ನಾಡಗುಡ್ಡೆ ಅಂಗಡಿ ಹಾಲು ಉತ್ಪಾದಕರ ಸ.ಸಂಘದ ವತಿಯಿಂದ ಆಶಾಕಾರ್ಯಕರ್ತತೆಯರಿಗೆ ಸಮ್ಮಾನ

0
217

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಹಾಲು ಉತ್ಪಾದಕರ ಸಹಕಾರಿ ಸಂಘ ಇದರ ವಾರ್ಷಿಕ ಮಹಾಸಭೆ ಮತ್ತು ಸನ್ಮಾನ ಕಾರ್ಯಕ್ರಮ ಸಂಘದ ಸಭಾ ಭವನದಲ್ಲಿ ನಡೆಯಿತು,ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಬೈಂದೂರು ತಾ.ಪಂ ಅಧ್ಯಕ್ಷ ಮಹೇಂದ್ರ ಪೂಜಾರಿ ಸಮಾಜದ ಬಗ್ಗೆ ಚಿಂತನೆ ಕಳಕಳಿ ಇದ್ದಾಗ ಮಾತ್ರ ನಾವು ಸಮಾಜ ಮುಖಿ ಕೆಲಸ ಮಾಡಲು ಸಾಧ್ಯವಿದೆ,ನಾಡ ಹಾಲು ಉತ್ಪಾದಕರ ಒಕ್ಕೂಟ ಈ ಸಮಯದಲ್ಲಿ ಕೊರೊನಾ ವಾರಿಯರ್ಸ್‍ರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಶ್ಲಾಘನೀಯ ಎಂದರು,

ಜಿ.ಪಂ ಸದಸ್ಯ ಬಾಬು ಹೆಗ್ಡೆಯವರು ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಆಶಾಕಾರ್ಯಕರ್ತೆಯರನ್ನು,ಅಂಗನವಾಡಿ ಕಾರ್ಯಕರ್ತೆಯರನ್ನು ಮತ್ತು ಎಸ್‍ಎಸ್‍ಎಲ್‍ಸಿ,ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.

ಸಂಘದ ಅಧ್ಯಕ್ಷ ಶಂಕರ ಶೆಟ್ಟಿ ಬೆಳ್ಳಾಡಿ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ರಾಮ ರಾಯ್ ಕಾಮತ್,ಕಿರಣ್ ಲೊಬೋ ಹಾಗೂ ಸಂಘದ ನಿರ್ದೇಶಕರಾದ ಕೆನಡಿ ಪಿರೇರಾ,ಜನಾರ್ಧನ ಪೂಜಾರಿ ಸಾಲಾಡಿ ಸಂಘದ ಏಲ್ಲಾ ನಿರ್ದೇಶಕರು ಉಪಸ್ಥಿತರಿದ್ದರು.

ಶಂಕರ ಶೆಟ್ಟಿ ಬೆಳ್ಳಾಡಿ ಸ್ವಾಗತಿಸಿದರು ನಿರೂಪಣೆಯನ್ನು ಕೆನಡಿ ಪರೇರಾ ರವರು ನಿರ್ವಹಿಸಿದರು,ವಾಸು ಗಾಣಿಗ ಧನ್ಯವಾದವನ್ನು ಮಾಡಿದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)