ರೋಟರಿ ಮಾಜಿ ಗರ್ವನರ್ ಜಗನ್ನಾಥ ಶೆಟ್ಟಿಗೆ ಭಾವಪೂರ್ಣ ಶ್ರದ್ಧಾಂಜಲಿ

0
827

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು : ಬೈಂದೂರು ಪುತ್ರರಾದ ಬಿ.ಜಿ ಮೋಹನದಾಸ್ ರವರ ತಂದೆಯವರಾದ ದಿ|| ಗೋವಿಂದಪ್ಪ ಬೆಸ್ಕೂರರವರ ಸ್ನೇಹಿತರಾದ ಜಗ್ನನಾಥ ಶೆಟ್ಟಿರವರು ಬಿ.ಜಿಯವರ ಕನಸಿನ ವೆಬ್ ಸೈಟ್  ಬೈಂದೂರ ಡಾ.ಕಾಮ್ ನ್ನು ಉದ್ಘಾಟಿಸಿದರು.

ಬೈಂದೂರ ಡಾ. ಕಾಮ್  ನ ಎಲ್ಲಾ ಸಿಬ್ಬಂದಿಗಳಿಂದ ಹಾಗೂ ಬಿ.ಜಿಯವರಿಂದ ಭಾವಪೂರ್ಣ  ಶ್ರದ್ಧಾಂಜಲಿ.

ಬೈಂದೂರು ಅಭಿವೃದ್ದಿಗೆ ಶ್ರಮಿಸಿದ ಬೈಂದೂರು ತಾಲೂಕು ಹೋರಾಟ ಮತ್ತು ಅಭಿವೃದ್ಧಿ ಸಮಿತಿಯ ಅಧ್ಯಕ್ಷ, ಬೈಂದೂರು ಬಂಟರಯಾನೆ ನಾಡವರ ಸಂಘದ ಅಧ್ಯಕ್ಷರಾದ ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ರೋಟರಿ ಮಾಜಿ ಗರ್ವನರ್ ಜಗ್ನನಾಥ ಶೆಟ್ಟಿ ಅಗಸ್ಟ್ 04 ರಂದು ಅನಾರೋಗ್ಯದಿಂದ ಮೃತಪಟ್ಟಿರುತ್ತಾರೆ ಇವರ ಆತ್ಮಕ್ಕೆ ಬೈಂದೂರ ಡಾ.ಕಾಮ್ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಕೋರಲಾಯಿತು.

 

ಸೆಪ್ಟೆಂಬರ್ 29, 1924 ರಲ್ಲಿ ಡಿ. ಮಂಜಯ್ಯ ಶೆಟ್ಟಿ ಮತ್ತು ಕಾವೇರಿ ದಂಪತಿಗಳ ಮಗನಾಗಿ ಜನಿಸಿದ ರೋಟೆರಿಯನ್ ಜಗನ್ನಾಥ ಶೆಟ್ಟಿ ಬೈಂದೂರಿನ ಪ್ರಸಿದ್ದ ಯಡ್ತರೆ ಮನೆತನದವರು. ಮೂಲತ ಉಪ್ಪುಂದ ಕುಟುಂಬದವರಾಗಿದ್ದ ಬಂಡಾಡಿಗೆ ದತ್ತು ಸೇರ್ಪಡೆಗೊಂಡವರು.

ನಿಮ್ಮ ಬಾಲ್ಯ ಮತ್ತು ಕಾಲೇಜು ದಿನಗಳು ಹೇಗಿದ್ದವು ? : ಬೈಂದೂರಿನ ಯಡ್ತರೆ ಮನೆತನ ಕೇವಲ ಪತ್ನಿಯ ಮನೆ ಮಾತ್ರವಲ್ಲದೆ ರಕ್ತಗತ ಸಂಬಂಧ ಹೊಂದಿದೆ. ಕನ್ಯಾನದಲ್ಲಿ 4ನೇ ತರಗತಿಯವರೆಗೆ ಬಳಿಕ ಬೈಂದೂರು ಜೂನಿಯರ್ ಕಾಲೇಜಿನಲ್ಲಿ 5ರಿಂದ 8ನೇ ತರಗತಿ, ಕುಂದಾಪುರ ಬೋರ್ಡ್ ಹೈಸ್ಕೂಲ್ ನಲ್ಲಿ 1938 ರಿಂದ 41 ರವರೆಗೆ ಪ್ರೌಢಶಾಲೆ ಹಾಗೂ ಪಿಯುಸಿ ಮುಗಿಸಿದೆ.

