ಹಿಮ್ಮುಂಜೆ ಗುಡ್ಡೆ ಹೋಟೆಲ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಪ್ಪು ಹಲಗೆಗೆ… ಸುಣ್ಣದ ಕಡ್ಡಿಗಳಿಗೆ ಧನ್ಯವಾದ ಹೇಳಿದ ಅಪರೂಪದ ಶಿಕ್ಷಕ

0
1950

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (6) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಲಾಕ್ ಡೌನ್ ಅವಧಿಯಲ್ಲಿ ಶಾಲೆಗೆ ರಜೆ ಘೋಷಣೆ ಮಾಡಿದ್ದರೂ ಸಹ ಸುರೇಂದ್ರ ಮಾಸ್ಟರ್ ಸುಮ್ಮನೆ ಮನೆಯಲ್ಲಿ ಇರಲಿಲ್ಲ,ಸತತ 42 ದಿನಗಳ ಕಾಲ ದಣಿವರಿಯದೆ ಪ್ರತಿದಿನ ಬೆಳ್ಳಿಗ್ಗೆಯಿಂದ ಸಂಜೆ ವರೆಗೆ ನಿಂತು,SSLC ಮಕ್ಕಳಿಗೆ ಅನುಕೂಲವಾಗಲೂ ಸಮಾಜ ವಿಜ್ಜಾನದ ಕುರಿತು ಆಫ್ ಲೈನ್ ನಲ್ಲಿ ಪಾಠ ಮಾಡಿದ್ದಾರೆ,ಇದು ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳ ಕೇಂದ್ರಗಳಲ್ಲಿ ಬಿತ್ತರಗೊಂಡಿದೆ.ಇವರ ಆಫ್ ಲೈನ್ ವೀಡಿಯೋ ಸಾಮಾಜಿಕ ಜಾಲಾತಾಣದಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ 5ಲಕ್ಷಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ವಿಕ್ಷಣೆ ಮಾಡಿದ್ದು ರಾಜ್ಯಾದಂತ ಇವರ ಕಾರ್ಯ ಜನಮೆಚ್ಚುಗೆಗೆ ಪಾತ್ರವಾಗಿದೆ.

ರಾಜ್ಯದ ಮೂಲೆ ಮೂಲೆಗೆ ತಲುಪಿದ್ದು ಹೇಗೆ: ಕರ್ನಾಟಕ ರಾಜ್ಯದ 34 ಶೈಕ್ಷಣಿಕ ವಲಯಕ್ಕೆ ಸಂಬಂಧಪಟ್ಟಂತೆ 250 ಸಮಾಜ ವಿಜ್ಜಾನ ಶಿಕ್ಷಕರೊಳಗೊಂಡ ಎಸ್.ಪಿ.ಎಪ್ ಎನ್ನುವ ವಾಟ್ಸ್ ಆಫ್ ಗ್ರೂಫ್ ಇದ್ದು ಗ್ರೂಪಿನ ಸದಸ್ಯರು ಸುರೇಂದ್ರ ಮಾಸ್ಟರ್ ಪಾಠಮಾಡಿದ ಆಫ್ ಲೈನ್ ವೀಡಿಯೋವನ್ನು ಅವರ ಸಹಚರ ಶಿಕ್ಷಕರಿಗೆ ಮತ್ತು ಮಕ್ಕಳ ಪೋಷಕರಿಗೆ ತಲುಪುವಂತೆ ಮಾಡುತ್ತಿದ್ದರು ಮಾತ್ರವಲ್ಲದೆ ಪ್ರತಿ ಜಿಲ್ಲೆಯಲ್ಲೊಂದು ಆಯಾಯ ಜಿಲ್ಲೆಗೆ ಸಂಬಂಧಿಸಿದಂತೆ ಶಿಕ್ಷಕರ ವಾಟ್ಸ್ ಆಫ್ ಗ್ರೂಪ್ ಇದ್ದು ಗುಂಪಿನಲ್ಲಿ ಇದ್ದ ಸದಸ್ಯರು ವೀಡಿಯೋವನ್ನು ಸೇರ್ ಮಾಡುತ್ತಿದ್ದರು ಹೀಗೆ ಮಾಡಿದ್ದರಿಂದ ಅತ್ಯಂತ ಸುಲಭವಾಗಿ ರಾಜ್ಯದ ಮೂಲೆ ಮೂಲೆಗೆ ತಲುಪಿದೆ.ಶಿಕ್ಷಣದಲ್ಲಿ ಅತಿವ ಜ್ಞಾನವನ್ನು ಹೊಂದಿದ ಸುರೇಂದ್ರ ಮಾಸ್ಟರ್ ಅವರ ಪಾಠ ಎಲ್ಲರಿಗೂ ಹಿಡಿಸಿದ್ದರಿಂದ ಇಷ್ಟೊಂದು ಜನಪ್ರೀತಿಗೆ ಕಾರಣವಾಗಿದೆ.

