕ್ಕೆ ಬೆಳಯಲಿದೆ ಎಂದರು.

ಈ ಸಂದರ್ಭ ಪೂರ್ವಾಧ್ಯಕ್ಷ ಯು.ಪ್ರಭಾಕರ ಶೆಟ್ಟಿ , ರೀಜನ್ ಕಾರ್ಯದರ್ಶಿ ವೇಣುಗೋಪಾಲ ಶೆಟ್ಟಿ, ಕಾರ್ಯದರ್ಶಿ ಚಂದ್ರ ಬಿ.ಹಳಗೇರಿ, ನಾವುಂದ ಕ್ಲಬ್ ಅಧ್ಯಕ್ಷ ಭಾಸ್ಕರ ಶೆಟ್ಟಿ ಉಪಸ್ಥಿತರಿದ್ದರು.

ಲಯನ್ಸ್ 317ಸಿ ಪ್ರಾಂತ್ಯ 7ರ ವಲಯ 1ರ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಮೇಲ್ಗಾಯಾಡಿ ನಿರೂಪಿಸಿ, ವಂದಿಸಿದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (1) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)