ಉಳ್ಳೂರು 74ರಲ್ಲಿ ಅಪರೂಪವಾದ ಒಕೈ ಮಾಸ್ತಿ ಕಲ್ಲು ಪತ್ತೆ

0
221

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಕುಂದಾಪುರ: ಕುಂದಾಪುರ ತಾಲೂಕಿನ ಶಂಕರನಾರಾಯಣ ಸಮೀಪ ಉಳ್ಳೂರು 74 ಗ್ರಾಮದ ಗರಡಿ ಬೆಟ್ಟು ಶ್ರೀ ಬನಶಂಕರಿ ದೇವಸ್ಥಾನದ ಎದುರು ಭಾಗದಲ್ಲಿ ಅತೀ ಅಪರೂಪವಾದ ಒಕೈ ಮಾಸ್ತಿ ಕಲ್ಲು ಪತ್ತೆಯಾಗಿದೆ.

ಮಾಸ್ತಿ ಕಲ್ಲುಗಳು ಕರಾವಳಿ ಭಾಗದಲ್ಲಿ ಸಹಜವಾದರೂ ಕೂಡಾ ಇಲ್ಲಿ ಕಾಣಲಿರುವುದು ಒಕೈ ಮಾಸ್ತಿ ಕಲ್ಲು.ಈ ಹಿಂದೆ ಶಂಕರನಾರಾಯಣ ಗ್ರಾಮದಲ್ಲೂ ಸಹಾ ಇಂತಹ ಒಕೈ ಮಾಸ್ತಿ ಕಲ್ಲುಗಳನ್ನು ಶ್ರೀ ಪ್ರದೀಪ ಕುಮಾರ್ ಬಸ್ರೂರು ಪತ್ತೆ ಹಚ್ಚಿರುವುದಾಗಿದೆ. ಹಾಗೂ ಅತೀ ಅಪರೂಪವಾಗಿ ಕಾಣಲ್ಪಡುವ ಒಕೈ ಮಾಸ್ತಿ ಕಲ್ಲುಗಳು ಇದಾಗಿದೆ.

ಈ ಒಕೈ ಮಾಸ್ತಿ ಕಲ್ಲಿನಲ್ಲಿ ವೀರ ಹಾಗೂ ಸತಿ ಇದೆ, ಸೂರ್ಯ, ಚಂದ್ರ ಇದೆ. ಒಂದು ಕೈಯ ಶಿಲ್ಪ ಕಲೆ ಇದೆ‌. ಕೈಯ ಪಕ್ಕದಲ್ಲಿ ಲಿಂಬೆ ಶಿಲ್ಪ ಕಲೆ ಇದೆ ಕೇಳ ಭಾಗದಲ್ಲಿ ಖಡ್ಗ ಹಿಡಿದ ವೀರನ ಶಿಲ್ಪ ಕಲೆ ಕಂಡು ಬರುತ್ತದೆ.

ಮೂರನೇ ಪಟ್ಟಿಯಲ್ಲಿ ಸೂರ್ಯ, ಹಾಗೂ ಚಂದ್ರರ ಶಿಲ್ಪ ಕಲೆ ಕೆತ್ತಲ್ಪಟ್ಟಿದೆ. ಸೂರ್ಯ ಹಾಗೂ ಚಂದ್ರರೂ ಇರುವ ತನಕ ಅಜರಾಮರವಾಗಿರಲಿ ಎನ್ನುವ ಸಂದೇಶದೊಂದಿಗೆ ಪಕ್ಕದಲ್ಲಿ ಒಂದು ಕೈ ಮೇಲ್ಭಾಗವನ್ನು ತೋರಿಸುವಂತ ಶಿಲ್ಪ ಇದೆ. ಇದು ಒಕೈ ಮಾಸ್ತಿ ಕಲ್ಲುಗಳಲ್ಲಿ ಸಹಜವಾಗಿ ಇರುವುದಾಗಿದೆ. ಹಾಗೂ ಆ ಒಂದು ಕೈಗಳಲ್ಲಿ ಕೈ ಬಳೆ,ತೋಳುಗಳಲ್ಲಿ ತೋಳ್ಬಳೆಗಳನ್ನು ತೋರಿಸುವುದರ ಮೂಲಕ ಸ್ತ್ರೀ ಪುರುಷ ಸಮಾನ ಚಿಂತನೆಗಳನ್ನು ಹಾಗೂ ವೀರ ಹಾಗೂ ಸತಿಯ ಚಿಂತನೆಗಳನ್ನು ಈ ಮೂಲಕ ತಿಳಿಸುವುದಾಗಿದೆ.

