ಶ್ರಾವಣ ಬಂತು ನಾಡಿಗೆ, ಸಂಭ್ರಮವಿಲ್ಲ ಬೀಡಿಗೆ

0
129

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಶ್ರಾವಣ ಮಾಸ ಬಂತೆಂದರೆ ಸಾಕು ಹಬ್ಬ ಹರಿದಿನಗಳು ಒಂದರಂತೆ ಒಂದು ಸಾಲುಸಾಲಾಗಿ ಬರುತ್ತಿರುತ್ತವೆ,ಹೆಂಗೆಳೆಯರ ಮನದಲ್ಲಿ ಹೊಂಗನಸು ಮೂಡಬೇಕಾದ ಹೊತ್ತಲ್ಲಿ ಸಂಭ್ರಮದ ಹಿಗ್ಗಿಲ್ಲ ಸೀಲ್ ಡೌನ್,ಲಾಕ್ ಡೌನ್ ನಿಂದ ಕಂಗೆಟ್ಟ ಜನರು ಹೊರಗೆ ಹೋಗಲು ಹಿಂಜರಿಯುತ್ತಾ ಇದ್ದು ಕೋವಿಡ್-19 ಸಂಚಾರದ ದಾರಿಯನ್ನೆ ಕಡಿದು ಹಾಕಿದೆ.

ಹಬ್ಬಗಳು ಒಂದರ ಹಿಂದೆ ಒಂದು ಬಂದೆ ಬಿಟ್ಟಿತು : ನಾಗರ ಪಂಚಮಿ ಸರಳವಾಗಿ ಆಚರಣೆ ಆಯಿತು,ವರಮಹಾಲಕ್ಷ್ಮೀ ಹಬ್ಬ ಬಂದೆ ಬಿಟ್ಟಿತು, ಮುತ್ತೈದೆಯರ ಮನದಲ್ಲಿ ಉಲ್ಲಾಸ ತುಂಬಿದ್ದರು ಸಂಭ್ರಮದ ಆಚರಣೆಗೆ ಅಕುಂಶ ಬಿದ್ದಿದೆ ಮುಡಿತುಂಬಿ ಹರಸುವಂತೆ ಇಲ್ಲ, ಅರಿಸಿನ ಕುಂಕುಮವನ್ನು ಪರಸ್ಪರ ಹಂಚಿ ಕೊಳ್ಳದಿರುವಂತ ಸ್ಥಿತಿ ನಿರ್ಮಾಣವಾಗಿದ್ದು ಹಬ್ಬದ ವಾತಾವರಣ ನಾಡಿನೆಲ್ಲೇಡೆ ಇಲ್ಲದಂತಾಗಿದೆ.

ಸಂಭ್ರಮದ ಆಚರಣೆಗೆ ಕಡಿವಾಣ : ರಾಯರ ಆರಾಧನೆಯನ್ನು ಮಾಡಲು ಕಠಿಣ ನೀತಿ,ನೂಲು ಹುಣ್ಣಿಮೆಗೆಂದು ನೂಲು ತರಲು ಪೇಟೆಗೆ ಹೊಗಲು ಹಲವು ರೀತಿ ನೀತಿ,ರಕ್ಷ ಬಂಧನದ ಖರಿದಿಗೆ ಪಚಿತಿ,ಕೃಷ್ಣನ ಪೂಜಿಸಲು ಮನೆಯೊಳಗೆ ಮೀತಿ,ಚೌತಿಯ ಗಣಪನನ್ನು ಆರಾಧಿಸಲು ನಾನಾ ರೀತಿಯ ಮಾರ್ಗಸೂಚಿ,ಹಬ್ಬಗಳನ್ನು ವಿಜೃಂಭಣೆಯಿಂದ ಮಾಡುವಷ್ಟು ಶಕ್ತಿ ಇಂದು ಜನರ ಬಳಿ ಇಲ್ಲದಂತಾಗಿದ್ದರು ಆಚರಣೆಗೆ ಮಾತ್ರ ನಮ್ಮ ನಾಡಿನಲ್ಲಿ ಕೊರತೆ ಇಲ್ಲವೆಂದೇ ಹೇಳಬಹುದು, ಇಂತಹ ಸಂದಿಗ್ಧ ಪರಿಸ್ಥಿಯಲ್ಲಿ ನಾವೂ ಸರಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುದರ ಜೋತೆಗೆ ನಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನವನ್ನು ಕೇಂದ್ರಿಕರಿಸಬೇಕಾದಂತ ವಿಷಮ ಸ್ಥೀತಿಯ ವಾತಾವರಣ ದೇಶದೆಲ್ಲೇಡೆ ನಿರ್ಮಾಣವಾಗಿದ್ದರಿಂದ ಕಾಲಕ್ಕೆ ತಕ್ಕಂತೆ ನಾವೂ ತಕ್ಕಡಿಯನ್ನು ಹಿಡಿದು ತೂಗಬೇಕಾಗಿದೆ ಶ್ರಾವಣ ಬಂದಿದೆ ಸಾವಾಧಾನದಿಂದ ಹಬ್ಬ ಹರಿದಿನಗಳನ್ನು ಆಚರಣೆ ಮಾಡಬೇಕಾಗಿದೆ ಮುಂದೊಂದು ದಿನ ಶುಭ ದಿನಬಂದೆ ಬರುತ್ತದೆ ಅದು ನಮ್ಮನ್ನೇಲ್ಲ ಮತ್ತೆ ಕುಣಿದಾಡುವಂತೆ ಮಾಡುತ್ತದೆ.

ಪ್ರತಿವರ್ಷ ವರಮಹಾಲಕ್ಷ್ಮೀ ವ್ರತ ಆಚರಣೆಯನ್ನು ಮನೆಯಲ್ಲಿ ಮಾಡುತ್ತಿದ್ದೇವೆ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಿ ಉಪವಾಸ ವ್ರತ ಆಚರಣೆ ಮಾಡಿ, ಮುತ್ತೈದೆಯರನ್ನು ಮನೆಗೆ ಕರೆದು ಮುಡಿತುಂಬಿ ಅರಿಸಿನ ಕುಂಕುಮ ನೀಡುತ್ತಿದ್ದೇವು, ಈ ಭಾರಿ ಸರಳವಾಗಿ ಆಚರಣೆ ಅಷ್ಟೇ, ಇಂಥ ಪರಿಸ್ಥಿತಿಯಲ್ಲಿ ನಾವು ಸ್ವಯಂ ನಿರ್ಧಾರ ಕೈಗೊಳ್ಳುವುದು ಒಳ್ಳೆಯದು ಮನೆಯಲ್ಲಿ ಇದ್ದು ಲಕ್ಷ್ಮೀ ದೇವಿಯನ್ನು ಭಕ್ತಿಯಿಂದ ಪೂಜಿಸಿದರೆ ಸಾಕು ದೇವರಿಗೆ ಭಕ್ತಿ ಮುಖ್ಯ ವಿನಃ ಆಡಂಭರ ಬೇಕಿಲ್ಲ – ಸುಶೀಲ ಪೂಜಾರಿ ಕನ್ಯಾನ ಹಟ್ಟಿಅಂಗಡಿ

ವರದಿ: ಜಗದೀಶ ದೇವಾಡಿಗ ಮುಳ್ಳಿಕಟ್ಟೆ

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)