ಅರಣ್ಯ ಇಲಾಖೆಯ ಸೇವೆಗೆ ನಿಯುಕ್ತಿಗೊಂಡಿರುವುದು ಹೇಗೆ ? : 1944 – 45 ರಲ್ಲಿ ಅರಣ್ಯ ಇಲಾಖೆಗೆ ಮದ್ರಾಸಿನಲ್ಲಿ ಸೇರ್ಪಡೆಗೊಂಡು 1956ರಲ್ಲಿ ಅಸಿಸ್ಟೆಂಟ್ ಕನ್ಸ್ ರ್ ವೇಟರ್ ಆಗಿ ನಿಯುಕ್ತಿಗೊಂಡು 1966ರ ಬಳಿಕ ಭಾರತೀಯ ಅರಣ್ಯ ಸೇವೆಯಾಗಿ ಬದಲಾವಣೆಗೊಂಡಿತು. 1975ರಲ್ಲಿ ಮದ್ರಾಸಿನಿಂದ ಕರ್ನಾಟಕಕ್ಕೆ ವರ್ಗಾವಣೆಗೊಂಡು ಶಿವಮೊಗ್ಗ, ಮಂಗಳೂರು ಮುಂತಾದ ಕಡೆ ಕನ್ಸ್ ರ್ ವೇಟರ್, ವನ್ಯಜೀವಿ ವಿಭಾಗ ಮುಂತಾದ ಕಡೆ ಸೇವೆಸಲ್ಲಿಸಿದ್ದೇನೆ. 1982ರಲ್ಲಿ ನಿವೃತ್ತಿ ಹೊಂದಿದ್ದೇನೆ.

ಸಾರ್ವಜನಿಕ ಸೇವೆಯಲ್ಲಿ ತಮ್ಮ ಅನುಭವ…. : ವಿದ್ಯಾರ್ಥಿ ದೆಸೆಯಲ್ಲಿಯೇ ನಾಯಕತ್ವ ಗುಣ ಮೈಗೂಡಿಸಿಕೊಂಡಿರುವ ಕಾರಣ ವಿದ್ಯಾರ್ಥಿ ಪರಿಷತ್, ಹಾಸ್ಟೆಲ್ ಮುಂತಾದ ಕಡೆ ಮುಂದಾಳತ್ವ ವಹಿಸಿಕೊಂಡಿದೆ. ತಮಿಳುನಾಡಿನ ವೆಲ್ಲೂರು ಎಂಬಲ್ಲಿ 1973ರಲ್ಲಿ ರೋಟರಿ ಸೇರ್ಪಡೆಗೊಂಡು 1978ರಲ್ಲಿ ಶಿವಮೊಗ್ಗದಲ್ಲಿ ರೋಟರಿ ಸದಸ್ಯನಾಗಿದ್ದೆ. 1984ರಲ್ಲಿ ಬೈಂದೂರಿನಲ್ಲಿ ರೋಟರಿ ಸಂಸ್ಥೆ ಪ್ರಾರಂಭಿಸಿದ್ದು ಸ್ಥಾಪಕ ಅಧ್ಯಕ್ಷನಾಗಿದ್ದೆ. 1991ರಲ್ಲಿ ಜಿಲ್ಲಾ ರೋಟರಿ ಗವರ್ನರ್ ರಾಗಿದ್ದು ಬೈಂದೂರು ಬಂಟರ ಸಂಘ, ವೆಂಕಟರಮಣ ದೇವಸ್ಥಾನ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಕ್ರೀಯ ಸದಸ್ಯರಾಗಿದೆ.

