ಬಿಜೂರು ನಂದಿಕೇಶ್ವರ ಯುವಕ ಮಂಡಲ : ಸಮ್ಮಾನ

0
437

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)

ಉಪ್ಪುಂದ : ಬಿಜೂರು ನಂದಿಕೇಶ್ವರ ಯುವಕ ಮಂಡಲ ವತಿಯಿಂದ ಸಬ್-ಇನ್‍ಸ್ಪೆಕ್ಟರ್ ಹುದ್ದೆಗೆ ಆಯ್ಕೆಗೊಂಡಿರುವ ಬಿಜೂರು ಹರ್ಕೇರಿ ನಿವಾಸಿ ಸುಬ್ರಹ್ಮಣ್ಯ ಎಚ್. ಇವರನ್ನು ಸಮ್ಮಾನಿಸಲಾಯಿತು.

ಬಿಜೂರು ನಂದಿಕೇಶ್ವರ ಯುವಕ ಮಂಡಲ ಇದರ ಗೌರವಾಧ್ಯಕ್ಷ ಬಿ.ಜಿ.ಲಕ್ಷ್ಮೀಕಾಂತ್ ಬೆಸ್ಕೂರು ಸುಬ್ರಹ್ಮಣ್ಯ ಎಚ್. ಇವರನ್ನು ಶಾಲು ಹೊದಿಸಿ, ಫಲ ಪುಷ್ಪ ನೀಡಿ ಸಮ್ಮಾನಿಸಿದರು.

ಬಳಿಕ ಮಾತನಾಡಿದ ಅವರು ಸುಬ್ರಹ್ಮಣ್ಯ ಕೃಷಿ ಕುಟುಂಬದ ಹಿನ್ನಲೆ ಹೊಂದಿದ್ದರು ಸಹ ನಿರಂತರ ಪರಿಶ್ರಮದಿಂದಾಗಿ ತನ್ನ 23ನೇ ವಯಸ್ಸಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ಯಶ್ವಸಿಯಾಗಿ ಬರೆದು 146ನೇ ರ್ಯಾಂಕ್ ಪಡೆದು ಎಸ್‍ಐ ಹುದ್ದಗೆ ಆಯ್ಕೆಯಾಗುವ ಮೂಲಕ ಯುವ ಜನತೆಗೆ ಪ್ರೇರಣೆಯಾಗಿದ್ದಾರೆ. ಈ ಸಾಧನೆ ಊರಿಗೆ ಗೌರವ ಹಾಗೂ ಸಂತಸ ತಂದಿದೆ. ಈ ಸಾಧನೆಗೆ ತಂದೆ-ತಾಯಿ ದೂರದೃಷ್ಟಿತ್ವ, ಪೆÇ್ರೀತ್ಸಹ ಹಾಗೂ ಆರ್ಶೀವಾದ ಕಾರಣವಾಗಿದೆ ಎಂದ ಅವರು ಇನ್ನಷ್ಟು ಕಲಿಕೆಯ ಮೂಲಕ ಉನ್ನತ ಸ್ಥಾನಕ್ಕೆ ತಲುಪಬೇಕು ಎಂದು ಶುಭ ಹಾರೈಸಿದರು.

ಸಂಘದ ವತಿಯಿಂದ ತಂದೆ ರಾಮ ದೇವಾಡಿಗ ಮತ್ತು ಸೀತು ದೇವಾಡಿಗ ಇವರನ್ನು ಗೌರವಿಸಲಾಯಿತು.

ಈ ಸಂದರ್ಭ ಸಂಘದ ಅಧ್ಯಕ್ಷ ರಮೇಶ ವಿ.ದೇವಾಡಿಗ, ಕಮಲೇಶ ಬೆಸ್ಕೂರು, ಪ್ರಿಯದರ್ಶಿನಿ ಬಿಜೂರು, ಸಂಧ್ಯಾ ಬೆಸ್ಕೂರು ಹಾಗೂ ಸಂಘದ ಪದಾ„ಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)