ಶ್ರೀ ಸಿದ್ದಲಿಂಗೇಶ್ವರ ಪ್ರೌಡಶಾಲೆ ಮಾಗಡಿರಸ್ತೆ ಬೆಂಗಳೂರಿನ ಶಿಕ್ಷಕನಿಂದ ಹೆಮ್ಮುಂಜೆ ಗುಡ್ಡೆಹೋಟೆಲ್ ಶಾಲೆಯಲ್ಲಿ ನಿಂತು ಪಾಠ:
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಾಡ ಗ್ರಾಮದ ಹೆಮ್ಮುಂಜೆಯ ಗುಡ್ಡೆ ಹೋಟೆಲ್ ನಿವಾಸಿ ಮಂಜು ನಾಯ್ಕ್ ಸಾಧು ದಂಪತಿ ಪುತ್ರ ಸುರೇಂದ್ರ ನಾಯ್ಕ್ MA,Bed  ಪದವೀಧರ ಬಡತನದಲ್ಲಿ ಹುಟ್ಟಿ ಕಷ್ಟಪಟ್ಟು ಓದಿದ ಇವರು ಪ್ರಸ್ತುತ ಬೆಂಗಳೂರಿನ ಶ್ರೀ ಸಿದ್ದಲಿಂಗೇಶ್ವರ ಶಾಲೆಯಲ್ಲಿ ಪ್ರೌಡಶಾಲಾ ಶಿಕ್ಷಕರಾಗಿ 10 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಇದ್ದು.ಲಾಕ್ ಡೌನ್ ಇದ್ದ ಕಾರಣ ರಜೆ ಮೇಲೆ ಊರಿಗೆ ಬಂದಿದ್ದರು.ಶಿಕ್ಷಣ ಇಲಾಖೆಯ ಮಾರ್ಗದರ್ಶನದ ಮೇರೆಗೆ ತಾನು ಕಲಿತ ನಾಡ ಗ್ರಾಮದ ಹೆಮ್ಮುಂಜೆಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಿಂತು ಒಂದು ದಿನವನ್ನು ವ್ಯರ್ಥವಾಗಿ ಹಾಳುಮಾಡದೆ ಅ,ಆ,ಇ,ಈ ಅಕ್ಷರ ಕಲಿತ ಕಪ್ಪು ಹಲಗೆ ಮೇಲೆ ಸುಣ್ಣದ ಕಡ್ಡಿ ಹಿಡಿದು ಸಮಾಜ ವಿಜ್ಜಾನ ವಿಷಯದ ಕುರಿತು ಮಕ್ಕಳ್ಳಿಲ್ಲದೆ ಒಬ್ಬರೆ ಪಾಠಮಾಡಿ ಮಕ್ಕಳ್ಳಿಗೆ ತಲುಪುವಂತೆ ಮಾಡಿದ ಅಪ್ರತೀಮ ಸಾಧಕ.

