ಕಾಲ್ತೋಡು: ಹರಿಯುವ ನೀರಿಗೆ ಬಿದ್ದು ಮಹಿಳೆ ಸಾವು 

0
177

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

 

ಉಪ್ಪುಂದ : ಹರಿಯುವ ನೀರಿಗೆ ಬಿದ್ದು ವ್ರದ್ದೆ ಸಾವನ್ನೊಪ್ಪಿದ ಘಟನೆ ಕಾಲ್ತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುರೂರು ಎಂಬಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದೆ. ಸೂರು ಪೂಜಾರಿ (70) ಮೃತಪಟ್ಟ ಮಹಿಳೆ.

ಮುರೂರು  ಶ್ರೀ ನಂದಿಕೇಶ್ವರ ದೈವಸ್ಥಾನದ ಬಳಿಯ ಹೊಳೆಯ ಸಮೀಪದ  ಗದ್ದೆಯಲ್ಲಿ ಕಳೆ ತೆಗೆದು ಹೊಳೆಯ ಮೂಲಕ ವಾಪಾಸು  ಮನೆಗೆ  ಬರುವ ಸಂದರ್ಭ  ಹರಿಯುವ ನೀರಿನಲ್ಲಿ  ಕೊಚ್ಚಿಕೊಂಡು ಹೋದ ಪರಿಣಾಮ ನೀರಿನಲ್ಲಿ ಮುಳುಗಿ  ಮಹಿಳೆ ಮ್ರತಪಟ್ಟಿದ್ದಾರೆ.

ಮಹಿಳೆ ಮನೆಯಿಂದ ಹೊಳೆ ದಾಟಿ ಗದ್ದೆಗೆ ಹೋಗುವಾಗ ನೀರಿನ ಹರಿವು ಕಡಿಮೆ ಇದ್ದು, ಕೆಲಸ ಮುಗಿಸಿ  ವಾಪಸು  ಮನೆಗೆ ಬರುವಾಗ ಭಾರೀ ಮಳೆಯಾದ ಕಾರಣ ಹೊಳೆಯಲ್ಲಿ  ನೀರಿನ ಹರಿಯು ಹೆಚ್ಚಳಗೊಂಡ ಪರಿಣಾಮ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮ್ರತಪಟ್ಟಿದ್ದಾರೆ.
ಈ ಸಂದರ್ಭ ಅವರು ಕೂಗಿಕೊಂಡಿದ್ದು ಸ್ಥಳೀಯರು ಹೊಳೆಯ ಬಳಿಗೆ ಬಂದರು ಸಹ  ನೀರು ಕೆಸರಿನಿಂದ ಕೂಡಿರುವುದರಿಂದ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.

ಹೊಳೆಯಲ್ಲಿ ನೀರು ತುಂಬಿ ಹರಿಯುತ್ತಿರುವ ಕಾರಣ ಮಹಿಳೆ ನೀರಿನಲ್ಲಿಮುಳುಗಿ ಮೃತಪಟ್ಟಿರುವುದಾಗಿದೆ ತಿಳಿದು ಬಂದಿದೆ.

ಸುಮಾರು 200ಮೀ. ದೂರದಲ್ಲಿ ಮ್ರತ ದೇಹ ಪತ್ತೆಯಾಗಿದ್ದು ಸ್ಥಳೀಯರು ಮೇಲಕ್ಕೆ ಎತ್ತಿದ್ದಾರೆ.

( ಹೊಳೆ ದಾಟಿ ಹೋಗುವ ಮೊದಲು ಸ್ಥಳೀಯ ಮನೆಯವರು ಈಗ ನೀರು ಜಾಸ್ತಿ ಇದ್ದು ಆಮೇಲೆ ಹೋಗಲು ಹೇಳಿದ್ದಾರೆ. ಇದನ್ನು ಕೇಳದೇ ಹೊರಟಾಗ ನಾವು ಹೊಳೆ ದಾಟಿಸಲು ಬರುತ್ತೇವೆ ಎಂದಾಗಲೂ 50 ವರ್ಷದಿಂದ ಈ ಹೊಳೆ ದಾಟುತ್ತಿದ್ದೇನೆ ಭಯ ಇಲ್ಲ ಎಂದು  ಹೇಳಿ ಹೋಗಿರುವುದಾಗಿ ಸ್ಥಳೀಯರು  ಮಾಹಿತಿ ನೀಡಿದ್ದಾರೆ. )

ಸ್ಥಳಕ್ಕೆ ಬೈಂದೂರು ತಹಶೀಲ್ದಾರ್ ಬಸಪ್ಪ ಪೂಜಾರ್, ಬೈಂದೂರು ಪೊಲೀಸರು  ಭೇಟಿ ನೀಡಿದ್ದಾರೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)