ಎರಡನೇ ಪಟ್ಟಿಯಲ್ಲಿ ಎಡಭಾಗದಲ್ಲಿ ಸತಿ ರೂಪದ ಕೈ ಮುಗಿಯುವ ರೀತಿಯಲ್ಲಿ ,ಹಾಗೂ ಬಲ ಭಾಗದಲ್ಲಿ ವೀರ ನ ಶಿಲ್ಪಕಲೆ ಇದ್ದು ಈ ಶಿಲ್ಪ ಕಲೆಯಲ್ಲೂ ಸಹಾ ಕೈ ಮುಗಿವ ರೀತಿಯಲ್ಲಿದೆ. ಸ್ತ್ರೀ ಶಿಲ್ಪ ಕಲೆಯಲ್ಲಿ ಕೂದಲುಗಳ ಶಿಲ್ಪ‌ ಕಲೆಯನ್ನು ಸಹಾ ಬಹಳ ಸ್ಪಷ್ಟವಾಗಿ ತಿಳಿಯ ಬಹುದಾಗಿದೆ.

ಮೊದಲನೇಯ ಪಟ್ಟಿಯಲ್ಲಿ ಖಡ್ಗ ಹಿಡಿದ ವೀರ ಯೋಧರ ಶಿಲ್ಪದಂತೆ ಕಾಣಲ್ಪಡುವ ಶಿಲ್ಪವಿದೆ.ಕೈಯಲ್ಲಿ ಖಡ್ಗ ಹಿಡಿದು ಯುದ್ಧಕ್ಕೆ ಸಂನ್ನದ್ದರಾದ ಭಂಗಿಯಲ್ಲಿರುವಂತೆ ಕಂಡು ಬರುತ್ತಿದೆ.

ಈ ಹಿಂದಿನ ಕಾಲದಲ್ಲಿ ಸತಿ ಸಹಗಮನ ಪದ್ದತಿ ನಡೆಯುತ್ತಿತ್ತು. ಪತಿ ಸತ್ತಾಗ ಪತ್ನಿಯೂ ಸಹಾ ಸಹಗಮನ ಮಾಡುತ್ತಿದ್ದಳು. ಹಾಗೇ ರಾಜ/ವೀರ ಯೋಧ ಸತ್ತಾಗ ಪತ್ನಿ ಸಹಾ ಸಹಗಮನ ಮಾಡುತ್ತಿದ್ದು, ಅವರ ನೆನಪಿಗಾಗಿ ಇಬ್ಬರ ಶಿಲ್ಪ ಕಲೆಗಳನ್ನು ವೀರ ಹಾಗೂ ಸತಿ ಶಿಲ್ಪ ಕಲೆಗಳನ್ನು ಕಲ್ಲಿನಲ್ಲಿ ಕೆತ್ತಲಾಗುತ್ತಿದ್ದು, ಆದರೆ ಈ ಒಕೈ ಮಾಸ್ತಿಕಲ್ಲಿನಲ್ಲಿ ನಾಲ್ಕನೇ ಪಟ್ಟಿಯಲ್ಲಿ ಯುದ್ಧದ ಸನ್ನಿವೇಶಕ್ಕೆ ತಯಾರಾದ ಯೋಧನಂತೆ ಕಂಡು ಬಂದಿರುವುದು ಇದು ವೀರ ಯೋಧನಂತೆ ಕಾಣಲ್ಪಟ್ಟಿದೆ.

ಈ ಒಕೈ ಮಾಸ್ತಿ ಕಲ್ಲುಗಳನ್ನು ಶ್ರೀ ಪ್ರದೀಪ ಕುಮಾರ್ ಬಸ್ರೂರು ಇವರು ಡಾ.ಶ್ರೀಕಾಂತ್ ಸಿದ್ದಾಪುರ ಇವರ ಮಾಗ೯ದಶ೯ನದಲ್ಲಿ ಸಚೀನ್ ಕಕ್ಕುಂಜೆ, ಕಿರಣ್ ಆಚಾಯ೯ ಉಳ್ಳೂರು, ಗಿರೀಶ್ ತೆಕ್ಕಟ್ಟೆ, ಹಾಗೂ ಸತೀಶ್ ಆಚಾಯ೯ ಉಳ್ಳೂರು, ಸತೀಶ್ ಶಂಕರನಾರಾಯಣ, ಸನತ್ ಪೂಜಾರಿ ಉಳ್ಳೂರು ಮುಖ್ಯವಾಗಿ ಚಿಟ್ಟೆ ರಾಜಗೋಪಾಲ್ ಹೆಗ್ಡೆ ಯವರ ಸಹಾಯದಿಂದ ಪತ್ತೆ ಹಚ್ಚಲಾಗಿದೆ.