ಬೈಂದೂರು ಅಭಿವೃದ್ದಿಯ ಹೋರಾಟದಲ್ಲಿ ತಮ್ಮ ಪ್ರಯತ್ನವೇನು ? : ಬೈಂದೂರು ಅಭಿವೃದ್ದಿಗಾಗಿ ತಲೆತಲಾಂತರದಿಂದಲೂ ಹೋರಾಟ ನಡೆಸುತ್ತಿದೆ. ಇಲ್ಲಿನ ವತ್ತಿನೆಣೆ ಪರಿಸರದಲ್ಲಿ ಕೇಂದ್ರ ಸರಕಾರ ಉಪಗ್ರಹ ಉಡ್ಡಯನ ಕೇಂದ್ರ ಪ್ರಾರಂಭಿಸುವ ಸಿದ್ದತೆ ಮಾಡಿದಾಗ ಸಮಾನ ಮನಸ್ಕರ ತಂಡದೊಂದಿಗೆ ನಿರಂತರ ಹೋರಾಟ ಮಾಡಿ ಒರಿಸ್ಸಾಕ್ಕೆ ಸ್ಥಳಾಂತರಿಸಿದೆವು. ಒಂದೊಮ್ಮೆ ಬೈಂದೂರಿನಲ್ಲಿ ಉಡ್ಡಯನ ಕೇಂದ್ರವಾದರೆ ಸುತ್ತಮುತ್ತಲಿನ 7 ಕಿ. ಮೀ. ನಲ್ಲಿರುವ ಜನರು ತೆರವುಗೊಳಿಸಬೇಕಾಗಿತು. ಈ ಸಂದರ್ಭದಲ್ಲಿ ಸಾಹಿತಿ ಶಿವರಾಮ ಕಾರಂತರು ಕೈಜೋಡಿಸಿದ್ದರು.

ಬೈಂದೂರು ತಾಲೂಕು ರಚನೆ ಬಗ್ಗೆ ನಿಮ್ಮ ಅಭಿಪ್ರಾಯವೇನು ? : ಬೈಂದೂರಿನಲ್ಲಿ ತಾಲೂಕು ರಚನೆಗೆ 1984ರಿಂದ ಹೋರಾಟ ಪ್ರಾರಂಭಿಸಿದ್ದು ಗದ್ದಿಗೌಡರ ಆಯೋಗ, ಹುಂಡೇಕರ ಕಮಿಟಿ, ವಾಸುದೇವರಾದ ಸಮಿತಿಯಲ್ಲಿ ಪ್ರಸ್ತಾಪವಿದೆ. ಅಂದಿನಿಂದ ಇಂದಿನವರೆಗೆ ವಿವಿಧ ಸಚಿವರ ಜೊತೆ ನಿರಂತರ ಪತ್ರ ವ್ಯವಹಾರ ನಡೆಸಿದ್ದೇವೆ. ತಾಲೂಕು ರಚನೆ ಶೀಘ್ರವಾಗಿ ರಚನೆಯಾಗಬೇಕೆನ್ನುವುದು ಮೂಲ ಆಶಯ. ನ್ಯಾಯಾಲಯ ಸ್ಥಾಪನೆ ಸೇರಿದಂತೆ ಹತ್ತು ಹಲವು ಅಭಿವೃದ್ದಿಗೆ ಜನಪ್ರತಿನಿಧಿಗಳು ಪ್ರಯತ್ನಿಸಬೇಕಾಗಿದೆ.

ರೋಟೇರಿಯನ್ ಜಗನ್ನಾಥ ಶೆಟ್ಟಿಯವರು 88 ವರ್ಷದ ಹಿರಿಯರಾದರು ಸಹ ಕ್ಷೇತ್ರದ ಅಭಿವೃದ್ದಿಯ ಬಗ್ಗೆ ವಿಶೇಷ ಕಾಳಜಿ ಹಾಗೂ ಮಮತೆ ಹೊಂದಿದವರಾಗಿದ್ದಾರೆ. ತಾಲೂಕು ರಚನೆ ಸೇರಿದಂತೆ ಹತ್ತಾರು ವಿಚಾರಗಳಲ್ಲಿ ಮುಕ್ತವಾಗಿ ತೊಡಗಿಸಿಕೊಂಡ ಶ್ರೀಯುತರ ಸಹಕಾರ, ಮಾರ್ಗದರ್ಶನ ನಿರಂತರವಾಗಿ ಮುಂದುವರಿಯಲಿ ಎನ್ನುವುದು ನಮ್ಮ ಹಾರೈಕೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)