ಬೈಂದೂರು : ತಾಲೂಕಿನ ನ್ಯಾಯಾಲಯ ನಿರ್ಮಾಣದ ಕನಸು ನನಸಾಗಲಿ

0
279

ಹೆಚ್ಚಿನ ಓದುಗರು ಈ ಸುದ್ದಿಯನ್ನು ಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (3) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು : ನಲವತ್ತು ವರ್ಷದ ಹಿಂದಿನ ಬೇಡಿಕೆ ತಾಲೂಕು ರಚನೆಯೊಂದಿಗೆ ಈಡೇರಿದೆ. ನೂತನ ತಾಲೂಕು ರಚನೆಗೊಂಡು 3 ವರ್ಷ ಕಳೆಯುತ್ತ ಬಂದಿದೆ. ತಾಲೂಕು ಮಟ್ಟದ ಸರ್ಕಾರಿ ಅನೇಕ ಕಛೇರಿಗಳು ಇನ್ನೂ ಸ್ಥಾಪನೆಯಾಗಿಲ್ಲ. ಈಗಾಗಲೇ ತಾಲೂಕು ಪಂಚಾಯತ್, ಮಿನಿ ವಿಧಾನಸೌಧ, ಅಗ್ನಿ ಶಾಮಕ ಠಾಣೆ, ನೂರು ಹಾಸಿಗೆಯ ಆಸ್ಪತ್ರೆ, ನ್ಯಾಯಾಲಯ ಸಂಕೀರ್ಣಕ್ಕೆ ಬೈಂದೂರಿನಲ್ಲಿ ಸರ್ಕಾರ ಸ್ಥಳ ಮಂಜೂರಾತಿಗೊಳಿಸಿದೆ. ಇದರ ಕಟ್ಟಡ ಕಾಮಗಾರಿ ಹಾಗೂ ಶಂಕು ಸ್ಥಾಪನೆ ಶೀರ್ಘದಲ್ಲಿಯೇ ನಡೆಯಬೇಕಾಗಿದೆ ಇಲ್ಲಿ ನ್ಯಾಯಾಲಯ ಸಂಕೀರ್ಣ ಬೇಡಿಕೆ ಬಹಳ ವರ್ಷದ ಹಿಂದಿನದಾಗಿದೆ.

ಈ ಬಗ್ಗೆ ಅನೇಕ ಒತ್ತಾಯಗಳು ನಡೆಯುತ್ತಾ ಬಂದಿದೆ. ಕೆಲವು ಸಮಯದ ಹಿಂದೆ ಹಿರಿಯ ನ್ಯಾಯಾಧೀಶರು ಬೈಂದೂರಿನಲ್ಲಿ ನ್ಯಾಯಾಲಯಕ್ಕಾಗಿ ಬಾಡಿಗೆ ಜಾಗವನ್ನು ಗುರುತಿಸಿದರು. ಒಂದು ಹಂತದಲ್ಲಿ ಬೈಂದೂರಿನಲ್ಲಿ ನ್ಯಾಯಾಲಯ ನಿರ್ಮಾಣವಾಗುತ್ತದೆ ಎಂದು ಜನ ಕಾತುರದಿಂದ ಕಾಯುತ್ತಿದ್ದರು. ಆಸಮಯದಲ್ಲಿ ಲಾಕ್ ಡೌನ್ ಬಂದು ಈ ಒಂದು ನ್ಯಾಯಾಲಯದ ನಿರ್ಮಾಣದ ಆದೇಶ ಕಡತಕ್ಕೆ ಸೇರಿ ಹೋಯಿತು.

ಈ ಬಗ್ಗೆ ನಂತರ ಜನ ಪ್ರತಿನಿಧಿಗಳು ಮನಸ್ಸು ಮಾಡಲಿಲ್ಲ. ನ್ಯಾಯಾಲಯದ ಕನಸು ನನಸಾಗದೆ ಉಳಿಯಿತು.ಬೈಂದೂರಿನಲ್ಲಿ ನ್ಯಾಯಲಯದ ಅವಶ್ಯಕತೆ ಇದ್ದು ಈ ಬಗ್ಗೆ ನಮ್ಮ ಜನ ಪ್ರತಿನಿಧಿಗಳು ಸರ್ಕಾರದ ಗಮನ ಕೂಡಲೇ ತರಬೇಕಾಗಿದೆ. ಕುಂದಾಪುರ ನ್ಯಾಯಾಲಯ ಸಂಕೀರ್ಣದಲ್ಲಿ ಬೈಂದೂರಿಗೆ ಪ್ರತ್ಯೇಕ ನ್ಯಾಯಾಲಯವಿದೆ. ಈ ಭಾಗದ ಅನೇಕ ಪ್ರಕರಣಗಳು ಅಲ್ಲಿವೆ. ಬೈಂದೂರು ತಾಲೂಕು ಪೋಲಿಸ್ ವ್ಯಾಪ್ತಿ ಈ ನ್ಯಾಯಾಲಯ ಹೊಂದಿರುತ್ತದೆ. ಈ ತಾಲೂಕಿನ ಪ್ರಮುಖ ಬೇಡಿಕೆ ನ್ಯಾಯಾಲಯ ನಿರ್ಮಾಣದ್ದಾಗಿದೆ. ನೂತನ ನ್ಯಾಯಾಲಯ ಕಟ್ಟಡ ಆಗುವವರೆಗೆ ಬಾಡಿಗೆ ಕಟ್ಟಡದಲ್ಲಾದರೂ ನ್ಯಾಯಾಲಯ ಮಂಜೂರಾತಿಗೊಳಿಸಿ ನಿರ್ಮಾಣವಾಗಬೇಕಾಗಿದೆ. ಆದ್ದರಿಂದ ಇನ್ನಾದರೂ ನೂತನ ಬೈಂದೂರು ತಾಲೂಕಿನಲ್ಲಿ ಕೂಡಲೇ ನ್ಯಾಯಾಲಯ ನಿರ್ಮಿಸಲು ಸ್ಥಳಿಯ ಶಾಸಕರು ಹಾಗೂ ಸಂಸತ್ ಸದಸ್ಯರನ್ನು ಜನ ಒತ್ತಾಯಿಸಿರುತ್ತರೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (3) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)