ಉಡುಪಿ: ರಾಯಲ್ ಮಹಲ್ ಲಾಡ್ಜ್ ಕುಸಿತ

0
332

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಉಡುಪಿ : ನಗರದ ಹೃದಯ ಭಾಗದಲ್ಲಿರುವ ರೋಯಲ್ ಮಹಲ್ ವಸತಿ ಗೃಹ ಕುಸಿದು ಬಿದ್ದಿದು, ಪವಾಡ ಸದೃಶವಾಗಿ ಕಟ್ಟದಲ್ಲಿರುವವರು ಪಾರಾಗಿದ್ದಾರೆ.

ನಗರದ ಚಿತ್ತರಂಜನ್ ವೃತ್ತದಲ್ಲಿರುವ ರೋಯಲ್ ಮಹಲ್ ಹಳೆಯ ಕಟ್ಟಡವಾಗಿದ್ದು ಇದ ನೆಲ ಅಂತಸ್ತಿನಲ್ಲಿರುವ ಚಿಪ್ಸ್ ಅಂಗಡಿ ಸಂಪೂರ್ಣವಾಗಿ ನಷ್ಟ ಉಂಟಾಗಿದೆ ಹಾಗು ನೆಲ ಅಂತಸ್ತಿನಲ್ಲಿರುವ ಜನಾಔಷದ ಕೇಂದ್ರವು ಭಾಗಶ: ಕುಸಿದಿದೆ.

ಅದೃಶವಶಾತ್ ಪಾರಾದ ಟೆಂಪೋ ಚಾಲಕರು : ಲಾಡ್ಜ್ ನಲ್ಲಿದ್ದ ಯುವತಿ ರಕ್ಷಣೆ ಮಾಡಿಕೊಳ್ಳಲು ಓಡಿಬರುವಾಗ ಬಿದ್ದು ಗಾಯಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕಟ್ಟಡದ ಎದುರು ಟೆಂಪೋ ಸ್ಟಾಂಡ್ ಇದ್ದು ಕಟ್ಟಡ ಬೀಳುವ ಸಮಯದಲ್ಲಿ ಅಪಾಯವನ್ನರಿತ್ತ ಟೆಂಪೋ ಚಾಲಕರು ಸ್ಥಳದಿಂದ ತಮ್ಮ ವಾಹನಗಳನ್ನು ತೆರವುಗೊಳಿಸಿದ್ದಾರೆ.

ಇದು ಬಹಳ ಹಳೆಯ ಕಟ್ಟಡ 3 ದಿನದಿಂದ ಸುರಿದ ನಿರಂತರ ಮಳೆಯಿಂದ ಕುಸಿದಿದ್ದು ಇನ್ನಷ್ಟ್ಟು ಕುಸಿಯುವ ಹಂತದಲ್ಲಿದ್ದು, ಜನ ಆತಂಕಕ್ಕೆ ಈಡಾಗಿದ್ದಾರೆ , ಸ್ಥಳಕ್ಕೆ ಅಗ್ನಿ ಶಾಮಕ ದಳ ಹಾಗು ನಗರ ಪೊಲೀಸ್ ಧಾವಿಸಿ ಸಂಚಾರ ಸುಗಮ ಗೊಳಿಸಿದರು.

ಇದೇ ರೀತಿ ನಗರದಲ್ಲಿ ಪಾಳು ಬಿದ್ದಿರುವ, ನಿರ್ವಹಣೆ ಇಲ್ಲಸದ ಕಟ್ಟಡಗಳಿದ್ದು, ಸಾರ್ವಜನಿಕರ ಆಸ್ತಿ ಪಾಸ್ತಿಗೆ ಹಾನಿಯುಂಟಾಗುವ ಸಾಧ್ಯತೆ ಇರುವ ಕಟ್ಟಡಗಳನ್ನು ಒಂದು ತಿಂಗಳೊಳಗೆ ತೆರವುಗೊಳಿಸಲು ಆಧೇಶಿಸಿದ್ದಾರೆ. ತಪ್ಪಿದಲ್ಲಿ ಇಂತಹ ಕಟ್ಟಡ ಮಾಲಕರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪೌರಾಯುಕ್ತರು ಈ ಸಂದರ್ಭ ಎಚ್ಚರಿಸಿದ್ದಾರೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)