“ಗ್ರಾಮೀಣ ಭಾಗದಲ್ಲಿ ಸಿಗಬಹುದಾದ ಇತಿಹಾಸದ ಧಾಖಲೆಗಳು ಅಪಾರ.ಆದರೆ ಗ್ರಾಮೀಣ ಪ್ರದೇಶವನ್ನು ನಗಣ್ಯ ರೀತಿಯಲ್ಲಿ ನೋಡುವುದು ಸರಿಯಲ್ಲ.ಸಿಟಿಯ ಪ್ರದೇಶದಲ್ಲಿ ಅಧ್ಯಯನ ಕೂಡಾ ನಡೆಯುತ್ತಿದ್ದು, ಅದರಿಂದ ಆ ಪ್ರದೇಶ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆಯುತ್ತಿದೆ.ಆದರೆ ಮುಖ್ಯ ಧಾಖಲೆಗಳೆಲ್ಲವೂ ಗ್ರಾಮೀಣ ಪ್ರದೇಶಗಳಲ್ಲಿ ಇರುವುದು ಹಾಗೂ ಅಧ್ಯಯನ ವಾಗದಿರುವುದು ವಿಷಾದನೀಯ.ಯುವ ಜನತೆ ಈ ವಿಚಾರದ ಬಗ್ಗೆ ಅರಿವು ಇರಬೇಕು ಹಾಗೂ ಇತಿಹಾಸದ ಧಾಖಲೆಗಳ ಉಳಿವಿಗೆ ಕಾಯ೯ ಪ್ರ ವೃತ್ತ ರಾಗ ಬೇಕಾಗಿದೆ.ಗ್ರಾಮೀಣ ಪ್ರದೇಶದ ಐತಿಹಾಸಿಕ ಅಧ್ಯಯನ ಇಂದು ಅಗತ್ಯ.ದೇಶದ ಚರಿತ್ರೆಯನ್ನು ಗ್ರಾಮೀಣ ಇತಿಹಾಸದ ಅಧ್ಯಯನ ದೊಂದಿಗೆ ಕಟ್ಟ ಬೇಕಾಗಿದೆ. – ಡಾ.ಶ್ರೀಕಾಂತ್ ಸಿದ್ದಾಪುರ . ಕನ್ನಡ ವಿಭಾಗ ಮುಖ್ಯಸ್ಥರು ಪೂರ್ಣ ಪ್ರಜ್ಞ ಕಾಲೇಜು ಉಡುಪಿ

ಕರಾವಳಿಯ ಈ ಭಾಗ ಅತೀ ಪುರಾತನ ದೇವಾಲಯ ಇರುವ ಭಾಗ ಕೂಡಾ .ಅಂತೆಯೇ ಉಳ್ಳೂರು ೭೪ ಶ್ರೀ ಬನಶಂಕರಿ ದೇವಾಲಯ ಕೂಡಾ ಒಂದು .ಸುಮಾರು ೮೦೦ ವಷವಷ೯ಗಳ ಹಳೆಯ ಈ ದೇವಾಲಯದಲ್ಲೂ ಸಹಾ ಐತಿಹಾಸಿಕ ಕುರುಹಿನಂತೆ ಕಟ್ಟಾಗಿ ಹೋಗಿರುವ ಶಾಸನ ಕಲ್ಲು ಇದೆ.ಈ ಶಾಸನ ಕಲ್ಲುಗಳನ್ನು ಓದುವುದರ ಮೂಲಕ ದೇವಾಲಯದ ಹಾಗೂ ಈ ಭಾಗದ ಇತಿಹಾಸದ ಮೇಲೆ ಬೆಳಕು ಚೆಲ್ಲಬಹುದು.” – ಚಿಟ್ಟೆ ರಾಜ್ ಗೋಪಾಲ್ ಹೆಗ್ಡೆ, ಸ್ಧಳೀಯರು

“ಕರಾವಳಿಯ ಈ ಭಾಗದಲ್ಲಿ ಅನೇಕ ಶಾಸನಗಳು,ವೀರಗಲ್ಲು,ಒಕೈ ಮಾಸ್ತಿಕಲ್ಲುಗಳು ಕಾಣಲ್ಪಟ್ಟಿರುವುದು ಸಹಜವೇ ಸರಿ.ಆದರೆ ಶಾಸನಗಳು ಹಾಗೂ ಇತಿಹಾಸಕ್ಕೆ ಬೇಕಾಗಿರುವ ಮೂಲ ಪರಿಕಲ್ಪನೆಯ ಆಕಾರಗಳು ಅವಶೇಷ ಹೊಂದುತ್ತಿರುವುದು ಬೇಸರದ ಸಂಗತಿ .ಈ ವಿಷಯಕ್ಕೆ ಸಂಭಂಧಿಸಿದಂತೆ ಸವ೯ರ ಸಹಕಾರ ಅತೀ ಅಮೂಲ್ಯ.”– ಪ್ರದೀಪ ಕುಮಾರ್ ಬಸ್ರೂರು

ಕೃಪೆ : ಉದಯವಾಣಿ

 

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)