ಜೆಸಿ ಸಪ್ತಹಾ ಅಂಗವಾಗಿ ರುದ್ರಭೂಮಿ ಸ್ವಚ್ಚತಾ ಕಾರ್ಯಕ್ರಮ

0
243

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

   

ಜೆಸಿಐ ಉಪ್ಪುಂದ ಮತ್ತು ವಿಶ್ವ ಹಿಂದೂ ಪರಿಷತ್ ಭಜರಂಗದಳ ಉಪ್ಪುಂದ ಘಟಕ ವತಿಯಿಂದ ಉಪ್ಪುಂದ ಅರೆಹಾಡಿ ರುಧ್ರಭೂಮಿ ಸ್ವಚ್ಛತಾ ಕಾರ್ಯಕ್ರಮ ಹಾಗೂ ನಡೆಯಿತು.

ನಿವೃತ್ತ ಮುಖೋಪಾಧ್ಯಾಯ ಮಹಾಬಲೇಶ್ವರ ಐತಾಳ್ ಶಿವನಿಗೆ ಪ್ರಿಯವಾದ ಬಿಲ್ವಪತ್ರೆ ಗಿಡವನ್ನು ರುದ್ರಭೂಮಿಯಲ್ಲಿ ನೆಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಜೆಸಿಐ ಕಾರ್ಯಕ್ರಮವನ್ನು ಶ್ಲಾಘಿಸಿದರು. ಜೆಸಿಐ ಉಪ್ಪುಂದ ಅಧ್ಯಕ್ಷ ದೇವರಾಯ ದೇವಾಡಿಗ ಅಧ್ಯಕ್ಷತೆಯನ್ನು ವಹಿಸಿದ್ದರು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಉಪ್ಪುಂದ ಘಟಕದ ಅಧ್ಯಕ್ಷ ಹಾಗೂ ಜೆಸಿಐ ಉಪ್ಪುಂದ ಸದಸ್ಯ ಗೌರೀಶ್ ಹುದಾರ್, ಜೆಸಿ ಉಪ್ಪುಂದ ಪೂರ್ವಾಧ್ಯಕ್ಷ ಸುಬ್ರಮಣ್ಯ ಜಿ, ವಿಶ್ವ ಹಿಂದೂ ಪರಿಷತ್ ಮುಖಂಡ ಸುಧಾಕರ ನೆಲ್ಯಾಡಿ, ಕಾರ್ಯದರ್ಶಿ ರಾಜೇಂದ್ರ, ಬಿಜೆಪಿ ಮಂಡಲ ಉಪಾಧ್ಯಕ್ಷ ಶ್ರೀಗಣೇಶ್ ಗಾಣಿಗ, ಕಾರ್ಯಕ್ರಮ ನಿರ್ದೇಶಕರಾದ ಜೆಸಿ ಸಂದೀಪ, ಜೆಸಿ ರಾಮಕೃಷ್ಣ ಖಾರ್ವಿ, ಬೈಂದೂರು ಹಿಂದೂ ರುದ್ರಭೂಮಿ ಉಪ್ಪುಂದ ಅರೆಹಾಡಿ ನಿರ್ವಹಣಾ ಸಮಿತಿಯ ಅಧ್ಯಕ್ಷ ಪರಮೇಶ್ ಖಾರ್ವಿ, ಮಂಜುನಾಥ, ಜೆಸಿ ಶಿವಾನಂದ, ಜೆಸಿ ಪುರುಷೋತ್‍ಮ್, ಜೆಸಿ ನಾಗರಾಜ ಉಬ್ಜರಿ, ಜೆಸಿ ಮಹೇಶ್, ಮತ್ತು ವಿಶ್ವ ಹಿಂದೂ ಪರಷತ್ ಭಜರಂಗದಳ ಉಪ್ಪುಂದ ಘಟಕದ ಎಲ್ಲಾ ಪಧಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.

ಸ್ವಚ್ಚತಾ ಕಾರ್ಯಕ್ರಮದಲ್ಲಿ ಲಭ್ಯವಾದ ಉತ್ತಮ ಹಸಿ ಹುಲ್ಲನ್ನು ಸ್ವಚ್ಚ ಮಾಡಿ ಶಿರೂರು ಗೋಶಾಲೆಗೆ ರವಾನಿಸಲಾಯಿತು.
ಜೆಸಿ ಕಾರ್ಯದರ್ಶಿ ಪ್ರದೀಪ್ ಶೆಟ್ಟಿ ಕಾರಿಕಟ್ಟಿ ವಂದಿಸಿದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)