ಮಕ್ಕಳ ಬಾಳಿಗೆ ಬೆಳಗಾದ ಊರಿನ ಹೆಮ್ಮೆಯ ಮಾಸ್ಟರ್: 2002 ರಲ್ಲಿ ಕುಂದಾಪುರ ತಾಲೂಕಿನ ಆಲೂರು ಗ್ರಾಮ ಪಂಚಾಯತ್ ಮತ್ತು ನಮ್ಮ ಭೂಮಿಯಿಂದ ಶಾಲೆಬಿಟ್ಟು ದುಡಿಯುತ್ತಿದ್ದ ಮಕ್ಕಳಿಗಾಗಿ ಸ್ಧಾಪನೆಯಾದ ವಿಸ್ತರಣಾ ಪ್ರೌಡಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ನಾಲ್ಕು ವರ್ಷಗಳ ಸೇವೆ ಸಲ್ಲಿಸಿದ್ದು.ಶಾಲೆಯಿಂದ ಹೊರಗುಳಿದ 200 ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬಂದು ಎಸ್.ಎಸ್.ಎಲ್.ಸಿ ಶಿಕ್ಷಣ ಪೂರೈಸುವಂತೆ ಮಾಡಿದ್ದು ಮಕ್ಕಳ ಬಾಳಿಗೆ ಬೆಳಕಾಗಿದ್ದಾರೆ.

ಕಲೆ ಶಿಕ್ಷರಲ್ಲದಿದ್ದರು ಕಲೆಗಾರ: ಸದಾ ಒಂದಿಲ್ಲವೊಂದು ಚಟುವಟಿಕೆಯಲ್ಲಿ ಭಾಗಿಯಾಗುವ ಇವರು,ವಿವಿಧ ರೀತಿಯ ಮುಖವರ್ಣವನ್ನು ಬಿಡಿಸಿ,ಸಾಮಾಜಿಕ ಸಂದೇಶ ಸಾರುವ ಚಿಣ್ಣರ ಬಯಲಾಟ,ಬೀದಿನಾಟಕವನ್ನು ತಮ್ಮ ವಿದ್ಯಾರ್ಥಿಗಳ ತಂಡವನ್ನು ಕಟ್ಟಿ ಬೆಂಗಳೂರಿನಲ್ಲಿ ಸುಮಾರು 68ಕ್ಕೂ ಹೆಚ್ಚು ಪ್ರದರ್ಶನವನ್ನು ಮಾಡಿದ್ದಾರೆ.

ಸಕಲಕಲ ವಲ್ಲಭ: ನಾಟಕ ರಚನೆ ನಿರ್ದೇಶನ ಮಾಡುದರ ಜೊತೆಗೆ ಉಪನ್ಯಾಸ ಕಾರ್ಯಕ್ರಮವನ್ನು ಸಹ ನೀಡುತ್ತಾರೆ.ತಮ್ಮ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಯಕ್ಷಗಾನದ ವೇಷತೊಟ್ಟು ನಿರೂಪಣೆ ಮಾಡಿದ್ದು ಎಲ್ಲರ ಗಮನ ಸೇಳೆದಿದೆ.ಮತದಾನ ಜಾಗ್ರತಿ ಕುರಿತು ಅಭಿಯಾನವನ್ನು ಬಿದಿನಾಟಕದ ಮೂಲಕ ಜಾಗ್ರತಿ ಮೂಡಿಸುವ ಇವರ ಕಾರ್ಯ ಶ್ಲಾಘನೀಯವಾದದ್ದು.

ಶ್ರಮೀಕ ಶಿಕ್ಷಕನಿಗೆ ವಲಿದ ಪ್ರಶಸ್ತಿ: ಇ.ಎಲ್.ಸಿ ಅತ್ಯುತ್ತಮ ಸಂಚಾಲಕ ಶಿಕ್ಷಕರು ಪ್ರಶಸ್ತಿಯನ್ನು ಕರ್ನಾಟಕದ ಘನತವೆತ್ತ ರಾಜ್ಯಪಾಲ ವಜುಬಾಯಿ ವಲಾ ನೀಡಿ ಗೌರವಿಸಿರುತ್ತಾರೆ.ಹೀಗೆ ಹತ್ತು ಹಲವು ಪ್ರಶಸ್ತಿಗಳು ಇವರಿಗೆ ವಲಿದು ಬಂದಿರುತ್ತದೆ.ಇವರು ನಿರ್ದೇಶನ ಮಾಡಿದ ನಾಟಕಕ್ಕೆ ರಾಜ್ಯ ಮಟ್ಟದ ಪ್ರಶಸ್ತಿಯ ಗೌರವಕ್ಕೆ ಪಾತ್ರವಾಗಿದೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (6) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)