ಮರವಂತೆ ಮಸೀದಿ ಬಳಿ 14,45000 ಮೌಲ್ಯದ ಗಾಂಜಾ ವಶ

0
5431

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (25) ಸಮ್ಮತ (0) ಅಸಮ್ಮತ (3) ಖಂಡಿಸುವೆ (24) ಅಭಿಪ್ರಾಯವಿಲ್ಲ (0)

ಇನ್ಸುಲೇಟರ್ ವಾಹನದಲ್ಲಿ ಭಟ್ಕಳದಿಂದ ಕುಂದಾಪುರಕ್ಕೆ ಅಪಾರ ಪ್ರಮಾಣದ ಗಾಂಜಾ ಸಾಗಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಪಲೀಸರು ಬಂಧಿಸಿದ್ದಾರೆ.

ಭಟ್ಕಳದಿಂದ ಕುಂದಾಪುರಕ್ಕೆ ಗಾಂಜಾ ಸಾಗಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿಯ ಮೇರೆಗೆ ಗಂಗೊಳ್ಳಿ ಪಿ ಎಸ್ ಐ ಭೀಮಾ ಶಂಕರ್ ಮತ್ತು ತಂಡದವರು ಕಾರ್ಯಾಚರಣೆ ನಡೆಸಿ, ಮರವಂತೆ ಮಸೀದಿ ಬಳಿ ರಾ.ಹೆ-66ರಲ್ಲಿ ಇನ್ಸುಲೇಟರ್ ಪರಿಶೀಲಿಸಿದಾಗ ಬರೋಬ್ಬರಿ 14,45,000 ರೂಪಾಯಿ ಮೌಲ್ಯದ ಸೊತ್ತು ಪತ್ತೆಯಾಗಿದೆ.

ಮಂಗಳೂರು ಹರೇಕಳ ನಿವಾಸಿ ಮಹಮ್ಮದ್ ಸಾಕೀರ್(24 ವರ್ಷ), ಮಹಮ್ಮದ್ ಜಾಫರ್ (32 ವರ್ಷ), ಬೈಂದೂರು ಕಿರಿ ಮಂಜೇಶ್ವರ ನಿವಾಸಿ ಅಲ್ಫಾಜ್ (20 ವರ್ಷ), ಹೊನ್ನಾವರ ನಿವಾಸಿ ಮಹಮ್ಮದ್ ಇಸೂಫ್ ಸಾಫ್ (45 ವರ್ಷ) ಎಂಬವರೇ ಬಂಧಿತ ಆರೋಪಿಗಳು.

ಈ ಕುರಿತು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (25) ಸಮ್ಮತ (0) ಅಸಮ್ಮತ (3) ಖಂಡಿಸುವೆ (24) ಅಭಿಪ್ರಾಯವಿಲ್ಲ (0)