ಉಪ್ಪುಂದ : ಕೊರೊನಾ ಪರಿಹಾರ ಒತ್ತಾಯಿಸಿ ಸಿಪಿಐ(ಎಂ)ಪ್ರಚಾರಂದೋಲನ

0
517

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

 

ಸಿಪಿಐ(ಎಂ) ಬೈಂದೂರು ವಲಯ ಸಮಿತಿಯ ನೇತೃತ್ವದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವುದಕ್ಕೆ ಆಗ್ರಹಿಸಿ ಪ್ರಧಾನ ಮಂತ್ರಿಗಳಿಗೆ ಸಾಮೂಹಿಕವಾಗಿ ಮನವಿಕೊಡುವ ಬೃಹತ್ ಹೋರಾಟ ಕಾರ್ಯಕ್ರಮ ದಿನಾಂಕ:01=09=2020 ಮಂಗಳವಾರ ಮಧ್ಯಾಹ್ನ 3=00 ಗಂಟೆಗೆ ಉಪ್ಪುಂದ ಗ್ರಾಮ ಪಂಚಾಯತ್ ಕಚೇರಿ ಎದುರು ಜರಗಲಿದೆ.

ಈ ಕಾಯ೯ಕ್ರಮ ಯಶಸ್ವಿಗೊಳಿಸಲು ಪೂವ೯ಭಾವಿ ಸಿದ್ಧತೆಯಾಗಿ ಉಪ್ಪುಂದ ಗ್ರಾಮದ ಜನತಾ ಕಾಲನಿಯಲ್ಲಿ ಮನೆ ಮನೆಗೆ ಕರಪತ್ರಗಳನ್ನು ವ್ಯಾಪಕವಾಗಿ ವಿತರಿಸಿ ಪ್ರಚಾರ ಅಭಿಯಾನ ನಡೆಸಲಾಯಿತು.

ಸುಮಾರು ನೂರಕ್ಕೂ ಹೆಚ್ಚು ಕಾಮಿ೯ಕರು ಭಾಗವಹಿಸಿದ ಪ್ರಚಾರಾಂದೋಲನದ ಮುಖಂಡತ್ವವನ್ನು ಸಿಪಿಐ(ಎಂ)ಮುಖಂಡರಾದ ವೆಂಕಟೇಶ್ ಕೋಣಿ,ಚಂದ್ರ ದೇವಾಡಿಗಉಪ್ಪುಂದ, ಮಾಧವ ದೇವಾಡಿಗ ಉಪ್ಪುಂದ,ಉದಯ ಗಾಣಿಗ ಮೊಗೇರಿ,ಅಮ್ಮಯ್ಯ ಪೂಜಾರಿ ಬಿಜೂರು,ಹಾಗೂ ಮಹಿಳಾ ಕಾಮಿ೯ಕ ಮುಖಂಡರಾದ ಜ್ಯೋತಿ, ಚಿಕ್ಕಮ್ಮ, ಸಾವಿತ್ರಿ, ಸುಶೀಲ, ಸುಪ್ರೀತಾ, ಸೌಮ್ಯ, ಮಲ್ಲಿಕಾ, ಗೀತ, ಶಾಂತಿ, ಪ್ರೇಮ, ಚೆಂದು, ಮೂಕಾಂಬು ಗಾಂಧಿನಗರ ಮರವಂತೆ, ಮೊದಲಾದವರು ಪ್ರಚಾರಂದೋಲನದ ನೇತೃತ್ವ ವಹಿಸಿದ್ದರು.

ವರದಿ: ವೆಂಕಟೇಶ್ ಕೋಣಿ

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)