ಇಂದು ಉಡುಪಿಯಲ್ಲಿ 6 ಮಂದಿಗೆ ಕೊರೋನ ಪಾಸಿಟಿವ್

0
303

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಉಡುಪಿ : ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಪರಾಹ್ನ 12 ಗಂಟೆಗೆ ಬಿಡುಗಡೆಗೊಳಿಸುವ ಕೋವಿಡ್-19ರ ಅಪರಾಹ್ನದ ಮಾಹಿತಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಹೊಸದಾಗಿ ಆರು ಮಂದಿಯಲ್ಲಿ ಕೊರೋನ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.

ಇಲಾಖೆ ಇವುಗಳ ವಿವರಗಳನ್ನು ನೀಡಿಲ್ಲ. ಜಿಲ್ಲೆಯಲ್ಲಿ ನಿನ್ನೆಯವರೆಗೆ 15 ಪ್ರಕರಣಗಳು ವರದಿಯಾಗಿದ್ದು, ಇಂದು ಬೆಳಗಿನ 6 ಸೇರಿದಂತೆ ಒಟ್ಟು 21 ಪ್ರಕರಣಗಳು ಜಿಲ್ಲೆಯಿಂದ ವರದಿಯಾಗಿವೆ. ಜಿಲ್ಲೆಯಲ್ಲಿ ವರದಿಯಾದ ಇನ್ನೊಂದು ಪ್ರಕರಣದಲ್ಲಿ ಚಿತ್ರದುರ್ಗದಿಂದ ಕ್ಯಾನ್ಸರ್ ಚಿಕಿತ್ಸೆಗೆಂದು ಮೇ 16ರಂದು ಕೆಎಂಸಿಗೆ ದಾಖಲಾದ 16ರಂದು ದಾಖಲಾದ 17ರ ಹರೆಯದಲ್ಲಿ ಬಾಲಕಿಯಲ್ಲಿ ನಿನ್ನೆ ಕೊರೋನ ಸೋಂಕು ಪತ್ತೆಯಾಗಿತ್ತು. ಆಕೆಗೆ ಕೆಎಂಸಿಯಲ್ಲೇ ಚಿಕಿತ್ಸೆ ಮುಂದುವರಿಸಲಾಗಿದೆ. ಇಂದು ವರದಿಯಾದ ಒಂದು ಪ್ರಕರಣದಲ್ಲಿ ಮುಂಬೈಯಿಂದ ಊರಿಗೆ ಆಗಮಿಸಿದ ಬೈಂದೂರಿನ 74ರ ಹರೆಯದ ವೃದ್ಧರಲ್ಲಿ ಕೊರೋನ ಸೋಂಕು ಪತ್ತೆಯಾಗಿದೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.

ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)