ಉಪ್ಪುಂದ : ಮೀನುಗಾರರ ಮತ್ತು ಮೀನು ಕಾಮಿ೯ಕರ ಬೃಹತ್ ಸಮಾವೇಶ

0
434

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಅಖಿಲ ಭಾರತ ಮೀನುಗಾರರ ಮತ್ತು ಮೀನು ಕಾಮಿ೯ಕರ ಒಕ್ಕೂಟಕ್ಕೆ ಸಂಯೋಜಿಸಲ್ಪಟ್ಟ, ಉಡುಪಿ ಜಿಲ್ಲಾ ಮೀನುಗಾರರ ಮತ್ತು ಮೀನು ಕಾಮಿ೯ಕರ ಸಂಘ (ಸಿಐಟಿಯು)ಇವರ ಆಶ್ರಯದಲ್ಲಿ ಬೈಂದೂರು ತಾಲೂಕು ಉಪ್ಪುಂದ ಪ್ರದೇಶದ ಮೀನುಗಾರರ ಮತ್ತು ಮೀನು ಕಾಮಿ೯ಕರ ಬೃಹತ್ ಸಮಾವೇಶವು  ಉಪ್ಪುಂದ ಕಾಸನಾಡಿ ದೈವಸ್ಥಾನ ವಠಾರದಲ್ಲಿ ಯಶಸ್ವಿಯಾಗಿ ಜರಗಿತು.

ಉಡುಪಿ ಜಿಲ್ಲಾ ಮೀನುಗಾರರ ಮತ್ತು ಮೀನು ಕಾಮಿ೯ಕರ ಸಂಘದ (ಸಿಐಟಿಯು) ಜಿಲ್ಲಾಧ್ಯಕ್ಷ ಕೆ.ಶಂಕರ್ ಸಮಾವೇಶ ಉದ್ಘಾಟಿಸಿಮಾತನಾಡುತ್ತಾ,ಮೀನುಗಾರರಿಗೆ ಹಾಗೂ ಮೀನು ಕಾಮಿ೯ಕರಿಗೆ ಸಾಮಾಜಿಕ ಭದ್ರತೆಯ ಭಾಗವಾಗಿ ಕಲ್ಯಾಣ ಮಂಡಳಿಯೊಂದನ್ನು ರಚಿಸಬೇಕು ಎಂದು ರಾಜ್ಯ ಸರ್ಕಾರವನ್ನುಆಗ್ರಹಿಸಿದರು. ಕನಾ೯ಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಕೋಣಿ ಸಭೆಯನ್ನುದ್ದೇಶಿಸಿ ಮಾತನಾಡಿ,ಮೀನುಗಾರರಿಗೆ ಹಾಗೂ ಮೀನು ಕಾಮಿ೯ಕರಿಗೆ 60 ವಷ೯ ಪ್ರಾಯದ ನಂತರ ತಿಂಗಳಿಗೆ ರೂ,6000/=ಪಿಂಚಣಿ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಮೀನುಗಾರರ ಮತ್ತು ಮೀನು ಕಾಮಿ೯ಕರ ವಿವಿಧ 12 ಪ್ರಮುಖ ಬೇಡಿಕೆ ಗಳನ್ನು ಈಡೇರಿಸಲು ಒತ್ತಾಯಿಸಿ ದಿನಾಂಕ:01=10=2020ರಂದು ಉಡುಪಿ,ಮಣಿಪಾಲದ ಜಿಲ್ಲಿಧಿಕಾರಿ ಕಚೇರಿ ಎದುರು ಜರಗುವ ಪ್ರತಿಭಟನೆ,ಮನವಿ ಅಪ೯ಣೆ ಹೊರಾಟ ಕಾಯ೯ಕ್ರಮ ಯಶಸ್ವಿ ಗೊಳಿಸಲು ಸಭೆಯಲ್ಲಿ ತೀಮಾ೯ನಿಸಲಾಯಿತು.

ಉಪ್ಪುಂದ ಮೀನುಗಾರರ ಮತ್ತು ಮೀನು ಕಾಮಿ೯ಕರ ಸಂಘದ ನೂತನ ಕಾಯ೯ಕಾರಿ ಸಮಿತಿಗೆ ರಾಮ ಖಾವಿ೯ ಉಪ್ಪುಂದ(ಅಧ್ಯಕ್ಷ),ವಿಠಲ್ ಖಾವಿ೯ಉಪ್ಪುಂದ (ಕಾಯ೯ದಶಿ೯),ಜ್ಯೋತಿ ಮೊಗವೀರ(ಕೋಶಾಧಿಕಾರಿ) ಇವರನ್ನೊಳಗೊಂಡ ಒಟ್ಟು 10ಮಂದಿ ಸದಸ್ಯರನ್ನು ಸವಾ೯ನುಮತದಿಂದ ಆಯ್ಕೆ ಮಾಡಲಾಯಿತು.

ಬೈಂದೂರು ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ (ರಿ),(ಸಿಐಟಿಯು) ಉಪಾಧ್ಯಕ್ಷರಾದ ಮಾಧವದೇವಾಡಿಗ ಉಪ್ಪುಂದ,ಶ್ರೀಧರ್ ದೇವಾಡಿಗ ಉಪ್ಪುಂದ,ವೇದಿಕೆಯಲ್ಲಿದ್ದರುಸ್ಥಳೀಯ ಮೀನುಗಾರರ ಹಿರಿಯ ಮುಖಂಡರಾದ ಬಾಬು ಖಾವಿ೯ ಉಪ್ಪುಂದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ನೂತನ ಕಾಯ೯ದಶಿ೯ವಿಠಲ್ ಖಾವಿ೯ವಂದಿಸಿದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)