ಬೈಂದೂರು : ಲಾಕ್‍ಡೌನ್ ಹಿನ್ನಲೆ ಬೈಂದೂರು ಅಭಿವೃದ್ಧಿ ಹಿನ್ನಡೆ

0
386

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು: ಕೊರೊನಾ ವೈರಸ್‍ನಿಂದ ಲಾಕ್‍ಡೌನ್ ಹಿನ್ನಲೆಯಲ್ಲಿ ಬೈಂದೂರು ಅಭಿವೃದ್ಧಿ ಹಿನ್ನಡೆಯಾಗುವ ಲಕ್ಷಣ ಕಂಡು ಬರುತ್ತಿದೆ. ಈ ಬಗ್ಗೆ ಬೈಂದೂರು ಶಾಸಕರು ಬೈಂದೂರಿಗೆ ಮಂಜೂರು ಗೊಂಡ ಮಿನಿ ವಿಧಾನಸೌಧ ಅಗ್ನಿಶಾಮಕ ಠಾಣೆ, ಪಟ್ಟಣ ಪಂಚಾಯತ್ ಮಂಜೂರುಗೊಳಿಸುವಲ್ಲಿ ಇನ್ನಾದರೂ ಕ್ರಮ ಕೈಗೊಳ್ಳಬೇಕಾಗಿದೆ. ಬೈಂದೂರು ಸೋಮೇಶ್ವರ ಬೀಚ್ ಅಭಿವೃದ್ಧಿ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು.

ಈಗ ಬೈಂದೂರಿನಲ್ಲಿ ಮಿನಿ ವಿಧಾನಸೌಧ, ತಾಲೂಕು ಕಛೇರಿಯಲ್ಲಿನ ಆಹಾರ ಇಲಾಖೆ, ಕಂದಾಯ ವಿಭಾಗಕ್ಕೆ ಪೂರ್ಣ ಪ್ರಮಾಣದಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿ ನೇಮಕ, ಬೈಂದೂರಿನ ನ್ಯಾಯಾಲಯ, ಬೈಂದೂರು ತಾಲೂಕು ಪಂಚಾಯತ್, ಬೈಂದೂರು ಪಟ್ಟಣ ಪಂಚಾಯತ್ ಕೂಡಲೇ ರಚನೆಯಾಗಬೇಕು. ಕಳೆದ ಬಾರಿ ಮಂಜೂರುಗೊಂಡ 350 ಕೋಟಿ ಅನುದಾನದ ಕಾಮಗಾರಿ ಆರಂಭಗೊಳ್ಳಬೇಕಾಗಿದೆ. ಈ ಹಿಂದುಳಿದ ಕ್ಷೇತ್ರ ಬೈಂದೂರು ತಾಲೂಕಿಗೆ ಮಂಜೂರುಗೊಂಡ ಪಟ್ಟಣ ಪಂಚಾಯತ್ ಹಾಗೂ ಅಗ್ನಿಶಾಮಕ ಠಾಣೆ, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಮತ್ತು ಡಿಪೋ ಹಾಗೂ 100 ಹಾಸಿಗೆಯ ತಾಲೂಕು ಸರ್ಕಾರಿ ಆಸ್ಪತ್ರೆ ಕೂಡಲೇ ಮಂಜೂರುಗೊಂಡು ತಾಲೂಕಿಗೆ ಅನುದಾನ ಘೋಷಿಸಬೇಕೆಂದು ಹಾಗೂ ಬೈಂದೂರು ತಾಲೂಕಿಗೆ ಅನುದಾನ ಘೋಷಿಸಬೇಕೆಂದು ಒಟ್ಟಿನಲ್ಲಿ ಪೂರ್ಣ ಬೈಂದೂರು ಪ್ರಮಾಣದ ತಾಲೂಕು ರಚನೆಯಾಗಬೇಕೆಂದು ಜನತೆ ಈ ಮೂಲಕ ಸರ್ಕಾರವನ್ನು ಈ ಮೂಲಕ ಆಗ್ರಹಿಸಿದೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)