ಕುಂದಾಪುರ, ಬೈಂದೂರು: ವಲಸೆ ಕಾರ್ಮಿಕರು ತವರಿಗೆ

0
646

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಕುಂದಾಪುರ: ಕುಂದಾಪುರ ಹಾಗೂ ಬೈಂದೂರು ತಾಲೂಕಿನ 500 ಕಾರ್ಮಿಕರು, ನಾಗರಿಕರು ಉತ್ತರಪ್ರದೇಶಕ್ಕೆ ರವಿವಾರ ಪ್ರಯಾಣ ಬೆಳೆಸಿದರು.

ವಿವಿಧೆಡೆ ನೆಲೆಸಿದ್ದ ಉತ್ತರಪ್ರದೇಶದ ನಾಗರಿಕರು, ಕಾರ್ಮಿಕರು, ವಲಸಿಗರು ಶ್ರಮಿಕ್‌ ರೈಲಿನಲ್ಲಿ ರವಿವಾರ ಸಂಜೆ 5 ಗಂಟೆಗೆ ಉಡುಪಿ ರೈಲು ನಿಲ್ದಾಣದಿಂದ ತೆರಳಲು ಕುಂದಾಪುರದ ನೆಹರು ಮೈದಾನ ಬಳಿಕ ಶಾಲೆಯಲ್ಲಿ ಸೇರಿದ್ದರು. ಇವರನ್ನು ಸರಕಾರಿ ಇಲಾಖಾಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ, ಊಟ ನೀಡಿ ಬಸ್‌ಗಳ ಮೂಲಕ ರೈಲು ನಿಲ್ದಾಣಕ್ಕೆ ಕಳುಹಿಸಿಕೊಟ್ಟರು. ತಹಶೀಲ್ದಾರ್‌ ತಿಪ್ಪೇಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್‌ ಕಾಮತ್‌, ಸಮಾಜ ಕಲ್ಯಾಣಾಧಿಕಾರಿ ರಾಘವೇಂದ್ರ ವರ್ಣೇಕರ್‌, ಆಹಾರ ನಿರೀಕ್ಷಕ ಪ್ರಕಾಶ್‌, ಪೊಲೀಸ್‌ ಇಲಾಖಾಧಿಕಾರಿಗಳು ಹಾಜರಿದ್ದರು. ರೈಲು ಕುಂದಾಪುರ ಮೂಲಕ ಹಾದು ಹೋಗುವುದಾದರೂ ನಿಲುಗಡೆರಹಿತ ರೈಲು ಇದಾದ ಕಾರಣ ಉಡುಪಿಗೆ ಕರೆದೊಯ್ದು ಬಿಡಲಾಯಿತು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)