ಕರಾವಳಿಯಲ್ಲಿ ಭಾರಿ ಮಳೆ : ಹಲವೆಡೆ ಸುರಂಗ ಮಾರ್ಗ ಕುಸಿತ, ಮಾರ್ಗ ಬದಲಿಸಿದ ರೈಲುಗಳು

0
174

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)

ಉಡುಪಿ: ಕೊಂಕಣ ರೈಲ್ವೆ ವ್ಯಾಪ್ತಿಯ ಕಾರವಾರ ವಲಯದ ಗೋವಾ ಬಳಿಯ ಪೆರ್ನಮ್‌ನಲ್ಲಿರುವ ಸುರಂಗ ಮಾರ್ಗದ ಗೋಡೆಯ ಒಂದು ಭಾಗ ಗುರುವಾರ ಭಾರೀ ಮಳೆಯಿಂದಾಗಿ ಕುಸಿದಿದೆ.

ಮಧುರೆ ಹಾಗೂ ಪೆರ್ನಂ ಮಧ್ಯೆ ಸುರಂಗದಡಿ ಐದು ಮೀ. ಎತ್ತರದ ಗೋಡೆ ಕುಸಿದಿದ್ದು ಯಾವುದೇ ಅಪಾಯವಾಗಿಲ್ಲ. ಗೋಡೆ ಕುಸಿದು ರೈಲ್ವೆ ಹಳಿ ಮೇಲೆ ಸುರಿದ ಮಣ್ಣು ತೆರವು ನಡೆಯುತ್ತಿದೆ. ಕುಸಿದ ಗೋಡೆಯ ದುರಸ್ಥಿ ಪ್ರಗತಿಯಲ್ಲಿದೆ. ಮುಂದಿನ ಸೂಚನೆ ತನಕ ಈ ಮಾರ್ಗದಲ್ಲಿ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ.

ಎರ್ನಾಕುಲಂ ನಿಜಾಮುದ್ದೀನ್‌ ಸೂಪರ್‌ ಫಾಸ್ಟ್‌ ಸ್ಪೆಶಲ್‌ ಎಕ್ಸ್‌ಪ್ರೆಸ್‌(02617) ತಿರುವನಂತಪುರ ಸೆಂಟ್ರಲ್‌ ಲೋಕಮಾನ್ಯ ತಿಲಕ್‌ ಸ್ಪೆಶಲ್‌ ಎಕ್ಸ್‌ಪ್ರೆಸ್‌(06346) ರೈಲು ಮಡಗಾಂವ್‌, ಲೋಂಡ ಮೀರಜ್‌, ಪುಣೆ, ಪನ್ವೇಲ್‌, ಕಲ್ಯಾಣ್‌ ಬದಲಿ ಮಾರ್ಗದಲ್ಲಿ ಸಂಚರಿಸಿತು.ಇನ್ನು ಭಾರಿ ಮಳೆಯಿಂದಾಗಿ ಹಲವೆಡೆ ನೀರು ತುಂಬಿದೆ ಎನ್ನಲಾಗಿದೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)