ನಿಧನ : ಎಚ್. ಬಿ. ತೇಜಪ್ಪ ಶೆಟ್ಟಿ

0
168

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು : ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಎಚ್. ಬಿ. ತೇಜಪ್ಪ ಶೆಟ್ಟಿ (81) ಶನಿವಾರ ಖಂಬದಕೋಣೆ ಗ್ರಾಮದ ಹಳಗೇರಿಯ ಅವರ ಮನೆಯಲ್ಲಿ ಅಲ್ಪಕಾಲದ ಅಸ್ವಾಸ್ಥ್ಯದಿಂದ ನಿಧನರಾದರು. ಬೆಳ್ತಂಗಡಿ, ಖಂಬದಕೋಣೆ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಕೆಲಸ ಮಾಡಿದ್ದ ಅವರು ನಾವುಂದ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ದೀರ್ಘಕಾಲ ದುಡಿದು ನಿವೃತ್ತರಾಗಿದ್ದರು.

ನಿವೃತ್ತಿಯ ಬಳಿಕ ಕಿರಿಮಂಜೇಶ್ವರ ಶುಭದಾ ಶೈಕ್ಷಣಿಕ ಪ್ರತಿಷ್ಠಾನದ ವಿಶ್ವಸ್ಥರಾಗಿ, ನಾವುಂದದ ಗುರು ನಿತ್ಯಾನಂದ ಸೌಹಾರ್ದ ಕ್ರೆಡಿಟ್ ಕೋಪರೇಟಿವ್‍ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಹಳಗೇರಿಯ ಶ್ರೀ ಕೊಕ್ಕೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಅದರ ಕಟ್ಟಡ ನಿರ್ಮಾಣ ಕಾರ್ಯದ ನೇತೃತ್ವ ವಹಿಸಿದ್ದರು.
ಅವರು ಪತ್ನಿ, ಪುತ್ರಿ ಮತ್ತು ಪುತ್ರನನ್ನು ಅಗಲಿದ್ದಾರೆ./

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)